ತುಂಟ ಪ್ರಶ್ನೆಗೆ ಸುಷ್ಮಾ ಉತ್ತರ "ಮಂಗಳಗ್ರಹದಲ್ಲಿದ್ದರೂ ಅಲ್ಲಿನ ರಾಯಭಾರ ಕಛೇರಿ ಸಹಾಯ ಮಾಡುತ್ತದೆ" |News Mirchi

ತುಂಟ ಪ್ರಶ್ನೆಗೆ ಸುಷ್ಮಾ ಉತ್ತರ “ಮಂಗಳಗ್ರಹದಲ್ಲಿದ್ದರೂ ಅಲ್ಲಿನ ರಾಯಭಾರ ಕಛೇರಿ ಸಹಾಯ ಮಾಡುತ್ತದೆ”

ನವದೆಹಲಿ: ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕುವ ಭಾರತೀಯರಿಗೆ ಕೂಡಲೇ ನೆರವಿನ ಹಸ್ತ ನೀಡುವಲ್ಲಿ ಸದಾ ಮುಂದಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವಿಟರ್ ನಲ್ಲೊಬ್ಬರು ತುಂಟ ಪ್ರಶ್ನೆ ಕೇಳಿದ ಪ್ರಸಂಗ ನಡೆದಿದೆ. ಆ ಪ್ರಶ್ನೆಗೆ ಸಂಯಮದಿಂದಲೇ ಪ್ರತಿಕ್ರಿಯಿಸಿರುವ ಸುಷ್ಮಾ ಸ್ವರಾಜ್ , ಹಾಸ್ಯದಿಂದ ಕೂಡಿದ ಉತ್ತರ ನೀಡಿದ್ದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ. “ಸುಷ್ಮಾ ಸ್ವರಾಜ್ ಅವರೇ ನಾನು ಮಂಗಳ ಗ್ರಹದಿಂದ ಮಾತಾಡುತ್ತಿದ್ದೇನೆ, ನನಗೆ ಮಂಗಳಯಾನ-1 ಮೂಲಕ 987 ದಿನಗಳ ಹಿಂದೆ ಕಳುಹಿಸಿದ ಆಹಾರ, ನೀರು ಮುಗಿದಿದೆ. ಮತ್ತೆ ಮಂಗಳಯಾನ-2 ಯಾವಾಗ ಕೈಗೊಳ್ಳುತ್ತೀರಿ” ಎಂದು ಕರಣ್ ಸೈನಿ ಎಂಬುವವರು ಪರೋಕ್ಷವಾಗಿ ಮಂಗಳಯಾನ-2 ಯೋಜನೆಯ ಕುರಿತು ಟ್ವಿಟರ್ ನಲ್ಲಿ ಪ್ರಶ್ನಿಸಿ ಸುಷ್ಮಾ ಅವರನ್ನು ಟ್ಯಾಗ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸುಷ್ಮಾ ಸ್ವರಾಜ್, “ನೀವು ಮಂಗಳಗ್ರಹದಲ್ಲಿದ್ದರೂ ಸರಿ, ಅಲ್ಲಿನ ಭಾರತೀಯ ರಾಜಯಭಾರ ಕಛೇರಿ ನಿಮಗೆ ನೆರವು ನೀಡುತ್ತದೆ” ಎಂದು ಉತ್ತರಿಸಿದ್ದಾರೆ. ಸುಷ್ಮಾ ಸ್ವರಾಜ್ ನೀಡಿದ ಉತ್ತರಕ್ಕೆ ನೆಟ್ಟಿಗರು ಪ್ರಶಂಸೆಗಳ ಸುರಿಮಳೆ ಮಾಡಿದ್ದಾರೆ. ಮತ್ತೊಂದು ಕಡೆ ಕೇಂದ್ರ ಸಚಿವರಿಗೆ ಇಂತಹ ತುಂಟತನದ ಟ್ವೀಟ್ ಮಾಡುವುದು ಎಷ್ಟು ಸರಿ ಎಂದು ಟ್ವೀಟ್ ಮಾಡಿರುವ ವ್ಯಕ್ತಿಗೆ ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರ ಬಿಸಿ ಅರಿತ ಟ್ವೀಟ್ ಮಾಡಿದ ವ್ಯಕ್ತಿ ಕೊನೆಗೂ ಕ್ಷಮೆಯಾಚಿಸಿ, ಇದು ತಮಾಷೆಗೆ ಮಾಡಿದ್ದೇ ಹೊರತು ಬೇರೆ ಉದ್ದೇಶವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

Loading...
loading...
error: Content is protected !!