ವ್ಯಾಸ ಮಹಾಭಾರತ - ಭಾಗ 38 ಆದಿಪರ್ವ (ಸಂಭವಪರ್ವ) |News Mirchi

ವ್ಯಾಸ ಮಹಾಭಾರತ – ಭಾಗ 38 ಆದಿಪರ್ವ (ಸಂಭವಪರ್ವ)

ಕಾಲ ಕಳೆದಂತೆ ಸರ್ವಪ್ರಾಣಿಗಳನ್ನೂ ವಿನಾಶಮಾಡುವ “ಅಧರ್ಮದೇವತೆಯ” ಪ್ರಾಧುರ್ಭಾವವಾಯಿತು. ನಿಋತಿ ಎಂಬುವವಳು ಅವನ ಪತ್ನಿ. ಅವರಿಗೆ ಹುಟ್ಟಿದ ರಾಕ್ಷಸೀ ಮಕ್ಕಳು ನೈಋತರೆಂದು ಹೆಸರು ಪಡೆದರು. ಇವರಲ್ಲಿ ಭಯ, ಮಹಾಭಯ, ಮೃತ್ಯು ಇವರು ಪ್ರಮುಖರು.

ತಾಮ್ರಾದೇವಿಯು ಕಾಕೀ, ಶ್ಯೇನೀ, ಭಾಸೀ, ಧೃತರಾಷ್ಟ್ರೀ ಮತ್ತು ಶುಕೀ ಎಂಬ ಐವರು ಹೆಣ್ಣುಮಕ್ಕಳನ್ನ ಪಡೆದಳು. ಕಾಕೀ ಎಂಬ ಕನ್ಯೆಯು ಉಲೂಕಗಳಿಗೆ ಜನ್ಮವಿತ್ತಳು. ಶ್ಯೇನಿಯು ಗಿಡುಗಗಳಿಗೂ. ಭಾಸಿಯು ಹುಂಜಗಳಿಗೂ ಮತ್ತು ರಣಹದ್ದುಗಳಿಗೂ. ಧೃತರಾಷ್ಟ್ರಿಯು ಹಂಸಗಳಿಗೂ, ಕಲಹಂಸಗಳಿಗೂ ಮತ್ತು ಚಕ್ರವಾಕಪಕ್ಷಿಗಳಿಗೂ ಶುಕಿಯು ಗಿಣಿಗಳಿಗೂ ಜನ್ಮವಿತ್ತರು.

ಕ್ರೋಧಾ ಎಂಬುವವಳು ಮೃಗೀ, ಮೃಗಮಂದಾ, ಹರೀ, ಭದ್ರಮನಾ, ಮಾತಂಗೀ, ಶಾರ್ದೂಲೀ, ಶ್ವೇತಾ, ಸುರಭಿ ಮತ್ತು ಸುರಸಾ ಎಂಬ ಹೆಣ್ಣು ಮಕ್ಕಳನ್ನು ಪಡೆದಳು. ಮೃಗಿಯಿಂದ ಜಿಂಕೆಗಳೂ, ಮೃಗಮಂದಾಳಿಂದ ಕರಡಿಗಳೂ, ಭದ್ರಮನಾ ಎಂಬುವವಳಿಂದ ಐರಾವತ ಎಂಬ ಗಜರಾಜನೂ ಹುಟ್ಟಿದನು. ಹರೀ ಎಂಬುವವಳಿಂದ ಕುದುರೆಗಳೂ, ವಾನರರೂ, ಗೋಲಾಂಗೂಲಗಳು ಹುಟ್ಟಿದವು. ಶಾರ್ದೂಲಿ ಎಂಬುವವಳಿಂದ ಸಿಂಹ, ಹುಲಿ, ಚಿರತೆಗಳು ಹುಟ್ಟಿದವು. ಮಾತಂಗಿಯಲ್ಲಿ ಆನೆಗಳು ಹುಟ್ಟಿದವು.

ಸುರಭಿಗೆ ರೋಹಿಣೀ, ಗಂಧರ್ವೀ, ವಿಮಲಾ ಮತ್ತು ಅನಲಾ ಎಂಬ ನಾಲ್ಕು ಜನ ಹೆಣ್ಣು ಮಕ್ಕಳು ಜನಿಸಿದರು.ರೋಹಿಣಿಯಲ್ಲಿ ಹಸುಗಳೂ, ಗಂಧರ್ವಿಯಲ್ಲಿ ಕುದುರೆಗಳೂ ಹುಟ್ಟಿದವು. ಏಳು ವಿಧವಾದ ಪಿಂಡ ರೂಪದ ಫಲನೀಡುವ ವೃಕ್ಷಗಳು ಅನಲಾ ಎಂಬುವವಳಲ್ಲಿ ಹುಟ್ಟಿದವು.

ಶ್ಯೇನಿಯು ಅರುಣನ ಕೈಹಿಡಿದು ಅವನಿಂದ ಜಟಾಯು ಮತ್ತು ಸಂಪಾತಿ ಅನ್ನುವ ಮಕ್ಕಳನ್ನು ಪಡೆದಳು.

ಮಹಾರಾಜ ಸರ್ವಪ್ರಾಣಿಗಳ ಹುಟ್ಟಿನರಹಸ್ಯ ಕೇಳುವುದು ಬಹಳ ಪುಣ್ಯದಾಯಕವಾಗಿದೆ.

ಸೃಷ್ಟಿಯ ಈ ಕಥೆಯನ್ನ ಕೇಳಿದ ಜನಮೇಜಯ ವೈಶಂಪಾಯನರಲ್ಲಿ… “ಬ್ರಾಹ್ಮಣೋತ್ತಮರೇ… ಈ ದೇವ ದಾನವರು ಮಾನವಲೋಕದಲ್ಲಿ ಯಾವ ಅಭಿಧಾನದಿಂದ ಅವತರಿಸಿದರು ಎನ್ನುವುದನ್ನ ತಿಳಿಯಲು ಉತ್ಸುಕನಾಗಿದ್ದೇನೆ… ತಿಳಿಸುವಿರಾ…?” ಎಂದು ಕೇಳುತ್ತಾನೆ.

ಅದಕ್ಕೆ ವೈಶಂಪಾಯನರು ಆದೀತು ಎನ್ನುತ್ತಾ ದೇವದಾನವರ ಅಂಶಾವತಾರದ ವಿವರ ಕೊಡುತ್ತಾರೆ. (ಓದುಗರಿಗೆ ಅನುಕೂಲವಾಗಲೆಂದು ವಾಕ್ಯಗಳನ್ನ ಮೊಟಕುಗೊಳಿಸಿ ಕೇವಲ ಹೆಸರುಗಳನ್ನ ಕೊಡುತ್ತಿದ್ದೇನೆ)

ದಾನವರು :
೧.ವಿಪ್ರಚಿತ್ತಿ – ಜರಾಸಂಧ
೨.ಹಿರಣ್ಯಕಶಿಪು – ಶಿಶುಪಾಲ
೩.ಸಂಹ್ರಾದ – ಶಲ್ಯ
೪.ಅನುಹ್ರಾದ – ಧೃಷ್ಟಕೇತು
೫.ಶಿಬಿ – ದ್ರುಮ
೬.ಬಾಷ್ಕಲ – ಭಗದತ್ತ
೭.ಕೇತುಮಂತ – ಅಮಿತೌಜಸ
೮.ಸ್ವರ್ಭಾನು – ಉಗ್ರಸೇನ
೯.ಅಶ್ವ – ಅಶೋಕ
೧೦.ಮಹಾಸುರ – ಧೀರ್ಘಪ್ರಜ್ಞ
೧೧.ಅಜಕ – ಶಾಲ್ವ
೧೨.ಅಶ್ವಗ್ರೀವ – ರೋಚಮಾನ
೧೩.ಸೂಕ್ಷ್ಮ – ಬೃಹದ್ರಥ
೧೪.ತುಹುಂಡ – ಸೇನಾಬಿಂದು
೧೫.ಇಷುಪಾದ – ನಗ್ನಜಿತ
೧೬.ಏಕಚಕ್ರ – ಪ್ರತಿವಿಂಧ್ಯ
೧೭.ವಿರೂಪಾಕ್ಷ – ಚಿತ್ರಧರ್ಮ
೧೮.ಹರ – ಸುಬಾಹು
೧೯.ಅಹರ – ಬಾಹ್ಲೀಕ
೨೦.ನಿಚಂದ್ರ – ಮುಂಜಕೇಶ
೨೧.ನಿಕುಂಭ – ದೇವಾಧಿಪ
೨೨.ಶರಭ – ಪೌರವ (ರಾಜರ್ಷಿ)
೨೩.ಕ್ರಥ – ಪಾರ್ವತೇಯ (ರಾಜರ್ಷಿ)
೨೪.ಕುಪಟ – ಸುಪಾರ್ಶ್ವ
೨೫.ಶಲಭ – ಪ್ರಹ್ರಾದ

೨೬. ಚಂದ್ರ – ಚಂದ್ರವರ್ಮ

೧೭. ಅರ್ಕ – ಋಷಿಕ
೨೮. ಮೃತಪಾ – ಪಶ್ಚಿಮಾನೂಪಕ
೨೯. ಗವಿಷ್ಠ – ದ್ರುಮಸೇನ
೩೦. ಮಯೂರ – ವಿಶ್ವ
೩೧. ಸುಪರ್ಣ – ಕಾಲಕೀರ್ತಿ
೩೨. ಚಂದ್ರಹಂತೃ – ಶುನಕ (ರಾಜರ್ಷಿ)
೩೩. ಚಂದ್ರವಿನಾಶನ – ಜಾನಕಿ
೩೪. ಧೀರ್ಘಜಿಹ್ವ – ಕಾಶಿರಾಜ
೩೫. ರಾಹು – ಕ್ರಾಥ
೩೬. ವಿಕ್ಷರ – ವಸುಮಿತ್ರ
೩೭. ವೀರ – ಪೌಂಡ್ರಮಾತ್ಸ್ಯಕ
೩೮. ವೃತ್ರ – ಮಣಿಮಂತ (ರಾಜರ್ಷಿ)
೩೯. ಕ್ರೋಧಾಹಂತ – ದಂಡ
೪೦. ಕ್ರೋಧವರ್ಧನ – ದಂಡಧಾರ
೪೧. ಕಾಲೇಯ(ಮೊದಲನೆಯವ) – ಜಯತ್ಸೇನ (ಮಗಧಸಾಮ್ರಾಜ್ಯ)
೪೨.ಕಾಲೇಯ ಎರಡನೆಯವ – ಅಪರಾಜಿತ
೪೩.ಕಾಲೇಯ ಮೂರನೆಯವ – ನಿಷಾದಾಧಿಪತಿ
೪೪. ಕಾಲೇಯ ನಾಲ್ಕನೆಯವ – ಶ್ರೇಣಿಮಂತ
೪೫. ಕಾಲೇಯ ಐದನೆಯವ – ಮಹೌಜಸ
೪೬. ಕಾಲೇಯ ಆರನೆಯವ – ಅಭೀರು (ರಾಜರ್ಷಿ)
೪೭. ಕಾಲೇಯ ಏಳನೆಯವ -ಸಮುದ್ರಸೇನ
೪೮. ಕುಕ್ಷಿ – ಪಾರ್ವತೀಯ
೪೯. ಕ್ರಥನ – ಸೂರ್ಯಾಕ್ಷ
೫೦. ಸೂರ್ಯ – ದರದ(ಬಾಹ್ಲೀಕ ದೇಶ)

ಮುಂದುವರೆಯುತ್ತದೆ…
ಗುರುಪ್ರಸಾದ್ ಆಚಾರ್ಯ

Loading...
loading...
error: Content is protected !!