ವಾಟ್ಸಾಪ್ ನಲ್ಲಿ ಲೈವ್ ಲೊಕೇಷನ್ ಶೇರಿಂಗ್

ವಾಟ್ಸಾಪ್ ಇತ್ತೀಚೆಗೆ ಹೊಸ ಹೊಸ ಫೀಚರ್ ಗಳನ್ನು ತನ್ನ ಬಳಕೆದಾರರಿಗೆ ಪರಿಚಯಿಸುತ್ತಿರುವ ವಿಷಯ ನಮಗೆ ತಿಳಿದದ್ದೇ. ಈ ಹೊಸ ಫೀಚರ್ ಗಳಿಗೆ ಉತ್ತಮ ಪ್ರತಿಕ್ರಿಯೆಗಳೂ ವ್ಯಕ್ತವಾಗುತ್ತಿವೆ. ಇದೀಗ ವಾಟ್ಸಾಪ್ ಮತ್ತೊಂದು ಫೀಚರ್ ಅನ್ನು ಬಿಡುಗಡೆ ಮಾಡಿದೆ.

ಲೈವ್ ಲೊಕೇಷನ್ ಶೇರಿಂಗ್ ವೈಶಿಷ್ಟ್ಯವನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದ್ದು, ಇದರ ಮೂಲಕ ಮಹಿಳೆಯರು, ಮಕ್ಕಳು, ಸ್ನೇಹಿತರು ಯಾರೇ ಆಗಲಿ ಎಲ್ಲಾದರೂ ಪ್ರಯಾಣಿಸುತ್ತಿದ್ದಾಗ ತಮ್ಮ ಕುಟುಂಬ ಸದಸ್ಯರು, ಸ್ನೇಹಿತರಿಗೆ ತಾವಿರುವ ಸ್ಥಳದ ಬಗ್ಗೆ ಸುಲಭವಾಗಿ ತಿಳಿಯುವಂತೆ ಮಾಡಬಹುದು.

ಈ ಹೊಸ ಫೀಚರ್ ಆಂಡ್ರಾಯ್ಡ್, ಐಒಎಸ್ ಸ್ಮಾರ್ಟ್ ಫೋನ್ ಗಳಿಗೆ ಈಗ ಲಭ್ಯವಿದೆ. ಚಾಟ್ ಬಾಕ್ಸ್ ಬಲಭಾಗದಲ್ಲಿ ಅಟ್ಯಾಚ್ಮೆಂಟ್ ಗುರುತಿನ ಮೇಲೆ ಕ್ಲಿಕ್ ಮಾಡುವ ಮೂಲಕ ಹೊಸ ಫೀಚರ್ ಅನ್ನು ಬಳಸಬಹುದು. ಚಾಟ್ ನಲ್ಲಿ ಪಾಲ್ಗೊಂಡಿರುವ ವ್ಯಕ್ತಿ (ಗ್ರೂಪ್ ನಲ್ಲಿ ಆದರೆ ಸದಸ್ಯರು) ನೀವಿರುವ ಸ್ಥಳವನ್ನು ತಿಳಿಯಬಹುದು ಎಂದು ವಾಟ್ಸಾಪ್ ಹೇಳಿದೆ.

ಕುಟುಂಬ ಸದಸ್ಯರು ಅಥವಾ ಸ್ನೇಹಿತರೊಂದಿಗೆ ರಿಯಲ್ ಟೈಮ್ ನಲ್ಲಿ ಲೊಕೇಷನ್ ಶೇರ್ ಮಾಡಬಹದು. ಯಾವ ಸಂದರ್ಭದಲ್ಲಿಯೇ ಆದರೂ ಈ ಶೇರಿಂಗ್ ಅನ್ನು ನಿಲ್ಲಿಸಬಹುದು. ಆಗ ಲೈವ್ ಲೊಕೇಷನ್ ಟೈಮರ್ ಕೂಡಾ ನಿಂತು ಹೋಗುತ್ತದೆ. 15 ನಿಮಿಷಗಳ ಕಾಲ ನಿರಂತರವಾಗಿ ಲೈವ್ ನಲ್ಲಿ ಇರಬಹುದು, ಹೀಗೆ ಗರಿಷ್ಟ ಎಂಟು ಗಂಟೆಗಳ ಕಾಲ ಲೈವ್ ನಲ್ಲಿರುವ ಆಯ್ಕೆ ಮಾಡಿಕೊಳ್ಳಬಹುದು ಎಂದು ಕಂಪನಿ ಹೇಳಿದೆ. ಹಾಗೆಯೇ ಗ್ರೂಪ್ ಗಳಿಗೆ ಸಂಬಂಧಿಸಿದಂತೆ ಲೈವ್ ಲೊಕೇಷನ್ ಅನ್ನು ಆಯ್ಕೆ ಮಾಡಿಕೊಳ್ಳುವ ಗ್ರೂಪ್ ಸದಸ್ಯರ ಲೊಕೇಷನ್ಸ್ ಒಂದೇ ಮ್ಯಾಪ್ ನಲ್ಲಿ ಕಾಣಿಸುತ್ತದೆ. ಎಷ್ಟು ಸಮಯ ಲೈವ್ ನಲ್ಲಿರಬೇಕು ಎಂಬುದು ಬಳಕೆದಾರರ ಆಯ್ಕೆಗೆ ಬಿಟ್ಟಿದ್ದು.

ವಾಟ್ಸಾಪ್ ನೀಡುತ್ತಿರುವ ಈ ಲೈವ್ ಲೊಕೇಷನ್ ಫೀಚರ್ ಮೂಲಕ ಮಹಿಳೆಯರು ತಮ್ಮ ರಿಯಲ್ ಟೈಮ್ ಲೊಕೇಷನ್ ಅಥವಾ ಪ್ರಯಾಣದ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಲು ಅನುಕೂಲವಾಗುತ್ತದೆ. ಅಪಾಯಕಾರಿ ಸಂದರ್ಭಗಳು, ಪ್ರವಾಹ ಮುಂತಾದ ತುರ್ತು ಸಂದರ್ಭಗಳಲ್ಲಿ ಈ ಫೀಚರ್ ಹೆಚ್ಚು ಸಹಕಾರಿಯಾಗುತ್ತದೆ ಎಂದು ಸಂಸ್ಥೆ ಹೇಳಿದೆ.

[ಇದನ್ನೂ ಓದಿ: 103 ಹುತಾತ್ಮರ ಕುಟುಂಬಗಳಿಗೆ ಅಕ್ಷಯ್ ಕುಮಾರ್ ದೀಪಾವಳಿ ಗಿಫ್ಟ್]

Get Latest updates on WhatsApp. Send ‘Add Me’ to 8550851559