JK-Krishnareddy-JDS

ನಾವು ಯಾರ ಗುಲಾಮರಲ್ಲ, ಯಾರ ಹಂಗೂ ಬೇಕಿಲ್ಲ : ಜೆ.ಕೆ.ಕೃಷ್ಣಾರೆಡ್ಡಿ

ಚಿಂತಾಮಣಿ, ಫೆ. 12 : ಸ್ವತಂತ್ರ ಬಂದು 70 ವರ್ಷಗಳು ಕಳೆದಿದ್ದರೂ ಒಬ್ಬರಿಗೆ ಹೆದರಿ ಜೀವನ ನಡೆಸುವುದು ಯಾವ ನ್ಯಾಯ? ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನದಂತೆ ಎಲ್ಲರಿಗೂ ಸಮಾನ ಹಕ್ಕು ಇದ್ದು ನೆಮ್ಮದಿಯಿಂದ ಜೀವನ ಸಾಗಿಸುವಂತೆ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮಾದಮಂಗಳ ಗ್ರಾಮಸ್ಥರಿಗೆ ಕರೆ ನೀಡಿದರು.

ತಾಲೂಕಿನ ಮಾದಮಂಗಳ ಗ್ರಾಮದಲ್ಲಿ ಜೆಡಿಎಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಮತ್ತು ಕಾರ್ಯಕರ್ತರ ಸಮಾವೇಶಕ್ಕೆ ವಿರೋಧ ಪಕ್ಷದವರು ಅಡ್ಡಿಪಡಿಸಿದ್ದಾರೆಂಬ ಮಾಹಿತಿ ಮೆರೆಗೆ ಗ್ರಾಮಕ್ಕೆ ಆಗಮಿಸಿದ ನೂರಾರು ಪೋಲಿಸ್ ಅಧಿಕಾರಿಗಳನ್ನುಕಂಡು ಗ್ರಾಮದ ಜನತೆಗೆ ಧೈರ್ಯ ತುಂಬಿ ಮಾತನಾಡಿದ ಅವರು, ಯಾರ ದಬ್ಬಾಳಿಕೆ ದೌರ್ಜನ್ಯಗಳಿಗೆ ಭಯಪಡಬೇಡಿ ನಾವು ಯಾರ ಸ್ವತ್ತು ತಿನ್ನುತ್ತಿಲ್ಲಾ, ನಮಗೆ ಸ್ವಾತಂತ್ರ ಬಂದು 70 ವರ್ಷಗಳಾಗಿದೆ ಅಷ್ಟೇ ಅಲ್ಲದೆ ಸಂವಿಧಾನದಲ್ಲಿ ಸಮಾನ ಹಕ್ಕು ಇದೆ. ಭಾರತಿಯರು ಎಲ್ಲಿ, ಯಾರು ಬೇಕಾದರು ಜೀವನ ನಡೆಸಬಹುದು ಯಾರ ಕೈಕೆಳಗೂ ನಾವು ಬದುಕುವಂತಿಲ್ಲ ಎಂದ ಅವರು ಇನ್ನೂ ನಾವು ಏಕೆ ಇನ್ನೂಬ್ಬರ ಕಪಿಮುಷ್ಠಿಯಲ್ಲಿ ಬದುಕಬೇಕು? ಎಂದು ಪ್ರಶ್ನಿಸಿದರು. ಎಲ್ಲರೂ ಭಯ ಬಿಟ್ಟು ನೆಮ್ಮದಿಯಿಂದ ಜೀವನ ನಡೆಸಿ ಎಂದು ಗ್ರಾಮದ ಜನತೆಗೆ ತಿಳಿಸಿ ಹೇಳಿದರು.

ಪ್ರಜಾಪ್ರಭುತ್ವ ಎಲ್ಲಿದೆ

ಭಾರತದಲ್ಲಿ ಪ್ರಜಾಪ್ರಭುತ್ವ ಆಳ್ವಿಕೆ ಎನ್ನುತ್ತಾರೆ, ಇದೇನಾ ಪ್ರಜಾಪ್ರಭುತ್ವ ಎಂದರೆ? ಗ್ರಾಮಕ್ಕೆ ಯಾವ ಜನಪ್ರತಿನಿಧಿಗಳು ಬರಬಾರದೇ? ಗ್ರಾಮಸ್ಥರು ಮನೆಗಳಿಂದ ಹೊರ ಬರಬಾರದೇ? ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಯಾರು ಯಾರಿಗೂ ಭಯಪಡುವಂತಿಲ್ಲ ನಾವು ಭಯಪಡುವಷ್ಟು ನಮ್ಮ ವಿರೋಧಿಗಳು ನಮ್ಮನ್ನು ಬಳಕೆ ಮಾಡಿಕೊಳ್ಳುತ್ತಾರೆ ನಾವು ಯಾವಾಗ ಹೆದರುವುದನ್ನು ಬಿಡುತ್ತೇವೆಯೋ ಆಗ ನಮಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಂತಾಗುತ್ತದೆ, ಗ್ರಾಮದಲ್ಲಿ ಪ್ರತಿಯೊಬ್ಬರು ಸ್ವತಂತ್ರವಾಗಿರಿ ಧೈರ್ಯ ತುಂಬಿದರು.

ಅಂತರಂಗದ ಸಂತೋಷಕ್ಕೆ ಸಂಗೀತ ಸಹಕಾರಿ : ಪ್ರವಚನಕಾರ ಟಿ.ಎಲ್.ಆನಂದ್

ಹಲವು ವರ್ಷಗಳಿಂದ ಇಡೀ ಗ್ರಾಮವೆಲ್ಲಾ ಸುಧಾಕರ್ ಬಣದ ಬೆಂಬಲಿಗರು ಆವರಿಸಿದ್ದ ಸಂದರ್ಭದಲ್ಲಿ ಮೊಟ್ಟ ಮೊದಲ ಬಾರಿಗೆ ಮಾದಮಂಗಲ ಗ್ರಾಮದಲ್ಲಿ ಜೆಡಿಎಸ್ ನಾಯಕರ ಬೃಹತ್ ಸಮಾವೇಶ ನಡೆಸುತ್ತಿದ್ದೇವೆ. ಇದರಿಂದ ಕೂಪಿತಗೊಂಡ ಮಾಜಿ ಶಾಸಕ ಎಂ.ಸಿ. ಸುಧಾಕರ್ ಬಣದವರು ಗಲಾಟೆ ಮಾಡಿದನ್ನು ಮನಗಂಡ ಪೋಲಿಸ್ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಿದರು ಎಂದು ಜೆಡಿಎಸ್ ಮುಖಂಡರು ತಿಳಿಸಿದ್ದಾರೆ.

ಈ ವೇಳೆ ಗ್ರಾಮದ ಹಲವು ಸುಧಾಕರ್ ಬೆಂಬಲಿಗರನ್ನು ಜೇಡಿಎಸ್ ಪಕ್ಷಕ್ಕೆ ಮಾನ್ಯ ಶಾಸಕರು ಸೇರ್ಪಡೆ ಮಾಡಿಕೊಂಡರು. ಎಂ.ಸಿ.ಸುಧಾಕರ್ ಬಣ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಕಾರ್ಯಕರ್ತರು ಮಾತನಾಡಿ ಹಲವು ವರ್ಷಗಳಿಂದ ಎಂ.ಸಿ.ಸುಧಾಕರ್ ಕುಟುಂಬ ರಾಜಕಾರಣದ ದೌರ್ಜನ್ಯ, ದಬ್ಬಾಳಿಕೆಗಳಿಗೆ ಬೇಸತ್ತು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ರವರ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಹಾಗೂ ಅವರ ಒಳ್ಳೆಯ ಗುಣ, ಸಮಾನತೆಯ ಲಕ್ಷಣಗಳನ್ನು ಅರಿತು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದೆವು ಎಂದು ತಿಳಿಸಿದರು.

ಚಿಂತಾಮಣಿ: ದ್ವಿಚಕ್ರವಾಹನಗಳ ಮುಖಾಮುಖಿ ಡಿಕ್ಕಿ : ಚಿಕಿತ್ಸೆ ಫಲಿಸದೆ ಸವಾರ ಸಾವು

ಬಾರಿ ಬಂದೋಬಸ್ತ್ ನೀಡಿದ ಕುರಿತು ಗ್ರಾಮಾಂತರ ಸರ್ಕಲ್ ಇನ್ಸ್‍ಪೆಕ್ಟರ್ ಬೈರಪ್ಪರವರನ್ನು ವಿಚಾರಿಸಿದಾಗ, ಮಾದಮಂಗಲ ಗ್ರಾಮದಲ್ಲಿ ಜೆಡಿಎಸ್ ಮುಖಂಡರ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದಾರೆ. ಸಮಾವೇಶಕ್ಕೂ ಮುನ್ನಾ ಜೆಡಿಎಸ್ ಕಾರ್ಯಕರ್ತರ ಮೆರವಣಿಗೆ ವೇಳೆ ಎಂ.ಸಿ.ಸುಧಾಕರ್ ಬಣದವರನ್ನು ಯಾರೋ ಕೆಣಕಿದ್ದು ಇದರ ಪರಿಣಾಮ ಎರಡು ಗುಂಪುಗಳ ಮದ್ಯೆ ಘರ್ಷಣೆಗೆ ಗುರಿಯಾದ ಕಾರಣ ಕೆಲವು ಮುಖಂಡರ ಮನವಿ ಮೇರೆಗೆ ಗ್ರಾಮದಲ್ಲಿ ಹೆಚ್ಚಿನ ಬಂದೋಬಸ್ತ್ ನೀಡಲಾಯಿತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಗುಡೆ ಶ್ರೀನಿವಾಸರೆಡ್ಡಿ, ಯನಮಲಪಾಡಿ ಚಂದ್ರಾರೆಡ್ಡಿ, ನಗರಸಬೆ ಸದಸ್ಯರಾದ ವೆಂಕಟರವಣಪ್ಪ, ಆರ್.ಪ್ರಕಾಶ್, ಶಫೀಕ್, ಮಂಜುನಾಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ತಾಲೂಕಿನ ಮಾದಮಂಗಳ ಗ್ರಾಮದಲ್ಲಿ ಎಂ.ಸಿ.ಸುಧಾಕರ್ ಬಣ ತೊರೆದು ಜೆಡಿಎಸ್ ಪಕ್ಷ ಸೇರಿದ ಕಾರ್ಯಕರ್ತರನ್ನು ಹೂವಿನ ಹಾರ ಹಾಕಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಬರಮಾಡಿಕೊಂಡರು.

Get Latest updates on WhatsApp. Send ‘Subscribe’ to 8550851559