ವೊಡಾಫೋನ್ ಗ್ರಾಹಕರು 16 ರೂ. ಪಾವತಿಸಿ, ಪಡೆಯಿರಿ ಅನ್ಲಿಮಿಟೆಡ್ ಡಾಟಾ |News Mirchi

ವೊಡಾಫೋನ್ ಗ್ರಾಹಕರು 16 ರೂ. ಪಾವತಿಸಿ, ಪಡೆಯಿರಿ ಅನ್ಲಿಮಿಟೆಡ್ ಡಾಟಾ

​16 ರೂಪಾಯಿ ಪಾವತಿಸಿ ಒಂದು ಗಂಟೆ ಕಾಲ ಅನಿಯಮಿತ 3ಜಿ ಅಥವಾ 4 ಜಿ ಡಾಟಾ ಪಡೆಯುವ ಕೊಡುಗೆಯನ್ನು “ಸೂಪರ್ ಅವರ್” ಹೆಸರಿನಲ್ಲಿ ವೊಡಾಫೋನ್ ಪರಿಚಯಿಸುತ್ತಿದೆ. ಈ ಕೊಡುಗೆ ವೊಡಾಫೋನ್ ಪ್ರೀಪೇಯ್ಡ್ ಗ್ರಾಹಕರಿಗೆ ಅನ್ವಯವಾಗುತ್ತದೆ. “ಸೂಪರ್ ಅವರ್” ಕೊಡುಗೆಯ ಮೂಲಕ ಗ್ರಾಹಕರು ಅನ್‌ಲಿಮಿಟೆಡ್ ಡಾಟಾ ಬಳಸಬಹುದು. ದಿನಕ್ಕೆ ಇಂತಿಷ್ಟೇ ಬಾರಿ ಈ ಪ್ಯಾಕ್ ಖರೀದಿಸಬೇಕು ಎಂಬ ನಿಯಮವಿಲ್ಲ.

ಈ ಕೊಡುಗೆಯು ಜನವರಿ 7 ರಂದು ಲಾಂಚ್ ಆಗಿದ್ದು, ಜನವರಿ 9 ರಿಂದ ಎಲ್ಲಾ ಸರ್ಕಲ್ ಗಳಲ್ಲಿ ಲಭ್ಯವಾಗಲಿದೆ. ಅಂದ ಹಾಗೆ ಈ ಕೊಡುಗೆ ಬಿಹಾರ, ಛತ್ತೀಸ್ ಗಡ, ಮಧ್ಯಪ್ರದೇಶ, ಜಮ್ಮು ಕಾಶ್ಮೀರ, ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ಲಭ್ಯವಿಲ್ಲ.

  • No items.

ಇದರ ಜೊತೆಗೆ ರೂ. 7 ಪಾವತಿಸಿ ವೊಡಾಫೋನ್ ನಿಂದ ವೊಡಾಫೋನ್ ಗೆ ಒಂದು ಗಂಟೆ ಕಾಲ ಅನಿಯಮಿತ ಕರೆ ಮಾಡುವ ಆಫರ್ ಕೂಡಾ ಹೊರತಂದಿದೆ.

Loading...
loading...
error: Content is protected !!