ವ್ಯಾಸ ಮಹಾಭಾರತ - ಭಾಗ 2 |News Mirchi

ವ್ಯಾಸ ಮಹಾಭಾರತ – ಭಾಗ 2

ಅಜ್ಞಾನತಿಮಿರಾಂಧಸ್ಯ ಲೋಕಸ್ಯ ತು ವಿಚೇಷ್ಟತಃ |
ಜ್ಞಾನಾಂಜನಶಲಾಕಾಭಿರ್ನೇತ್ರೋನ್ಮೀಲನಕಾರಕಮ್ |
ಧರ್ಮಾರ್ಥಕಾಮಮೋಕ್ಷಾರ್ಥೈಃ ಸಮಾಸವ್ಯಾಸ ಕೀರ್ತನೈಃ |
ತಥಾ ಭಾರತ ಸೂರ್ಯೇಣ ನೃಣಾಂ ವಿನಿಹಿತಂ ತಮಃ ||
ಪುರಾಣಪೂರ್ಣ ಚಂದ್ರೇಣ ಶ್ರುತಿಜ್ಯೋತ್ಸ್ನಾ ಪ್ರಕಾಶಿತಃ |
ನೃಬುದ್ಧಿಕೈರವಾಣಾಂ ಚ ಕೃತಮೇತತ್ ಪ್ರಕಾಶನಮ್ |
ಲೋಕ ಗರ್ಭಗೃಹಂ ಕೃತ್ಸ್ನಂ ಯಥಾವತ್ ಸಂಪ್ರಕಾಶಿತಮ್ ||

ಇದರ ಮಹಿಮೆ ಅಪಾರವಾದುದು. ಅಜ್ಞಾನದ ಕತ್ತಲೆಯಿಂದ ಕುರುಡಾಗಿ ಹಾದಿ ತಿಳಿಯದೇ ಮಿಡುಕಾಡುತ್ತಿರುವ ಲೋಕದ ಕಣ್ಣುಗಳನ್ನು ಜ್ಞಾನಾನಂದದ ಕಡ್ಡಿಗಳಿಂದ ತೆರೆಸಿದ ಹೆಗ್ಗಳಿಕೆ ಇದರದು. ಧರ್ಮ ಅರ್ಥ ಕಾಮ ಮೋಕ್ಷಗಳನ್ನು ಸಂಕ್ಷೇಪವಾಗಿ ವಿಸ್ತಾರವಾಗಿ ಬಗೆಬಗೆಯಾಗಿ ಹೇಳಿ, ಜನರ ತಮಸ್ಸನ್ನು ಹೋಗಲಾಡಿಸುವ ಸೂರ್ಯನಂತೆ, ಬೆಳ್ದಿಂಗಳನು ಪಸರಿಸುವ ಪೂರ್ಣ ಚಂದ್ರನಂತೆ ಬೆಳಗುತ್ತಿದೆ ಇದು. ಮೋಹದ ಆವರಣವನ್ನು ಕಳೆದು ಹಾಕಿ ಲೋಕವೆಂಬ ಗರ್ಭಗುಡಿಯನ್ನು ಪೂರ್ತಿ ಬೆಳಗಿದ ಪ್ರದೀಪವಿದು.

  • No items.

The Mahabharatha has opened me as it were, a new world and I have been surprised beyond measure at the wisdom, truth, knowledge and love of the right which I have found displayed in its pages. Not only so, but I have found many of the truths which my own heart has taught me in regard to the supreme being and his creations set forth in beautiful clear language. —J.A.Hassler

It is one of the priceless treasure of the East. —Edwin Arnold

ಧರ್ಮೇ ಚ ಅರ್ಥೇ ಚ ಕಾಮೇ ಚ ಮೋಕ್ಷೇ ಚ ಭರತರ್ಷಭ |
ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ಕ್ವಚಿತ್ ||

ಧರ್ಮ ಅರ್ಥ ಕಾಮ ಮೋಕ್ಷಗಳ ವಿಷಯದಲ್ಲಿ ಈ ಗ್ರಂಥದಲ್ಲಿ ಏನಿದೆಯೋ ಅದು ಬೇರೆಡೆಯಲ್ಲಿದೆ. ಇಲ್ಲಿ ಏನು ಇಲ್ಲವೋ ಅದು ಬೇರೆ ಎಲ್ಲಿಯೂ ಇಲ್ಲ

ನಮೋ ಧರ್ಮಾಯ ಮಹತೇ ನಮಃ ಕೃಷ್ಣಾಯ ವೇಧಸೇ |
ಬ್ರಾಹ್ಮಣೇಭ್ಯೋ ನಮಸ್ಕೃತ್ಯ ಧರ್ಮಾನ್ವಕ್ಷ್ಯಾಮಿ ಶಾಶ್ವತಾನ್ ||

ಪುರುಷಾರ್ಥಗಳಲ್ಲಿ ಧರ್ಮಕ್ಕೇ ಅಗ್ರಸ್ಥಾನ . ಇದರ ಸರ್ವಶ್ರೇಷ್ಠತೆಯನ್ನು ಮುಕ್ತಕಂಠದಿಂದ ಘೋಷಣೆ ಮಾಡುತ್ತದೆ ಮಹಾಭಾರತ. ಧರ್ಮದ ಪ್ರಣಾಮದಿಂದಲೇ ಧರ್ಮಪ್ರಾಣರಾದ ಭೀಷ್ಮರು ತಮ್ಮ ಉಪದೇಶವನ್ನು ಪ್ರಾರಂಭಿಸುತ್ತಾರೆ.

ಧಾರಣಾದ್ಧರ್ಮ ಇತ್ಯಾಹುರ್ಧರ್ಮೇಣ ವಿಧ್ಯತಾಃ ಪ್ರಜಾಃ ||

ಯಾವುದು ಎಲ್ಲವನ್ನೂ ಹೊತ್ತಿದೆಯೋ ಅದೇ ಧರ್ಮ, ಎಂದು ಧರ್ಮದ ಲಕ್ಷಣವನ್ನು ಹೇಳಿ, ಅರ್ಥ, ಕಾಮಗಳಿಗೂ ಅದು ಕಾರಣವಾಗಿರುವುದಾದರೂ ಜನರು ಅದನ್ನೇಕೆ ಸೇವಿಸುವುದಿಲ್ಲ ಎಂದು ಧರ್ಮ ಮೂರ್ತಿ ವ್ಯಾಸರು ಕೊರಗುತ್ತಾರೆ.

ಧರ್ಮಾದರ್ಥಶ್ಚ ಕಾಮಶ್ಚ ಸ ಕಿಮರ್ಥಂ ನ ಸೇವ್ಯತೇ |

ಧರ್ಮವನ್ನು ಯಥಾವತ್ತಾಗಿ ಆಚರಿಸುತ್ತಿದ್ದರೆ, ಅರ್ಥ ಕಾಮಗಳೂ ಅನುಷಂಗಿಕವಾಗಿ ತಾವಾಗಿಯೇ ಸಿದ್ಧಿಸುತ್ತವೆಯೆಂದು ಸ್ಪಷ್ಟವಾಗಿ ಎಲ್ಲರಿಗೂ ಮನವರಿಕೆಯಾಗುವ ದೃಷ್ಟಾಂತದಿಂದ ಪ್ರತಿಪಾದಿಸುತ್ತದೆ ಈ ಧರ್ಮಗ್ರಂಥ

– ಗುರುಪ್ರಸಾದ್ ಆಚಾರ್ಯ

Loading...
loading...
error: Content is protected !!