ಹೊಸ ಆಲೋಚನೆಗಳು ಬರಬೇಕಂದ್ರೆ ಹೀಗೆ ಮಾಡಿ… – News Mirchi

ಹೊಸ ಆಲೋಚನೆಗಳು ಬರಬೇಕಂದ್ರೆ ಹೀಗೆ ಮಾಡಿ…

ತುಂಬಾ ಹೊತ್ತು ಯೋಚನೆ ಮಾಡುತ್ತಿದ್ದರೆ ನಮ್ಮ ಮೆದುಳು ಸೃಜನಶೀಲತೆಯನ್ನು ಕಳೆದುಕೊಳ್ಳುತ್ತದೆಯಂತೆ. ಅಂತಹ ಸಮಯದಲ್ಲಿ ಆಲೋಚನೆಗಳಿಗೆ ಬ್ರೇಕ್ ಹಾಕಿ, ಸ್ವಲ್ಪ ಹೊತ್ತು ನಡೆಯಬೇಕು ಎಂದು ಇಸ್ರೇಲ್ ನ ಸಂಶೋಧಕರು ಸೂಚಿಸುತ್ತಿದ್ದಾರೆ. ಕೆಲವೊಮ್ಮೆ ಬಿಡುವಿಲ್ಲದೆ ಆಲೋಚಿಸುತ್ತಿದ್ದರೆ, ಮೆದುಳು ಕೆಲಸ ಮಾಡುವುದು ನಿಲ್ಲುತ್ತದೆ ಅಂದರೆ ಅದರ ಆಲೋಚನಾ ಶಕ್ತಿ ಕುಂದುತ್ತದೆ. ಇಂತಹ ಸಂದರ್ಭಗಳಲ್ಲಿ ಹೊರಗೆ ಹೋಗಿ ನಡೆಯುವುದು ಅಥವಾ ಸ್ವಲ್ಪ ದೂರ ಓಡುವುದು ಮಾಡಿದರೆ ಮೆದುಳು ಮತ್ತೆ ಚುರುಕಾಗಿ ಕೆಲಸ ಮಾಡಲು ಸಿದ್ಧವಾಗುತ್ತದೆ ಎಂದು ಹೇಳುತ್ತಿದ್ದಾರೆ.

ಕೆಲವೊಮ್ಮೆ ಹೊರಗೆ ಹೋಗಿ ನಡೆಯಲು, ಓಡಲು ಸಾಧ್ಯವಾಗದಂತಹ ಪರಿಸ್ಥಿತಿ ಇರಬಹುದು. ಅಂತಹ ಸಮಯಗಳಲ್ಲಿ ನಮ್ಮ ಆಲೋಚನೆಗಳನ್ನು ದಾರಿ ತಪ್ಪಿಸುವಂತಹ ಕೆಲಸಗಳನ್ನು ಮಾಡಬೇಕಂತೆ. ತೋಟಗಾರಿಕೆಯೋ, ಟಿವಿ ನೋಡುವುದೋ, ಹೊಸ ಹೊಸ ಅಡುಗೆಗಳನ್ನು ಪ್ರಯತ್ನಿಸುವುದು ಮುಂತಾದವುಗಳನ್ನು ಮಾಡಿದಾಗ ಮೆದುಳು ರಿಫ್ರೆಷ್ ಆಗಿ ಮತ್ತಷ್ಟು ಚುರುಕಾಗಿ ಕೆಲಸ ಮಾಡುತ್ತದೆ ಎಂಬುದು ಸಂಶೋಧಕರ ವಾದ.

ಇದೇ ವಿಷಯದ ಮೇಲೆ ಸಂಶೋಧಕರು ಅಧ್ಯಯನ ನಡೆಸಿದ್ದರು. ಕೆಲವರಿಗೆ ಕಠಿಣವಾದ ಪಜಲ್ ನೀಡಿ ಒಂದು ದಿನದಲ್ಲಿ ಪೂರ್ಣಗೊಳಿಸುವಂತೆ ಹೇಳಿದ್ದರು. ಪಜಲ್ ಪೂರ್ಣಗೊಳಿಸುವ ಪ್ರಕ್ರಿಯೆಯಲ್ಲಿ ಹಲವರು ಹೆಚ್ಚು ಹೊತ್ತು ಆಲೋಚನೆ ಮಾಡಿದರು. ಎಷ್ಟು ಯೋಚಿಸಿದರೂ ಅವರು ಸಕಾಲದಲ್ಲಿ ಪಜಲ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಮತ್ತೆ ಕೆಲವರು ತಮ್ಮ ಆಲೋಚನೆಗಳಿಗೆ ತಾತ್ಕಾಲಿಕವಾಗಿ ವಿಶ್ರಾಂತಿ ನೀಡಿ, ಮನಸ್ಸನ್ನು ಮತ್ತೊಂದು ಕೆಲಸದ ಕಡೆ ಕೇಂದ್ರೀಕರಿಸಿದರು. ಇವರು ಮೊದಲ ಗುಂಪಿಗಿಂತ ಚುರುಕಾಗಿ ಯೋಚಿಸಿ ಕಡಿಮೆ ಸಮಯದಲ್ಲಿ ಪಜಲ್ ಪೂರ್ಣಗೊಳಿಸಿದರಂತೆ.

Click for More Interesting News

Loading...
error: Content is protected !!