ವಾಟ್ಸಾಪ್ ಗೆ ಬರಲಿದೆ ಹೊಸ ಫೀಚರ್… – News Mirchi
We are updating the website...

ವಾಟ್ಸಾಪ್ ಗೆ ಬರಲಿದೆ ಹೊಸ ಫೀಚರ್…

ಸದಾ ಹೊಸ ಹೊಸ ಫೀಚರ್ ಗಳೊಂದಿಗೆ ಬಳಕೆದಾರರನ್ನು ಆಕರ್ಷಿಸುತ್ತಿರುವ ವಾಟ್ಸಾಪ್, ಇದೀಗ ಮತ್ತೊಂದು ಹೊಸ ಫೀಚರ್ ಅನ್ನು ತನ್ನ ಬಳಕೆದಾರರಿಗೆ ನೀಡಲಿದೆ. ಇತ್ತೀಚೆಗೆ ಡಿಜಿಟಲ್ ವ್ಯವಹಾರಗಳು ಹೆಚ್ಚಾಗುತ್ತಿರುವುದರಿಂದ ಯು.ಪಿ.ಐ(ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್) ಮೂಲಕ ಡಿಜಿಟಲ್ ಪೇಮೆಂಟ್ ಸೌಲಭ್ಯವನ್ನು ವಾಟ್ಸಾಪ್ ಗೆ ಸೇರಿಸಲು ಸಿದ್ಧವಾಗುತ್ತದೆ. ಈಗಾಗಲೇ ವಾಟ್ಸಾಪ್ ವಿದೇಶೀಗ ಬ್ಯಾಂಕುಗಳು ಮತ್ತು ಇತರೆ ಸಂಸ್ಥೆಗಳೊಂದಿಗೆ ಚರ್ಚೆಗಳನ್ನು ಆರಂಭಿಸಿದೆ.

ತನ್ನ ಮೊಬೈಲ್ ಆಪ್ ನಲ್ಲಿ ಎರಡು ಬ್ಯಾಂಕುಗಳ ನಡುವೆ ತ್ವರಿತ ಹಣ ವರ್ಗಾವಣೆಗೆ ಅವಕಾಶ ಕಲ್ಪಿಸಲಿದೆ. ಈ ಸೇವೆಗಳು ಆರಂಭದಲ್ಲಿ ಸ್ವಲ್ಪ ಕಷ್ಟದಿಂದ ಕೂಡಿರುವ ಕಾರಣ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎನ್.ಪಿ.ಸಿ.ಐ, ಮತ್ತಿತರ ಬ್ಯಾಂಕುಗಳೊಂದಿಗೆ ಚರ್ಚಿಸುತ್ತಿದೆ. ಬ್ಯಾಂಕುಗಳು ಎನ್.ಪಿ.ಸಿ.ಐ ನೊಂದಿಗೆ ತಮ್ಮ ಸಿಸ್ಟಮ್ ಹೇಗೆ ಇಂಟಿಗ್ರೇಟ್ ಆಗಬೇಕು ಎಂದು ತೀರ್ಮಾನಿಸುತ್ತವೆ ಎಂದು ಹಿರಿಯ ಎಸ್.ಬಿ.ಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಯುಪಿಐ(ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್) ಅನ್ನು ಎನ್.ಪಿ.ಸಿ.ಐ ನಿರ್ವಹಿಸುತ್ತಿದೆ. ಈ ಯುಪಿಐ ಆಧಾರ ಮೇಲೆ ಕೆಲಸ ಮಾಡುವ ಪೀರ್-ಟು-ಪೀರ್ (ಪರ್ಸನ್ ಟು ಪರ್ಸನ್) ಪೇಮೆಂಟ್ ಸೇವೆಗಳನ್ನು ವಾಟ್ಸಾಪ್ ನಲ್ಲಿ ಬಳಕೆದಾರರು ಉಪಯೋಗಿಸಬಹುದು. ನೋಟು ರದ್ದು ಕ್ರಮದ ನಂತರ ದೇಶವನ್ನು ನಗದು ರಹಿತ ಸಮಾಜವನ್ನಾಗಿ ಬದಲಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡಿಜಿಟಲೀಕರಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿವೆ. ಈ ನಗದು ರಹಿತ ಸಮಾಜದಲ್ಲಿ ತಾವೂ ಪಾಲುದಾರರಾಗಬೇಕೆಂದು ಸೋಷಿಯಲ್ ಮೀಡಿಯಾ ದಿಗ್ಗಜಗಳು ಮುಂದಾಗಿವೆ. ಈ ಸಂಬಂಧ ಹೈಕ್ ಮೆಸೇಜಿಂಗ್ ಆಪ್ ಈಗಾಗಲೇ ಈ ಫೀಚರ್ ಅನ್ನು ಪರಿಚಯಿಸಿದೆ.

ವಾಟ್ಸಾಪ್ ಗಿಂತಲೂ ಮುನ್ನವೇ ಈ ಫೀಚರ್ ಅನ್ನು ಪರಿಚಯಿಸಿ, ಪೇಮೆಂಟ್ಸ್ ಫೀಚರ್ ಅನ್ನು ಪರಿಚಯಿಸಿದ ಪ್ರಥಮ ಮೆಸೇಜಿಂಗ್ ಆಪ್ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ. ಆದರೆ ವಾಟ್ಸಾಪ್ ಮೂಲಕ ಪೇಮೆಂಟ್ಸ್ ಅನ್ನು ಜಾರಿಗೊಳಿಸಬೇಕೆಂದರೆ ಕೆಲ ಭದ್ರತಾ ಪ್ರಕ್ರಿಯೆಗಳು ಅಗತ್ಯ. ಒಂದು ವೇಳೆ ಇದಕ್ಕೆ ಆಧಾರ್ ಬಳಸಬೇಕೆಂದಿದ್ದರೆ, ಆಗ ತಾವು ಬಯೋಮೆಟ್ರಿಕ್ ದೃಢೀಕರಣ ಸಕ್ರಿಯಗೊಳಿಸುತ್ತೇವೆ ಎಂದು ಮತ್ತೊಬ್ಬ ಎಗ್ಸಿಕ್ಯೂಟಿವ್ ಹೇಳಿದ್ದರು. ಸದ್ಯ ಭಾರತದಲ್ಲಿ ವಾಟ್ಸಾಪ್ ಗೆ 20 ಕೋಟಿಯಷ್ಟು ಬಳಕೆದಾರರಿದ್ದಾರೆ.

Contact for any Electrical Works across Bengaluru

Loading...
error: Content is protected !!