ವ್ಯಾಸ ಮಹಾಭಾರತ – ಭಾಗ 1 – News Mirchi

ವ್ಯಾಸ ಮಹಾಭಾರತ – ಭಾಗ 1

ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್ |
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್ |

ನಾರಾಯಣನನ್ನೂ ನರಶ್ರೇಷ್ಠನಾದ ಅರ್ಜುನನನ್ನೂ ಸರಸ್ವತೀ ದೇವಿಯನ್ನೂ ನಮಸ್ಕರಿಸಿದ ನಂತರದಲ್ಲಿ ಜಯವನ್ನು “” ವನ್ನು ಪ್ರವಚನ ಮಾಡಬೇಕು… ಈ ಪ್ರವಚನಕ್ಕೂ ಮುನ್ನ ಮಹಾಭಾರತದ ಶ್ರೇಷ್ಠತೆಯನ್ನು ಸಾರುವ ಕೆಲವೊಂದು ಶ್ಲೋಕಗಳನ್ನು ನೋಡೋಣ…

ವೇದಾ ಯೋಗಃ ಸವಿಜ್ಞಾನೋ ಧರ್ಮೋsರ್ಥಃ ಕಾಮ ಏವ ಚ |
ಧರ್ಮಕಾಮಾರ್ಥಯುಕ್ತಾನಿ ಶಾಸ್ತ್ರಾಣಿ ವಿವಿಧಾನಿಚ |
ಲೋಕಯಾತ್ರಾವಿಧಾನಂ ಚ ಸರ್ವಂ ತತ್ ದೃಷ್ಟವಾನೃಷಿಃ |
ವಿಸ್ತೀರ್ಯೇತನ್ಮಹಾಜ್ಞಾನಮೃಷಿಃ ಸಂಕ್ಷಿಪ್ಯ ಚಾಬ್ರವೀತ್ |
ಇಷ್ಟಂ ಹಿ ವಿದುಷಾಂ ಲೋಕೇ ಸಮಾಸವ್ಯಾಸಧಾರಣಮ್

ಅನ್ನೋದು ಧರ್ಮಮಯವಾದ ಸಂಸ್ಕೃತಿಯ ಒಳ ಹೊರ ರೂಪುಗಳೆರಡನ್ನೂ ತೋರಿಸಿಕೊಡುವ ಪಾರದರ್ಶಕವಾದ ಮಣಿದರ್ಪಣ, ಜನಾಂಗದ ಎಲ್ಲಾ ಆಸೆ, ಅಕಾಂಕ್ಷೆ ಸಾಧನೆ ಸಿದ್ಧಿಗಳ ಅನುಭವಗಳನ್ನು ಏಕತ್ರ ಸೇರಿಸಿಕೊಂಡಿರುವ ಭವ್ಯ ಭಾಂಡಾಗಾರ, ಎಲ್ಲಾ ಪುರುಷಾರ್ಥಗಳ ಕಲ್ಪತರು, ವೇದವೇದಾಂಗ ಇತಿಹಾಸ ಲೋಕವ್ಯವಹಾರ ಆತ್ಮ ವ್ಯವಹಾರ ಎಲ್ಲಾ ಶಾಸ್ತ್ರಗಳ ಸಾರ ಸರ್ವಸ್ವವಾಗಿ ಅವುಗಳ ತತ್ವವನ್ನು ಸಂಕ್ಷೇಪವಾಗಿಯೂ ಸವಿಸ್ತಾರವಾಗಿಯೂ ನಿರೂಪಿಸುವ ವಿಶ್ವಕೋಶ.

ಅಸ್ಯ ಕಾವ್ಯಸ್ಯ ಕವಯೋ ನ ಸಮರ್ಥಾ ವಿಶೇಷಣೇ |
ವಿಶೇಷೇಣ ಗೃಹಸ್ಥಸ್ಯ ಶೇಷಾಸ್ತ್ರಯಾ ಇವಾಶ್ರಮಾಃ |
ಅಲಂಕೃತಂ ಶುಭೈಃ ಶಬ್ದೈ: ಸಮರ್ಥೈರ್ದಿವ್ಯಮಾನುಷೈಃ |
ಸರ್ವೇಷಾಂ ಕವಿಮುಖ್ಯಾನಾಮುಪಜೀವ್ಯೋ ಭವಿಷ್ಯತಿ |
ಪರ್ಜನ್ಯ ಇವ ಭೂತನಾಮಕ್ಷಯೋ ಭಾರತದ್ರುಮಃ ||

ಉಳಿದ ಮೂರೂ ಆಶ್ರಮಗಳೂ ಗೃಹಸ್ಥಾಶ್ರಮವನ್ನು ಮೀರಿಸಲಾರವು, ಅಂತೆಯೇ ಉಳಿದ ಯಾವ ಕಾವ್ಯವೂ ಇದನ್ನು ಮೀರಿಸಲಾರದು, ದಿವ್ಯವೂ ಮಾನುಷವೂ ಆದ ಸಮರ್ಥ ಶಬ್ದಗಳೂ ಶುಭ ಶಬ್ದಗಳೂ ಅಲಂಕರಿಸಿರುವ ಕಾವ್ಯವಿದು. ಪ್ರಾಣಿಗಳೆಲ್ಲವೂ ಮಳೆಗರೆಯುವ ಮೋಡಗಳನ್ನು ಆಶ್ರಯಿಸುವಂತೆ ಕವಿಗಳೆಲ್ಲರೂ ಇದನ್ನು ಆಶ್ರಯಿಸಿದ್ದಾರೆ. ಅಳಿವಿಲ್ಲದ ಮಹಾವೃಕ್ಷ ಈ ಮಹಾಭಾರತ.

Comments (wait until it loads)
Loading...
class="clear">
error: Content is protected !!

News Mirchi is Stephen Fry proof thanks to caching by WP Super Cache