ರೋಹಿಂಗ್ಯಾ ನಿರಾಶ್ರಿತರನ್ನೇಕೆ ಮೋದಿ ಸಹೋದರರಂತೆ ಸ್ವೀಕರಿಸುತ್ತಿಲ್ಲ: ಓವೈಸಿ – News Mirchi

ರೋಹಿಂಗ್ಯಾ ನಿರಾಶ್ರಿತರನ್ನೇಕೆ ಮೋದಿ ಸಹೋದರರಂತೆ ಸ್ವೀಕರಿಸುತ್ತಿಲ್ಲ: ಓವೈಸಿ

ರೊಹಿಂಗ್ಯಾ ನಿರಾಶ್ರಿತರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸಹೋದರರೆಂದು ಏಕೆ ಸ್ವೀಕರಿಸುತ್ತಿಲ್ಲ ಎಂದು ಎಂಐಎಂ ಮುಖಂಡ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ. ರೊಹಿಂಗ್ಯಾ ನಿರಾಶ್ರಿತರಿಂದ ದೇಶದ ಭದ್ರತೆಗೆ ಬೆದರಿಕೆ ಇದೆ ಎಂದು ಹಿಂದೆ ಕಳುಹಿಸುವ ಕೇಂದ್ರ ಸರಕಾರದ ನಿರ್ಧಾರಕ್ಕೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ಅನೇಕ ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ, ಆದರೆ ರೋಹಿಂಗ್ಯಾ ಮುಸ್ಲಿಂ ನಿರಾಶ್ರಿತರಿಗೇಕೆ ಅನುಮತಿ ನೀಡುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರಿನ್ ಅವರಿಗೆ ಆಶ್ರಯ ನೀಡಲಾಗಿದೆ, 65 ಸಾವಿರ ತಸ್ಲಿಮ್ ನಿರಾಶ್ರಿತರು ದೇಶದಲ್ಲಿ ವಾಸಿಸಬಹುದು, ಆದರೆ ರೋಹಿಂಗ್ಯಾ ನಿರಾಶ್ರಿತರೇಕೆ ಇಲ್ಲಿ ವಾಸಿಸಬಾರದು ಎಂಬುದನ್ನು ಹೇಳಬೇಕೆಂದು ಅವರು ಒತ್ತಾಯಿಸಿದರು.

ಸುಮಾರು ಒಂದು ಲಕ್ಷ ಟಿಬೆಟಿಯನ್ ನಿರಾಶ್ರಿತರು ಮತ್ತು ಟಿಬೆಟ್ ನಾಯಕ ದಲೈಲಾಮಾ ಅವರಿಗೆ ಇಲ್ಲಿ ಆಶ್ರಯ ಕಲ್ಪಿಸಲಾಗಿದೆ. ಬಾಂಗ್ಲಾದೇಶದಿಂದ ಬಂದ ಚಕ್ಮಾ ನಿರಾಶ್ರಿತರು ಅರುಣಾಚಲ ಪ್ರದೇಶದಲ್ಲಿ ಶಾಶ್ವತ ಆಶ್ರಯವನ್ನು ಪಡೆದಿದ್ದಾರೆ. ಪಾಕ್-ಇಂಡಿಯಾ ಯುದ್ಧದ ಸಮಯದಲ್ಲಿ ಸಾವಿರಾರು ಭಾರತೀಯರು ಭಾರತಕ್ಕೆ ಬಂದಿದ್ದು, ಅವರಿಗೆ ಭಾರತೀಯ ಪೌರತ್ವ ನೀಡಿ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ. 130 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ 40,000 ರೋಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ನೀಡಿದರೆ ಏನಾಗುತ್ತದೆ ಎಂದು ಓವೈಸಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

[ಇದನ್ನೂ ಓದಿ: ರೋಹಿಂಗ್ಯಾ ಅಕ್ರಮ ವಲಸಿಗರ ವಿಷಯದಲ್ಲಿ ಕೇಂದ್ರದ ದೃಢ ನಿಲುವು]

ರೋಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ನೀಡಿದರೆ ರಾಷ್ಟ್ರೀಯ ಭದ್ರತೆಗೆ ಅಪಾಯ ಇದೆ, ಹೀಗಾಗಿ ಅವರನ್ನು ಭಾರತದಲ್ಲಿ ಇರಲು ಅನುಮತಿ ನೀಡಬಾರದು ಎಂದು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಜಮ್ಮೂ, ದೆಹಲಿ, ಹೈದರಾಬಾದ್, ಮೇವತ್ ಪ್ರದೇಶಗಳಲ್ಲಿ ರೋಹಿಂಗ್ಯಾ ಉಗ್ರಗಾಮಿಗಳು ಸಕ್ರಿಯರಾಗಿದ್ದಾರೆ, ಅವರನ್ನು ಐಸಿಸ್ ನಂತಹ ಉಗ್ರಗಾಮಿ ಸಂಘಟನೆಗಳು ಬಳಸಿಕೊಳ್ಳುವ ಅಪಾಯವಿದೆ ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಹೇಳಿದೆ.

Click here for Website

Get Latest updates on WhatsApp. Send ‘Add Me’ to 8550851559

Click for More Interesting News

Loading...
error: Content is protected !!