rahul-gandhi-bsy

ಕರ್ನಾಟಕಕ್ಕೆ ಒಂದು ಹನಿ ನೀರೂ ಬಿಡೋಲ್ಲ ಅಂದಿದ್ರು ಸೋನಿಯಾ, ನಿಮ್ಮನ್ನು ಯಾರು ನಂಬುತ್ತಾರೆ: ಯಡಿಯೂರಪ್ಪ

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಕರ್ನಾಟಕಕ್ಕೆ ನೀರು ಬಿಡಲು ಗೋವಾ ಸರ್ಕಾರವನ್ನು ಒಪ್ಪಿಸಲು ನಾವು ಪ್ರಯತ್ನಿಸುತ್ತಿದ್ದರೆ, ಅಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿರುವ ನಿಮ್ಮದೇ ಕಾಂಗ್ರೆಸ್ ನಾಯಕರು ವಿರೋಧಿಸುತ್ತಿದ್ದಾರೆ. ರೈತರ ಪರ ಎಂದು ಹೇಳಿಕೊಳ್ಳುತ್ತಿರುವ ನೀವು ನೀರು ಬಿಡಲು ವಿರೋಧಿಸದಂತೆ ಗೋವಾ ಕಾಂಗ್ರೆಸ್ ಮುಖಂಡರನ್ನು ಒಪ್ಪಿಸಬಹುದಲ್ಲಾ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದ್ದಾರೆ.

ನೀರು ಬಿಡುವ ವಿಚಾರದಲ್ಲಿ ಕೇಂದ್ರ ಬಿಜೆಪಿ ಸರ್ಕಾರವನ್ನು ಎಳೆದು ತರುವ ಸಿದ್ದರಾಮಯ್ಯ, ಕರ್ನಾಟಕಕ್ಕೆ ನೀರು ಬಿಡಲು ವಿರೋಧಿಸುತ್ತಿರುವ ಗೋವಾ ಕಾಂಗ್ರೆಸ್ ಗೂ ಕರ್ನಾಟಕ ಕಾಂಗ್ರೆಸ್ ಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಾದ ನಿಮಗೂ ಕರ್ನಾಟಕಕ್ಕೂ ಸಂಬಂಧವಿರುವುದು ನಿಜವಾದರೆ ಸಿದ್ದರಾಮಯ್ಯನವರ ಹೇಳಿಕೆಯನ್ನು ಖಂಡಿಸುತ್ತೀರಾ ಎಂದು ಬಿ.ಎಸ್.ವೈ ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ್ದಾರೆ.

ಚಿಕನ್ ತಿಂದು ನರಸಿಂಹಸ್ವಾಮಿ ದರ್ಶನ ಮಾಡಿದ ರಾಹುಲ್: ಯಡಿಯೂರಪ್ಪ

2007 ರಲ್ಲಿ ಗೋವಾ ಚುನಾವಣೆ ಸಂದರ್ಭದಲ್ಲಿ ಮಾತನಾಡುತ್ತಿದ್ದ ಸೋನಿಯಾ ಗಾಂಧಿ, ಮಹದಾಯಿಯಿಂದ ಕರ್ನಾಟಕಕ್ಕೆ ಒಂದು ಹನಿ ನೀರನ್ನೂ ಬಿಡುವುದಿಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದ್ದರಲ್ಲ, ಈಗ ರೈತರ ಪರ ಎಂದು ಹೇಳಿಕೊಳ್ಳುವ ನಿಮ್ಮನ್ನು ಜನ ಹೇಗೆ ನಂಬುತ್ತಾರೆ?

ವೇದಗಳೇ ರಾಜ ಶಾಸನಗಳು : ಶ್ರೀ ಗುರುದತ್ತ ಚಕ್ರವರ್ತಿ ಸ್ವಾಮೀಜಿ

ರಾಹುಲ್ ಗಾಂಧಿಯವರನ್ನು ಚುನಾವಣಾ ಹಿಂದು ಎಂದು ಜರೆದಿರುವ ಯಡಿಯೂರಪ್ಪ, ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ 40 ವರ್ಷಗಳಿಂದ ರಾಜಕೀಯ ಮಾಡುತ್ತಿದೆ. ಕರ್ನಾಟಕ್ಕೆ ನೀರು ಬಿಡಲು ಗೋವಾ ಸರ್ಕಾರ ಸಿದ್ಧವಿದೆ. ಆದರೆ ನಿಮ್ಮ 10 ಪರ್ಸೆಂಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೂ ಹೆಚ್ಚು ನೀರಿಗೆ ಬೇಡಿಕೆ ಇಡುವ ಮೂಲಕ ತಕ್ಷಣದ ಪರಿಹಾರಕ್ಕೆ ಅಡ್ಡಿಯುಂಟು ಮಾಡಿದ್ದಾರಲ್ಲ  ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.


Get Latest updates on WhatsApp. Send ‘Subscribe’ to 8550851559