ವಾಟ್ಸಾಪ್ ‘ಪೇಮೆಂಟ್ಸ್’ ಸೇವೆ ಆರಂಭ

ಸದಾ ಹೊಸ ಹೊಸ ಫೀಚರ್ ಗಳೊಂದಿಗೆ ಬಳಕೆದಾರರನ್ನು ಆಕರ್ಷಿಸುತ್ತಿರುವ ವಾಟ್ಸಾಪ್, ಇದೀಗ ಮತ್ತೊಂದು ಹೊಸ ಫೀಚರ್ ಅನ್ನು ಬಳಕೆದಾರರಿಗೆ ಪರಿಚಯಿಸುತ್ತಿದೆ. ಮೊಬೈಲ್ ನಲ್ಲಿ ವಾಟ್ಸಾಪ್ ಇದ್ದರೆ ಸಾಕು, ಇನ್ನು ಮುಂದೆ ಹಣ ಪಾವತಿ ಮಾಡಬಹುದು. ‘ವಾಟ್ಸಾಪ್ ಪೇಮೆಂಟ್ಸ್’ ಮೂಲಕ ಈ ಸೌಲಭ್ಯವನ್ನು ತಂದಿದೆ.

ಯೂನಿಫೈಡ್ ಪೇಮೆಮಟ್ಸ್ ಇಂಟರ್ಫೇಸ್(ಯುಪಿಐ) ಮೂಲಕ ವಾಟ್ಸಾಪ್ ಮೂಲಕ ನಗದು ವ್ಯವಹಾರಗಳನ್ನು ನಡೆಸಬಹುದು. ಐಒಎಸ್, ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ‘ವಾಟ್ಸಾಪ್ ಬೀಟಾ ವರ್ಷನ್’ ಬಳಸುತ್ತಿರುವವರ ಸದ್ಯ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಐಒಎಸ್ ನಲ್ಲಿ 2.18.21 ಹಾಗೂ ಆಂಡ್ರಾಯ್ಡ್ ನಲ್ಲಿ 2.18.41 ವಾಟ್ಸಾಪ್ ವರ್ಷನ್ ಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ಪೇಮೆಂಟ್ಸ್ ಆಯ್ಕೆಯಲ್ಲಿ ಲಾಗಿನ್ ಆದವರಿಗೆ ಮಾತ್ರ ನಗದು ವ್ಯವಹಾರಗಳನ್ನು ನಡೆಸಬಹುದು.

ಅಗತ್ಯ ಬಿದ್ದರೆ ದೇಶಕ್ಕಾಗಿ ಗಡಿಯಲ್ಲಿ ನಿಂತು ಹೋರಾಡಲು ಆರ್.ಎಸ್.ಎಸ್ ಸಿದ್ಧ

ವಾಟ್ಸಾಪ್ ಮೂಲಕ ನಗದು ವ್ಯವಹಾರ ಮಾಡಲು ಬಯಸುವವರು ಮೊದಲು ವಾಟ್ಸಾಪ್ ನಲ್ಲಿ ಚಾಟ್ ವಿಂಡೋ ಓಪನ್ ಮಾಡಬೇಕು. ಚಾಟ್ ವಿಂಡೋ ತೆರೆದ ನಂತರ ಗ್ಯಾಲರಿ, ವೀಡಿಯೋ, ಡಾಕ್ಯುಮೆಂಟ್ಸ್ ಜೊತೆಗೆ ಪಟ್ಟಿಯಲ್ಲಿ ಕಾಣುವ ‘ಪೇಮೆಂಟ್ಸ್’ ಆಯ್ಕೆಯನ್ನು ಒತ್ತಬೇಕು. ಅಲ್ಲಿ ಕಾಣಿಸುವ ಬ್ಯಾಂಕುಗಳ ಪಟ್ಟಿಯಲ್ಲಿ ಯುಪಿಐ ಸಂಪರ್ಕವಿರುವ ನಿಮ್ಮ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಇನ್ನೂ ಮುಗಿಯದ ಹಳೆಯ ನೋಟು ಎಣಿಕೆ

ಒಂದು ವೇಳೆ ಯುಪಿಐ ಪೇಮೆಂಟ್ಸ್ ಅನ್ನು ಬಳಸುತ್ತಿಲ್ಲದಿದ್ದಲ್ಲಿ, ದೃಢೀಕರಣಕ್ಕಾಗಿ ಪಿನ್ ಸಂಖ್ಯೆಯನ್ನು ಕೇಳುತ್ತದೆ. ನಂತರ ಯುಪಿಐ ಅಥವಾ ಬ್ಯಾಂಕ್ ವೆಬ್ಸೈಟ್, ಆಪ್ ಮೂಲಕ ಯುಪಿಐ ಖಾತೆಯನ್ನು ಸಕ್ರಿಯಗೊಳಿಸಿಕೊಳ್ಳಬೇಕು. ವ್ಯವಹಾರ ನಡೆಸುವ ಇಬ್ಬರು ಬಳಕೆದಾರರ ಬಳಿಯೂ ವಾಟ್ಸಾಪ್ ಬೀಟಾ ವರ್ಷನ್ ಇರಲೇಬೇಕು.

Get Latest updates on WhatsApp. Send ‘Subscribe’ to 8550851559