ಚಲನಚಿತ್ರದ ಸೀನ್ ಶೇರ್ ಮಾಡಿ ಅತ್ಯಾಚಾರ ಎಂದ ಬಿಜೆಪಿ ನಾಯಕಿ |News Mirchi

ಚಲನಚಿತ್ರದ ಸೀನ್ ಶೇರ್ ಮಾಡಿ ಅತ್ಯಾಚಾರ ಎಂದ ಬಿಜೆಪಿ ನಾಯಕಿ

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಉಂಟಾದ ಕೋಮು ಗಲಭೆಗಳಲ್ಲಿ ಬಹಿರಂಗವಾಗಿ ಮಹಿಳೆಯೊಬ್ಬರ ಸೀರೆಯನ್ನು ಗುಂಪೊಂದು ಎಳೆದು ಹಿಂಸಿಸಿದರೆಂದು ಬಿಜೆಪಿ ನಾಯಕಿಯೊಬ್ಬರು ತಮ್ಮ ಫೇಸ್ ಬುಕ್ ಖಾತೆ ಮೂಲಕ ಶೇರ್ ಮಾಡಿಕೊಂಡಿದ್ದರು.

ಆದರೆ ಬಿಜೆಪಿ ನಾಯಕಿ ಶೇರ್ ಮಾಡಿದ್ದ ಚಿತ್ರ ಈಗ ನಕಲಿ ಎಂದು ತಿಳಿದು ಬಂದಿದೆ. ಭೋಜ್ ಪುರಿ ಚಲನ ಚಿತ್ರ “ಔರತ್ ಖಿಲೋನಾ ನಹೀ” ದೃಶ್ಯವನ್ನು ಕತ್ತರಿಸಿ ಇದನ್ನು ಚಿತ್ರದ ರೂಪಕ್ಕೆ ಬದಲಿಸಿ ಗಲಭೆಯಲ್ಲಿ ನಡೆದಂತೆ ಯಾರೋ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಇದು ತಿಳಿಯದ ಬಿಜೆಪಿ ನಾಯಕಿ ಶೇರ್ ಮಾಡಿದ್ದರು.

ಹರಿಯಾಣದ ಬಿಜೆಪಿ ನಾಯಕಿ ವಿಜೇತ ಮಾಲಿಕ್ ಇದನ್ನು ಶೇರ್ ಮಾಡಿದವರು. ಈ ಫೋಟೋ ಪ್ರಚೋದಿಸುವಂತೆ ಇದೆ ಎಂದು ಸಾಮಾಜಿಕ ತಾಣದಲ್ಲಿ ಹಲವರು ಆಕೆಯ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಘಟನೆ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದು, ಬಿಜೆಪಿ ಬೇಕಂತಲೇ ರಾಜ್ಯದಲ್ಲಿ ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ, ಆರ್.ಎಸ್.ಎಸ್ ಮೇಲೆ ಆಕೆ ಕಿಡಿ ಕಾರಿದರು. ಇಂತಹ ಫೇಕ್ ಫೋಟೋಗಳು, ವೀಡಿಯೋಗಳನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇಂತಹ ವದಂತಿಗಳನ್ನು ನಂಬದೆ ಸಂಯಮ ಪಾಲಿಸಿದ ಜನತೆಗೆ ಅಭಿನಂದನೆಗಳು ಎಂದು ಹೇಳಿದ್ದರು. ಈಗಾಗಲೇ ಈ ನಕಲಿ ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

Loading...
loading...
error: Content is protected !!