17 ಲಕ್ಷ ಟಿಪ್ಸ್ ಪಡೆದ ಹೋಟೆಲ್ ಮಾಣಿ

ರೆಸ್ಟೋರೆಂಟ್ ಗೆ ಹೋದರೆ ನಾವು ಸಾಮಾನ್ಯವಾಗಿ ಹತ್ತು, ನೂರು ರೂಪಾಯಿ ಟಿಪ್ಸ್ ಕೊಡುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಹೋಟೆಲ್ ಮಾಣಿಗೆ ರೂ. 17 ಲಕ್ಷ ಟಿಪ್ಸ್ ನೀಡಿ ಸುದ್ದಿಯಾಗಿದ್ದಾರೆ. ಈ ಮೇಲಿನ ಚಿತ್ರದಲ್ಲಿರುವ ಬ್ರಿಯಾನ್ ಮೈಕ್ಸ್‌ನರ್ ಎಂಬ ವ್ಯಕ್ತಿಯೇ ಅಷ್ಟು ದೊಡ್ಡ ಮೊತ್ತದ ಟಿಪ್ಸ್ ಪಡೆದಿರುವಾತ.

24brk-brian2ಅಷ್ಟು ಮೊತ್ತದ ಟಿಪ್ಸ್ ಕೊಟ್ಟಾತನಿಗೆ ದುಡ್ಡಿನ ಮದ ಎಂದು ಯೋಚಿಸಬೇಡಿ. ಆತ ಕೊಟ್ಟಿದ್ದು ಮಾಣಿಯ ಹಲ್ಲು ನೋವಿನ ಸಮಸ್ಯೆ ನೋಡಿ. ಹೌದು ಬ್ರಿಯಾನ್ ಮೈಕ್ಸ್‌ನರ್ ಓಕ್ಲಹೋಮಾದ ಡೂಡಾ ಎಂಬ ರೆಸ್ಟೋರೆಂಟ್ ನಲ್ಲಿ ವೆಯ್ಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ಆತನಿಗೆ ಸಣ್ಣ ವಯಸ್ಸಿನಿಂದಲೂ ದಂತ ಸಮಸ್ಯೆ ಇದೆ. ಮುಂಬದಿಯ ಹಲ್ಲು ಹಾಳಾಗಿ ತೀವ್ರ ನೋವು ಅನುಭವಿಸುತ್ತಿದ್ದ. ಆದರೆ ಆಪರೇಷನ್ ಮಾಡಿಸಿಕೊಳ್ಳಲು ತನ್ನ ಬಳಿ ಸಾಕಷ್ಟು ದುಡ್ಡಿರಲಿಲ್ಲ.

ಒಮ್ಮೆ ಫ್ರೆಡ್ ಎಂಬ ವ್ಯಕ್ತಿ ತನ್ನ ಮಗಳೊಂದಿಗೆ ಅ ರೆಸ್ಟೋರೆಂಟ್ ಗೆ ಬಂದಿದ್ದ. ಡಿನ್ನರ್ ಆರ್ಡರ್ ಮಾಡಲು ಬ್ರಿಯಾನ್ ನನ್ನು ಕರೆದರು. ಹಲ್ಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಬ್ರಿಯಾನ್, ನೋವು ನುಂಗಿಕೊಂಡು ಅತ್ಮವಿಶ್ವಾಸದಿಂದ ನಡೆದುಬಂದ ರೀತಿ ಫ್ರೆಡ್ ಗೆ ಇಷ್ಟವಾಯಿತು. ಕೂಡಲೇ ರೆಸ್ಟೋರೆಂಟ್ ಮ್ಯಾನೇಜರ್ ಬಳಿ ತೆರಳಿದ ಫ್ರೆಡ್, ನಿಮ್ಮ ಹೋಟೆಲ್ ಮಾಣಿಗೆ 25 ಸಾವಿರ ಡಾಲರ್ ಟಿಪ್ಸ್ ನೀಡಬೇಕೆಂದು ನಿರ್ಧರಿಸಿದ್ದೇನೆ ಎಂದರು.

ಮ್ಯಾನೇಜರ್ ಈ ವಿಷಯವನ್ನು ಬ್ರಿಯಾನ್ ಗೆ ಹೇಳಿದರು. ಪರಿಚಯವೇ ಇಲ್ಲದ ವ್ಯಕ್ತಿ ತನ್ನ ಸಹಾಯಕ್ಕೆ ಬಂದಿದ್ದು ನೋಡಿ ಬ್ರಿಯಾನ್ ಕಣ್ಣೀರಾದ.

ತನ್ನ ತಂದೆ ಕಷ್ಟದಲ್ಲಿರುವವರಿಗೆ ನೆರವಾಗುವುದರಲ್ಲಿ ಸದಾ ಮುಂದೆ ಇರುತ್ತಾರೆ, ಅವರ ನಿರ್ಧಾರಕ್ಕೆ ನನಗೆ ಹೆಮ್ಮೆ ಇದೆ ಎಂದು ಫ್ರೆಡ್ ಪುತ್ರಿ ಹೇಳಿದ್ದಾಳೆ.