ಐಪಿಲ್ ಟೈಟಲ್ ಪ್ರಾಯೋಜಕತ್ವ ಮತ್ತೆ ವಿವೋ ತೆಕ್ಕೆಗೆ

ಚೀನಾದ ಮೊಬೈಲ್ ತಯಾರಿಕಾ ಕಂಪನಿ ವಿವೋ, ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೈಟಲ್ ಪ್ರಾಯೋಜಕತ್ವವನ್ನು 2018 ರಿಂದ 2022 ರವರೆಗೆ ಮತ್ತೆ ತನ್ನಲ್ಲೇ ಉಳಿಸಿಕೊಂಡಿದೆ. ಈ ಹಿಂದಿನ ಬಿಡ್ ಗಿಂತ ಈ ಬಾರಿ ಶೇ.554 ರಷ್ಟು ಅಂದರೆ ಒಟ್ಟು 2,199 ಕೋಟಿ ರೂಪಾಯಿಗಳಿಗೆ ಬಿಡ್ ಸಲ್ಲಿಸಿ ತನ್ನದಾಗಿಸಿಕೊಂಡಿದೆ. ವಿವೋ ನಂತರ ಒಪ್ಪೋ ಮೊಬೈಲ್ಸ್ ಹೆಚ್ಚು ಬಿಡ್ ಸಲ್ಲಿಸಿದ್ದು, ಅದು ಬಿಡ್ ಮಾಡಿದ್ದ ಮೊತ್ತ ರೂ.1,430 ಕೋಟಿ.

ಐಪಿಎಲ್  ಪ್ರಾಯೋಜಕತ್ವ ಹಕ್ಕುಗಳ ಟೆಂಡರ್ ಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅರ್ಜಿಗಳನ್ನು ಆಹ್ವಾನಿಸಿತ್ತು. ಆಗಸ್ಟ್ 1, 2017 ರಿಂದ ಪ್ರಾಯೋಜಕತ್ವದ ಹಕ್ಕುಗಳ ಅವಧಿ ಆರಂಭವಾಗಿ ಜುಲೈ 31, 2022ಕ್ಕೆ ಮುಗಿಯುತ್ತದೆ.

ಈ ವರ್ಷದ ಆರಂಭದಲ್ಲಿ ಪ್ರೊ ಕಬಡ್ಡಿ ಲೀಗ್ ನ ಟೈಟಲ್ ಪ್ರಾಯೋಜಕತ್ವದ ಹಕ್ಕುಗಳನ್ನೂ ರೂ.300 ಕೋಟಿ ನೀಡಿ ವಿವೋ ಮೊಬೈಲ್ಸ್ ತನ್ನದಾಗಿಸಿಕೊಂಡಿತ್ತು.