ನನ್ನನ್ನು ಗೆಲ್ಲಿಸಿದರೆ ಉತ್ತಮ ಗುಣಮಟ್ಟದ ದನದ ಮಾಂಸ ಸರಬರಾಜು: ಬಿಜೆಪಿ ಅಭ್ಯರ್ಥಿ – News Mirchi

ನನ್ನನ್ನು ಗೆಲ್ಲಿಸಿದರೆ ಉತ್ತಮ ಗುಣಮಟ್ಟದ ದನದ ಮಾಂಸ ಸರಬರಾಜು: ಬಿಜೆಪಿ ಅಭ್ಯರ್ಥಿ

ಬಿಜೆಪಿ ಆಡಳಿತದ ಗುಜರಾತ್, ಉತ್ತರಪ್ರದೇಶ ಮುಂತಾದ ಕಡೆ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸುತ್ತಿದ್ದಾರೆ. ಗೋಹತ್ಯೆ ನಡೆಸಿದರೆ ನೇಣಿಗೆ ಹಾಕ್ತೀವಿ ಎಂದು ನಿನ್ನೆಯಷ್ಟೇ ಛತ್ತೀಸ್ಗಡ ಮುಖ್ಯಮಂತ್ರಿ ರಮಣ್ ಸಿಂಗ್ ಹೇಳಿದ್ದಾರೆ. ಆದರೆ ಕೇರಳದ ಮಲಪ್ಪುರಂ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಮಾತ್ರ ಇದಕ್ಕೆ ವಿಭಿನ್ನವಾದ ಭರವಸೆ ನೀಡಿದ್ದಾರೆ.

ತನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದೇ ಆದರೆ ಉತ್ತಮ ಗುಣಮಟ್ಟದ ದನದ ಮಾಂಸ ಸರಬರಾಜು ಆಗುವಂತೆ ನೋಡಿಕೊಳ್ಳುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀಪ್ರಕಾಶ್ ಮತದಾರರಿಗೆ ಭರವಸೆ ನೀಡಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಶ್ರೀಪ್ರಕಾಶ್, ಈ ಹಿಂದೆ ಹಲವು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಗೋಹತ್ಯೆ ನಿಷೇಧಕ್ಕೆ ಒತ್ತಾಯಿಸಿದ್ದರು ಎಂದು ಆರೋಪಿಸಿದ್ದಾರೆ.

Loading...

Leave a Reply

Your email address will not be published.