ವ್ಯಾಸ ಮಹಾಭಾರತ – ಭಾಗ 4

ಸೌತಿಗಳು ಹೇಳುತ್ತಾರೆ…

ಜನಮೇಜಯಃ ಪಾರಿಕ್ಷಿತಂ ಸಹ ಭ್ರಾತೃಭಿಃ ಕುರುಕ್ಷೇತ್ರೇ ದೀರ್ಘ ಸತ್ರಮುಪಾಸ್ತೇ | ತಸ್ಯ ಭ್ರಾತರಸ್ತ್ರಯಃ ಶ್ರುತಸೇನ ಉಗ್ರಸೇನೋ ಭೀಮಸೇನ ಇತಿ | ತೇಷು ತತ್ಸತ್ರಮುಪಾಸೀನೇಷ್ವಾಗಚ್ಛತ್ಸಾರಮೇಯಃ ||೧||

ಋಷಿಸತ್ತಮರೇ… ಪರೀಕ್ಷಿತನ ಪುತ್ರನಾದ ಜನಮೇಜಯನು ತನ್ನ ತಮ್ಮಂದಿರೊಡನೆ ದೀರ್ಘಕಾಲದ ಒಂದು ಸತ್ರವನ್ನಾರಂಭಿಸಿದನು. ಶ್ರುತಸೇನ, ಉಗ್ರಸೇನ ಮತ್ತು ಭೀಮಸೇನ ಎಂಬುವರೇ ಜನಮೇಜಯನ ಅನುಜರಾಗಿದ್ದರು. ಆ ಮೂವರೂ ಯಜ್ನಮಂಟಪದಲ್ಲಿ ಕುಳಿತಿರುವಾಗ ದೇವಲೋಕದ ನಾಯಿಯಾದ ಸರಮೆಯು ಯಜ್ನಮಂಟಪದ ಸಮೀಪಕ್ಕೆ ಬಂದಿತು. ಯಜ್ನಮಂಟಪದ ಸಮೀಪಕ್ಕೆ ಬಂದ ನಾಯಿಯ ಮರಿಯನ್ನು ಅಲ್ಲಿಯೇ ಕುಳಿತಿದ್ದ ಜನಮೇಜಯನ ತಮ್ಮಂದಿರು ಪ್ರಹರಿಸಿದರು. ಒಡನೆಯೇ ಅದು ಗಟ್ಟಿಯಾಗಿ ಅಳುತ್ತಾ ತಾಯಿಯಾದ ಸರಮೆಯ ಸಮೀಪಕ್ಕೆ ಧಾವಿಸಿತು.

ಅಳುತ್ತಾ ಬಂದ ತನ್ನ ಮರಿಯನ್ನ ಕಂಡು ಸುರಮೆ ಕೇಳಿತು..
ಏಕಳುವೆ ಕಂದಾ..? ನಿನ್ನನ್ನಾರು ಪ್ರಹರಿಸಿದರು..?

“ಜನಮೇಜಯನ ಅನುಜರು ನನ್ನ ಹೊಡೆದರಮ್ಮಾ…”

“ಸುಮ್ಮನೆ ಹೊಡೆದು ಬಿಡುವರೇ..? ನೀನೇ ಏನೋ ಅಪರಾಧ ಮಾಡಿರಬೇಕು”

“ಇಲ್ಲ ಅಮ್ಮಾ, ನಾನೇನೂ ತಪ್ಪು ಮಾಡಲಿಲ್ಲ, ಯಜ್ನ ವೇದಿಕೆಯಲ್ಲಿದ್ದ ಹವಿಸ್ಸನ್ನೂ ನೋಡಲಿಲ್ಲ, ಸವಿಯಲೂ ಇಲ್ಲ”

ಇದನ್ನು ಕೇಳಿದ ಸುರಮೆ ನೇರ ಯಜ್ನ ಮಂಟಪದೆಡೆ ಬಂದು …

“ಏನೂ ಅಪರಾಧ ಮಾಡದ ನನ್ನ ಮಗುವನ್ನೇಕೆ ಹೊಡೆದಿರಿ..? ನಿರಪರಾಧಿಯನ್ನು ಹೀಗೆ ಸುಮ್ಮಸುಮ್ಮನೆ ಹೊಡೆದುದೇಕೆ…? ” ಎಂದು ಪ್ರಶ್ನಿಸಿತು.

ಅದರ ಪ್ರಶ್ನೆಗೆ ಜನಮೇಜಯನ ಸಹಿತ ಯಾರೂ ಉತ್ತರ ಕೊಡಲೇ ಇಲ್ಲ.

ಇದನ್ನು ಕಂಡು ಕೋಪಗೊಂಡ ಸುರಮೆ…
“ನಿರಪರಾದಿಯನ್ನು ಪ್ರಹರಿಸಿರುವ ನೀವು ಮಾಡುತ್ತಿರುವ ಯಾಗಕ್ಕೆ ನಿಮ್ಮ ಊಹೆಗೂ ನಿಲುಕದ ರೀತಿಯ ವಿಘ್ನ ಬರಲಿ” ಎಂದು ಶಾಪವನ್ನಿತ್ತಿತು.

ಮುಂದುವರಿಯುತ್ತದೆ….

-ಗುರುಪ್ರಸಾದ್ ಆಚಾರ್ಯ