ಈ ಶರ್ಟ್ ಧರಿಸಿದರೆ ಕಿವುಡರೂ ಸಂಗೀತ ಆಸ್ವಾಧಿಸಬಹುದು

ನಾವು ಎಷ್ಟೇ ನೋವಿನಲ್ಲಿದ್ದರೂ ಸಂಗೀತ ಕೇಳಿದರೆ ಸ್ವಲ್ಪ ನಿರಾಳರಾಗುತ್ತೇವೆ. ಅಷ್ಟೇ ಅಲ್ಲ ಕಲ್ಲನ್ನೂ ಕರಗಿಸಬಲ್ಲ ಶಕ್ತಿ ಸಂಗೀತಕ್ಕಿದೆ ಎಂದು ಹೇಳುತ್ತಿರುತ್ತಾರೆ. ಆದರೆ ಕಿವುಡರಿಗೆ ಸಂಗೀತ ಆಸ್ವಾಧಿಸುವ ಅದೃಷ್ಟವಿಲ್ಲ. ಇದೀಗ ಇಂತಹವರಿಗಾಗಿಯೇ ಕಂಪನಿಯೊಂದು ಸೌಂಡ್ ಶರ್ಟ್ ತಯಾರಿಸಿದೆ. ಲಂಡನ್ ನ ಕ್ಯೂಟ್ ಸರ್ಕ್ಯೂಟ್ ಎನ್ನುವ ಫ್ಯಾಷನ್ ಕಂಪನಿ ಜರ್ಮನಿಯ ಆರ್ಕೆಸ್ಟ್ರಾ ತಂಡದೊಂದಿಗೆ ಸೇರಿ ಕಿವುಡರೂ ಸಂಗೀತವನ್ನು ಫೀಲ್ ಆಗುವಂತೆ ಈ ಸೌಂಡ್ ಶರ್ಟ್ ಸಿದ್ಧಪಡಿಸಿದೆ.

ವ್ಯಾಸ ರಚಿತ ಮಹಾಭಾರತ

ಈ ಶರ್ಟ್‌ನಲ್ಲಿ 16 ಮೋಟಾರುಗಳು, ವೈರ್‌ಲೆಸ್ ಸಿಸ್ಟಮ್ ಅನ್ನು ಅಳವಡಿಸಿದ್ದಾರೆ. ಪ್ರತಿ ಮೋಟಾರ್ ಒಂದೊಂದು ಸಂಗೀತ ವಾದ್ಯಕ್ಕೆ ಸಂಬಂಧಿಸಿದೆ. ಇದು ಕೆಲಸ ಮಾಡಲು ಮೊದಲು ವೇದಿಕೆಯ ಮೇಲಿರುವ ಆರ್ಕೆಸ್ಟ್ರಾ ಸುತ್ತಮುತ್ತ ಮೈಕ್ರೋಫೋನ್‌ಗಳನ್ನು ಅಳವಡಿಸಬೇಕು. ಅರ್ಕೆಸ್ಟ್ರಾ ತಂಡ ನುಡಿಸುವ ಸಂಗೀತ ಮೈಕ್ರೋಫೋನ್ ಗಳಲ್ಲಿ ರೆಕಾರ್ಡ್ ಆಗಿ ಸೌಂಡ್ ಶರ್ಟ್ ಸಾಫ್ಟ್ ವೇರ್ ಮೂಲಕ ಅದು ಧರಿಸಿರುವ ಅಂಗಿಗೆ ತಲುಪುತ್ತದೆ. ಹೀಗೆ ಅವರು ನಡಿಸುತ್ತಿರುವ ಸಂಗೀತವನ್ನು ಆಧರಿಸಿ ಅಂಗಿಯಲ್ಲಿ ವೈಬ್ರೇಷನ್ ಬರುತ್ತದೆ. ಆ ವೈಬ್ರೇಷನ್ ನೊಂದಿಗೆ ಶರ್ಟ್ ಧರಿಸಿರುವವರು ಮನಸ್ಸಿನಲ್ಲಿ ಸಂಗೀತವನ್ನು ಆಸ್ವಾಧಿಸುತ್ತಾರೆ.

error: Content is protected !!