ಇಬ್ಬರೂ ಪ್ರಧಾನಿಗಳು ಹುದ್ದೆಯಿಂದ ಇಳಿಯಿರಿ! : ಪ್ರಧಾನಿಗಳು ನಕ್ಕಿದ್ದೇಕೆ? |News Mirchi

ಇಬ್ಬರೂ ಪ್ರಧಾನಿಗಳು ಹುದ್ದೆಯಿಂದ ಇಳಿಯಿರಿ! : ಪ್ರಧಾನಿಗಳು ನಕ್ಕಿದ್ದೇಕೆ?

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ, ಬಾಂಗ್ಲಾದೇಶ ಪ್ರಧಾನಮಂತ್ರಿ ಶೇಖ್ ಹಸೀನಾ ಇಬ್ಬರೂ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಮಾಷೆಯ ಪ್ರಸಂಗವೊಂದು ನಡೆಯಿತು. ಇಬ್ಬರೂ ಪ್ರಧಾನಿಗಳು ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಕಾರ್ಯಕ್ರಮದ ಆಯೋಜಕರು ಹೇಳಿದ್ದು ಒಂದು ಕ್ಷಣ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು.

ಭಾರತದ ಪ್ರವಾಸ ಕೈಗೊಂಡಿರುವ ಬಾಂಗ್ಲಾ ಪ್ರಧಾನಿ ಹಸೀನಾ, ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ, ಪತ್ರಿಕಾಗೋಷ್ಟಿಯಲ್ಲಿ ಔಪಚಾರಿಕವಾಗಿ ಹಲವು ಒಪ್ಪಂದಗಳಿಗೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ವೇದಿಕೆಯಿಂದ ಕೆಳಗಿಳಿಯುವಂತೆ ಮನವಿ ಮಾಡುತ್ತಿದ್ದೇನೆ ಎನ್ನುವುದರ ಬದಲು ಬಾಯ್ತಪ್ಪಿನಿಂದ “ಇಬ್ಬರೂ ಪ್ರಧಾನಿಗಳು ಹುದ್ದೆಯಿಂದ ಕೆಳಗಿಳಿಯುವಂತೆ ಮನವಿ ಮಾಡುತ್ತಿದ್ದೇನೆ” ಎಂದು ಆಯೋಜಕರು ಹೇಳಿದರು. ಈ ಅಚಾತುರ್ಯದ ಮಾತನ್ನು ಕೂಡಲೇ ಅರ್ಥ ಮಾಡಿಕೊಂಡ ಪ್ರಧಾನಿ ಮೋದಿ ಮುಗುಳ್ನಗುತ್ತಾ ವೇದಿಕೆಯಿಂದ ಕೆಳಗಿಳಿದರು. ಹಾಗೆಯೇ ಹಸೀನಾ ಸಹಾ ಮುಗುಳ್ನಗುತ್ತಾ ವೇದಿಕೆಯಿಳಿದರು.

Loading...
loading...
error: Content is protected !!