ಇನ್ನೂ ಪತ್ತೆಯಾಗಿಲ್ಲ ನ್ಯಾಯಾದೀಶ ಕರ್ಣನ್?

ನವದೆಹಲಿ: ಕರ್ಣನ್ ಎಲ್ಲಿದ್ದಾರೆ? ಅವರನ್ನು ಯಾವಾಗ ಬಂಧಿಸುತ್ತಾರೆ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ. ಕೋಲ್ಕತಾ ಹೈಕೋರ್ಟ್ ನ್ಯಾಯಾಧೀಶರಾದ ಜಸ್ಟೀಸ್ ಕರ್ಣನ್ ಗಾಗಿ ಪೊಲೀಸರು ಹುಡುಕುತ್ತಿರುವ ವಿಷಯ ನಮಗೆ ತಿಳಿದೇ ಇದೆ. ಸುಪ್ರೀಂ ಕೋರ್ಟ್ ನ ಏಳು ಜನರ ನ್ಯಾಯಾಧೀಶರ ಸಂವಿಧಾನ ಪೀಠ ಕರ್ಣನ್ ಮೇಲೆ ಬಂಧನ ವಾರೆಂಟ್ ಹೊರಡಿಸಿದೆ. ಅಂದಿನಿಂದ ಕರ್ಣನ್ ಎಲ್ಲಿದ್ದಾರೆ ಎಂಬುದೇ ಯಾರಿಗೂ ತಿಳಿದಿಲ್ಲ.

ತಮಿಳುನಾಡು ಪೊಲೀಸರ ನೆರವು ಪಡೆದು ಶೋಧಿಸಿದರೂ ಇದುವರೆಗೂ ಅವರನ್ನು ಪತ್ತೆ ಹಚ್ಚಲಾಗಿಲ್ಲ. ಇದರ ನಡುವೆಯೇ ಜಸ್ಟೀಸ್ ಕರ್ಣನ್ ಅಜ್ಞಾತದಲ್ಲಿದ್ದುಕೊಂಡೇ ನಿವೃತ್ತಿಯಾಗಲಿದ್ದಾರೆ ಎಂಬ ಸುದ್ದಿಗಳೂ ಹರಿದಾಡುತ್ತಿವೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ಇತರೆ ಏಳು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೇ ಜಸ್ಟೀಸ್ ಕರ್ಣನ್ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ್ದರು. ಈ ಎಂಟು ಜನರು ಎಸ್ಸಿ, ಎಸ್ಟಿ ಅತ್ಯಾಚಾರ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧ ಮಾಡಿದ್ದಾರೆ ಎಂದು ಕರ್ಣನ್ ಸಂಚಲನ ತೀರ್ಪು ನೀಡಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸೂಪ್ರೀಂ ಕೋರ್ಟ್, ಜಸ್ಟೀಸ್ ಕರ್ಣನ್ ಅವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದರು.