ಬಾಟಲ್ ನೀರಿಗೇಕೆ ಬೇಕು ಎಕ್ಸ್ಪೈರಿ ಡೇಟ್?

ಬಾಟಲ್ ನೀರು ಮಾರಾಟಗಾರರು ಸೀಲ್ ಮಾಡಲಾದ ಬಾಟಲ್ ಗಳ ಮೇಲೆ ಸುರಕ್ಷತಾ ನಿಬಂಧನೆಗಳಿಗೆ ಅನುಗುಣವಾಗಿ ಎಕ್ಸ್ಪೈರೀ ದಿನಾಂಕವನ್ನು (Expiry date) ಅನ್ನು ಮುದ್ರಿಸಿರುತ್ತಾರೆ? ಸುರಕ್ಷಿತವಾಗಿ ಬಾಟಲಿನಲ್ಲಿ ಪ್ಯಾಕ್ ಮಾಡಲಾದ ನೀರು ಕೆಡುವ ಸಾಧ್ಯತೆ ಇಲ್ಲದಿದ್ದರೂ, ಅದೇಕೆ ಎಕ್ಸ್ಪೈರೀ ಡೇಟ್ ಹಾಕಬೇಕು? ಎಂಬ ಪ್ರಶ್ನೆ ಹುಟ್ಟತ್ತದೆ.

ಪ್ಯಾಕ್ ಮಾಡಲಾದ ನೀರು ನಾವು ಎಷ್ಟೇ ಸುರಕ್ಷಿತವೆಂದುಕೊಂಡರೂ, ಬಾಟಲ್ ತಯಾರಿಕೆಯಲ್ಲಿ ಬಳಸಲಾಗಿರುವ ಪ್ಲಾಸ್ಟಿಕ್ ನ ಗುಣಮಟ್ಟ ದಿನಕಳೆದಂತೆ ಕುಸಿಯಲು ಆರಂಭಿಸುತ್ತದೆ. ಅದರಲ್ಲಿನ ಕೆಮಿಕಲ್ ನೀರಿನಲ್ಲಿ ಕರಗಲು ಆರಂಭಿಸುತ್ತದೆ. ಇದು ವಿಷಯಕಾರಿಯಾಗಿ ಬದಲಾಗದಿದ್ದರೂ, ಅದರ ರುಚಿಯಲ್ಲಿ ಬದಲಾವಣೆ ಖಂಡಿತ ಆಗುತ್ತದೆ. ಇದು ತಯಾರಕರು ಮತ್ತು ಗ್ರಾಹಕರ ನಡುವೆ ಗುದ್ದಾಟಕ್ಕೆ ಕಾರಣವಾಗಬಹುದು.

ಹಾಗಾಗಿ ನಿರ್ದಿಷ್ಟ ದಿನಾಂಕದ ನಂತರ ನೀರಿನ ರುಚಿಯಲ್ಲಿ ಯಾವುದೇ ಬದಲಾವಣೆ ಬಂದರೂ ಈ ಹೊಣೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿಯೇ ಬಾಟಲ್ ಮೇಲೆ ಎಕ್ಸ್ಪೈರಿ ಡೇಟ್ ಬರೆದಿರುತ್ತಾರೆ. ಸರ್ಕಾರದ ನಿಯಮಗಳೂ ಯಾವುದೇ ಆಹಾರ ಉತ್ಪನ್ನಗಳು ಕಡ್ಡಾಯವಾಗಿ ಮುಕ್ತಾಯದ ದಿನಾಂಕವನ್ನು ಮುದ್ರಿಸಲೇಬೇಕು ಎಂದು ಹೇಳುತ್ತದೆ. ಹಾಗಾಗಿ ಇದು ನೀರಿಗೂ ಅನ್ವಯಿಸುತ್ತದೆ.

ಮೊಬೈಲ್ ಕಳ್ಳರಿಗಿದು ಕಹಿ ಸುದ್ದಿಯಂತೆ ಯಾಕೆ ಗೊತ್ತಾ…?