ವ್ಯಾಸ ಮಹಾಭಾರತ – ಭಾಗ 37 ಆದಿಪರ್ವ (ಸಂಭವಪರ್ವ)

” ಈ ಹಿಂದೆ ನಿನಗೆ ಬ್ರಹ್ಮನ ಆರು ಜನ ಮಾನಸ ಪುತ್ರರ ಬಗ್ಗೆ ಹೇಳಿದ್ದೆ. ಆ ನಂತರದವ ಅಂದರೆ ಏಳನೆಯವ ಸ್ಥಾಣು. ಅವನಿಗೆ ಹನ್ನೊಂದು ಮಕ್ಕಳು. ಮೃಗವ್ಯಾಧ, , ನಿಋತಿ, ಅಜೈಕಪಾದ, ಅಹಿರ್ಬುಧ್ನ್ಯ, ಪಿನಾಕೀ, ದಹನ, ಈಶ್ವರ, ಕಪಾಲಿ, ಸ್ಥಾಣು, ಭವ. ಇವರನ್ನೇ ಏಕಾದಶ ರುದ್ರರೆನ್ನುವರು. ಅಂಗಿರಸನಿಗೆ ಬ್ರಹಸ್ಪತಿ, ಉತಥ್ಯ ಮತ್ತು ಸಂವರ್ತ ಎಂಬ ಮೂರು ಮಕ್ಕಳು.

ಅತ್ರಿಗೆ ಬಹುಮಂದಿ ಮಕ್ಕಳಿದ್ದರೂ ಅವರೆಲ್ಲ ವೇದವಿದರಾಗಿ ಶಾಂತಾತ್ಮರಾಗಿದ್ದರು. , ಕಿನ್ನರ, ಯಕ್ಷ, ವಾನರರು ಪುಲಸ್ತ್ಯಮಹರ್ಷಿಯ ಮಕ್ಕಳಾಗಿದ್ದರು. ಶರಭಗಳು, ಸಿಂಹಗಳು, ಕಿಂಪುರುಷರು, ವ್ಯಾಘ್ರಗಳು, ಕರಡಿಗಳು, ಈಹಾಮೃಗಗಳು ಪುಲಹನ ಮಕ್ಕಳು. ಕ್ರತುವಿನ ಮಕ್ಕಳು ಪವಿತ್ರತಮರು ಸತ್ಯವ್ರತಪಾರಾಯಣರಾಗಿದ್ದರು. ಇವರಿಗೆ ವಾಲಖಿಲ್ಯರೆಂದು ಹೆಸರು. ಬ್ರಹ್ಮನ ಬಲಗಾಲಿನ ಅಂಗುಷ್ಠದಿಂದ ದಕ್ಷನು ಹುಟ್ಟಿದನು. ಬ್ರಹ್ಮನ ಎಡಗಾಲಿನ ಅಂಗುಷ್ಠದಿಂದ ದಕ್ಷನ ಭಾರ್ಯೆ ಹುಟ್ಟಿದಳು. ಅವರಿಬ್ಬರ ದಾಂಪತ್ಯದಲ್ಲಿ ಐವತ್ತು ಮಂದಿ ಹೆಣ್ಣು ಮಕ್ಕಳು ಹುಟ್ಟಿದರು. ದಕ್ಷನು ತನ್ನ ಹೆಣ್ಣು ಮಕ್ಕಳಲ್ಲಿ ಹತ್ತು ಜನರನ್ನ ಧರ್ಮನಿಗೂ, ಇಪ್ಪತ್ತೇಳು ಜನರನ್ನ ಚಂದ್ರನಿಗೂ( ಲೋಕವ್ಯವಹಾರದ ನಿರ್ವಹಣಾರ್ಥವಾಗಿ ಇವರನ್ನ ನಕ್ಷತ್ರಗಳೆಂದು ಕರೆಯುತ್ತಾರೆ), ಹದಿಮೂರು ಜನರನ್ನ ಕಶ್ಯಪನಿಗೂ ಮದುವೆಮಾಡಿಕೊಟ್ಟನು.

ಬ್ರಹ್ಮನ ಮತ್ತೊಬ್ಬ ಮಗ ಮನು. ಮನುವಿನ ಮಗ ಪ್ರಜಾಪತಿ. ಪ್ರಜಾಪತಿಗೆ ಎಂಟು ಜನ ಮಕ್ಕಳು. ಧೂಮ್ರ ಎಂಬ ಹೆಂಡತಿಯಿಂದ ಧರ, ದ್ರುವ ಎಂಬುವವರೂ ಮನಸ್ವಿನಿಯಲ್ಲಿ ಸೋಮನೂ,ರತಾ ಎಂಬುವವಳಲ್ಲಿ ಅಹಸ್ಸು ಎಂಬುವವನೂ,ಶ್ವಾಸಾ ಎಂಬುವವಳಲ್ಲಿ ಅನಿಲನೂ, ಶಾಂಡಿಲ್ಯ ಎಂಬುವವಳಲ್ಲಿ ಅನಲನೂ ಮತ್ತು ಪ್ರಭಾತ ಎಂಬುವವಳಲ್ಲಿ ಪ್ರತ್ಯೂಷ, ಪ್ರಭಾಸರು ಹುಟ್ಟಿದರು. ಇವರೇ ಅಷ್ಟವಸುಗಳು. ಅವರಲ್ಲಿ ಮೊದಲನೆಯವನಾದ ಧರನಿಗೆ ದ್ರವಿಣ, ಹುತಹವ್ಯವಹರೆಂಬ ಇಬ್ಬರು ಮಕ್ಕಳಾದರು. ಧ್ರುವನ ಮಗ ಕಾಲ. ಸೋಮನ ಮಗನ ಹೆಸರು ವರ್ಚಸ. ವರ್ಚಸನ ಮಗ ವರ್ಚಸ್ವೀ. ವರ್ಚಸ್ವೀಗೆ ಮನೋಹರೆಯೆಂಬ ಪತ್ನಿಯಲ್ಲಿ ಶಿಶಿರ, ಪ್ರಾಣ, ರಮಣ ಎಂಬ ಮೂವರು ಮಕ್ಕಳು ಹುಟ್ಟಿದರು.

ಅಹಸ್ ಎಂಬುವವನಿಗೆ ಜ್ಯೋತಿ, ಶಮ, ಶಾಂತ ಮತ್ತು ಮುನಿ ಎಂಬ ನಾಲ್ವರು ಮಕ್ಕಳು. ಅನಲ ಅಥವಾ ಅಗ್ನಿಯ ಮಕ್ಕಳು ಕುಮಾರ, ಶಾಖ, ವಿಶಾಖ, ನೈಗಮೇಯರು. ಅನಿಲನ ಪತ್ನಿ ಶಿವಾ, ಅವಳಲ್ಲಿ ಮನೋರಮಾ, ಅವಿಜ್ಞಾತಗತಿ ಎಂಬ ಇಬ್ಬರು ಮಕ್ಕಳು ಹುಟ್ಟಿದರು. ಪ್ರತ್ಯೂಷನ ಮಗ ದೇವಲ. ಪ್ರಭಾಸನ ಕೈ ಹಿಡಿದವಳು ಬೃಹಸ್ಪತಿಯ ತಂಗಿ. ಅವರಿಬ್ಬರ ದಾಂಪತ್ಯದ ಫಲವಾಗಿ ವಿಶ್ವಕರ್ಮನು ಹುಟ್ಟಿದನು. ಅವನು ಶಿಲ್ಪವಿದ್ಯೆಗೆ ಪ್ರಜಾಪತಿಯಾಗಿದ್ದನು. ಆತ ನಯನಮನೋಹರವಾದ ಸಾವಿರಾರು ದೇವಾಲಯಗಳನ್ನು ನಿರ್ಮಿಸಿ ಕೊಡುತ್ತಿದ್ದನು ಮತ್ತು ದೇವತೆಗಳಿಗೆ ಆಭರಣವನ್ನೂ ವಿಮಾನವನ್ನೂ ತಯಾರಿಸಿಕೊಟ್ಟನು.

ಸುರಾಸುರರೂ ಕಶ್ಯಪನ ಮಕ್ಕಳೇ… ಅದಿತಿಯಲ್ಲಿ ದ್ವಾದಶಾದಿತ್ಯರು ಹುಟ್ಟಿದರೆಂದೂ ಅವರಲ್ಲಿ ಹತ್ತನೆಯವನು ಸವಿತೃ ಎಂದು ಹಿಂದೆಯೇ ಹೇಳಿದ್ದೆ. ತ್ವಷ್ಟೃವಿನ ಪುತ್ರಿಯಾದ ಸಂಜ್ಞಾ ಎಂಬುವವಳು ಸವಿತೃವಿನ ಹೆಂಡತಿ. ಇವರ ಮಕ್ಕಳೇ ಅಶ್ವಿನೀ ಕುಮಾರರು. ಬ್ರಹ್ಮನ ಬಲಗಡೆಯ ಸ್ತನವನ್ನು ಭೇದಿಸಿಕೊಂಡು ಧರ್ಮನು ಹೊರಗೆ ಬಂದನು. ಧರ್ಮನಿಗೆ ಶಮ, ಕಾಮ, ಹರ್ಷ ಎಂಬ ಮೂವರು ಮಕ್ಕಳು. ಇದರಲ್ಲಿ ಕಾಮನ ಹೆಂಡತಿ ರತಿ, ಶಮನ ಹೆಂಡತಿ ಪ್ರಾಪ್ತಿ, ಹರ್ಷನ ಹೆಂಡತಿ ನಂದಾ. ಬ್ರಹ್ಮನ ಹೃದಯವನ್ನು ಭೇದಿಸಿಕೊಂಡು ಭೃಗುಮಹರ್ಷಿಯು ಹೊರಗೆ ಬಂದನು. ಭೃಗುವಿನ ಮಗನ ಹೆಸರು ಕವಿ. ಕವಿಯ ಮಗ ಶುಕ್ರ (ಬ್ರಹ್ಮನ ನಿರ್ದೇಶನದಂತೆ ಮೂರು ಲೋಕಗಳ ರಕ್ಷಣಾರ್ಥವಾಗಿ ಗ್ರಹವಾಗಿ ಪರಿವರ್ತನೆಹೊಂದಿದನು) ಯೋಗಾಚಾರ್ಯನಾದ ಮಹಾಬುದ್ಧಿವಂತನಾದ ಶುಕ್ರನು ದೈತ್ಯರಿಗೆ ಗುರುವಾದನು. ಶುಕ್ರನ ಮಗಳಾದ ಜ್ಯೇಷ್ಠಾದೇವಿಯು ವರುಣನ ಪತ್ನಿ. ಅವರಿಗೆ ಇಬ್ಬರು ಮಕ್ಕಳು. ಬಲ (ಗಂಡು ) ಮತ್ತು ಸುರಾ (ಹೆಣ್ಣು).

ಭೃಗು ಮಹರ್ಷಿಯ ಇನ್ನೊಬ್ಬ ಮಗ ಚ್ಯವನ. ಈತನ ಪತ್ನಿ ಆರುಷೀ. ಇವರಿಬ್ಬರ ಸಂತಾನವೇ ಋಚೀಕ. ಋಚೀಕನ ಮಗನ ಹೆಸರು . ಜಮದಗ್ನಿಗೆ ನಾಲ್ವರು ಮಕ್ಕಳು ಇವರಲ್ಲಿ ಸುಪ್ರಸಿದ್ಧನಾದವನೇ ಕೊನೆಯವನಾದ . ಬ್ರಹ್ಮನಿಗೆ ಧಾತಾ, ವಿಧಾತಾ ಅನ್ನುವ ಇಬ್ಬರು ಮಕ್ಕಳಿದ್ದರು ಅವರಿಗೆ ತಂಗಿಯಾಗಿ ಹುಟ್ಟಿದವಳೇ ಲಕ್ಶ್ಮೀದೇವಿ.

ಮುಂದುವರೆಯುತ್ತದೆ…

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache