ಹಳೆಯ ಮೊಬೈಲ್‌ಗಳಲ್ಲಿ ವಾಟ್ಸಾಪ್ ಸೇವೆ ಸ್ಥಗಿತಗೊಳ್ಳಲಿದೆ

ಒಂದು ಬಿಲಿಯನ್ ಗೂ ಅಧಿಕ ಮಾಸಿಕ ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ ಮಾಲಿಕತ್ವದ ವಾಟ್ಸಾಪ್ ವಿಶ್ವಾದ್ಯಂತ ಪ್ರಸಿದ್ಧ ಮೆಸೇಜಿಂಗ್ ಆಪ್ ಆಗಿದೆ. ಮೂಲಗಳ ಪ್ರಕಾರ ಇದೀಗ ವಾಟ್ಸಾಪ್ 2016 ರ ಅಂತ್ಯದ ವೇಳೆಗೆ ಒಂದಷ್ಟು ಬಳಕೆದಾರರನ್ನು ಕಳೆದುಕೊಳ್ಳಲಿದೆ. ಕಾರಣ ಹಳೆಯ ಸ್ಮಾರ್ಟ್ ಫೊನ್ ಗಳಿಗೆ ವಾಟ್ಸಾಪ್ ಹೊಂದಾಣಿಕೆಯ ಸಮಸ್ಯೆಗಳು.

ಯುಕೆ ಪತ್ರಿಕೆ ದ ಮಿರರ್ ಪ್ರಕಾರ, ಈ ವರ್ಷದ ಅಂತ್ಯದ ವೇಳೆಗೆ ಕೆಲವು ಮಿಲಿಯನ್ ಮೊಬೈಲ್ ಗಳಲ್ಲಿ ವಾಟ್ಸಾಪ್ ಸೇವೆ ಸ್ಥಗಿತಗೊಳ್ಳಲಿದೆ.

ಹಳೆಯ ಮೊಬೈಲ್‌ಗಳು ವಾಟ್ಸಾಪ್ ತರುತ್ತಿರುವ ಹೊಸ ಫೀಚರ್‌ಗಳಿಗೆ ಸಪೋರ್ಟ್ ಮಾಡದಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಐಒಎಸ್ 6 ಕೆಳಗಿನ ಆಪರೇಟಿಂಗ್ ಸಿಸ್ಟಮ್ ಮತ್ತು ಅಂಡ್ರಾಯ್ಡ್ 2.2 ಕೆಳಗಿನ ಮೊಬೈಲುಗಳಲ್ಲಿ ವಾಟ್ಸಾಪ್ ಸೇವೆ ಸ್ಥಗಿತಗೊಳ್ಳಬಹುದು. ವಿಂಡೋಸ್ 7 ಕೆಳಗಿನ ಮೊಬೈಲುಗಳಿಗೂ ವಾಟ್ಸಾಪ್ ಸೇವೆ ನಿಲ್ಲಬಹುದು. ನೀವು ಹಳೆಯ ಮೊಬೈಲ್ ಬಳಸುತ್ತಿದ್ದರೆ, ಈಗ ನಿಮಗೆ ಹೊಸ ಮೊಬೈಲ್ ಖರೀದಿಸುವ ಸಮಯ.

With over a  billion monthly customers, facebook-owned WhatsApp is one of the most popular messaging app globally. However in keeping with media reports, the app is ready to lose a number of its users by means of the end of 2016, as it’d section out compatibility with older smartphones.