ಮೋದಿ ಇಸ್ರೇಲ್ ಪ್ರವಾಸಕ್ಕೇಕೆ ಪ್ರಾಮುಖ್ಯತೆ?

ಅತ್ಯಾಧುನಿಕ ತಂತ್ರಜ್ಞಾನಕ್ಕೆ ಮತ್ತೊಂದು ಹೆಸರು ಇಸ್ರೇಲ್. ಮುಖ್ಯವಾಗಿ ಶಸ್ತ್ರಾಸ್ತ್ರಗಳನ್ನು ತಯಾರಿಸುವುದರಲ್ಲಿ ಇಸ್ರೇಲ್ ಗೆ ದೊಡ್ಡ ಇತಿಹಾಸವೇ ಇದೆ. ಭಾರತವೂ ಶಸ್ತ್ರಾಸ್ತ್ರಗಳನ್ನು ಖರೀದಿಸಲು ರಷ್ಯಾದ ನಂತರ ಇಸ್ರೇಲ್ ದೇಶವನ್ನೇ ಹೆಚ್ಚು ಅವಲಂಬಿಸಿದ್ದೇವೆ. ಇಲ್ಲಿಯವರೆಗೂ ಇಸ್ರೇಲ್ ನಿಂದ ಕ್ಷಿಪಣಿಗಳು, ಡ್ರೋಣ್ ಗಳು, ವಿವಿಧ ರೀತಿಯ ಶಸ್ತ್ರಾಸ್ತ್ರ ಸಿಸ್ಟಮ್ ಗಳನ್ನು ಖರೀದಿಸಿದ್ದೇವೆ.

ಇದೀಗ ನೆರೆಯ ರಾಷ್ಟ್ರ ಚೀನಾ ಗಡಿಯಲ್ಲಿ ಕಾಲು ಕೆರೆದುಕೊಂಡು ಬರುತ್ತಿದೆ. ಸಿಕ್ಕಿ ರಾಜ್ಯದಲ್ಲಿರುವ ಅಂತರಾಷ್ಟ್ರೀಯ ಗಡಿ ಬಳಿ, ಚೀನಾ ಸೈನಿಕರ ಭಾರತೀಯ ಸೈನಿಕರೊಂದಿಗೆ ಘರ್ಷಣೆಗೆ ಇಳಿಯುತ್ತಿದ್ದಾರೆ. 1962 ರಲ್ಲಿ ಚೀನಾದೊಂದಿಗೆ ನಡೆದ ಯುದ್ಧದಲ್ಲಿ ಭಾರತ ಸೋತು ಹೋಯಿತು. ಇದನ್ನೇ ಇತ್ತೀಚೆಗೆ ಭಾರತಕ್ಕೆ ಚೀನಾ ನೆನಪಿಸಿ, ಪರೋಕ್ಷವಾಗಿ ಎಚ್ಚರಿಸಿತು. ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದ್ದ ಭಾರತದ ರಕ್ಷಣಾ ಸಚಿವ ಅರುಣ್ ಜೇಟ್ಲಿ, ಈಗಿರುವ ಭಾರತ 1962 ರ ಭಾರತವಲ್ಲ ಎಂದು ತಿರುಗೇಟು ನೀಡಿದ್ದರು. ಇದರ ಬೆನ್ನಲ್ಲೇ ಹಿಂದೂ ಮಹಾಸಾಗರದಲ್ಲಿ ತನ್ನ ಸಬ್ ಮರೀನ್ ಅನ್ನು ಚೀನಾ ನಿಯೋಜಿಸಿದೆ. ನಮ್ಮ ನೌಕಾಪಡೆಗಳೂ ಚೀನಾ ಸಮರ ನೌಕೆಗಳ ಚಟುವಟಿಕೆಗಳನ್ನು ಗಂಭೀರವಾಗಿ ಗಮನಿಸುತ್ತಿವೆ.

ಇದರಿಂದಾಗಿ ಚೀನಾ ಭಾರತಗಳ ನಡುವೆ ಉದ್ವಿಘ್ನ ವಾತಾವರಣ ನೆಲೆಸಿದೆ. ಚೀನಾವನ್ನು ಎದುರಿಸಲು ಭಾರತೀಯ ಸೇನೆ ಸಿದ್ಧವಾಗಿದೆ. ನಮ್ಮ ಸೇನೆಯನ್ನು ಮತ್ತಷ್ಟು ಬಲಗೊಳಿಸಲು ಭಾರತ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ.

ಈಗಾಗಲೇ ಹಲವು ದೇಶಗಳೊಂದಿಗೆ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಮಧ್ಯಾಹ್ನ ಇಸ್ರೇಲ್ ನಲ್ಲಿ ಇಳಿಯಲಿದ್ದಾರೆ. ಮೋದಿಯವರಿಗೆ ಕೆಂಪು ಹಾಸಿನ ಸ್ವಾಗತ ನೀಡಲು ಆ ದೇಶದ ಅಧ್ಯಕ್ಷ ನೆತನ್ಯಾಹು ಕಾತರದಿಂದಿದ್ದಾರೆ. ಇಸ್ರೇಲ್ ನಿಂದ 250 ಬಿಲಿಯನ್ ಡಾಲರ್ ವೆಚ್ಚದೊಂದಿಗೆ ಬೃಹತ್ ಕ್ಷಿಪಣಿಗಳನ್ನು ಖರೀದಿಸುವ ಒಪ್ಪಂದದ ಕುರಿತು ಉಭಯ ದೇಶಗಳ ನಾಯಕರು ಸಹಿ ಹಾಕುವ ಸಾಧ್ಯತೆಗಳಿವೆ. ಈಗಾಗಲೇ ಸ್ಪೈಕ್, ಬರಾಕ್-8 ಕ್ಷಿಪಣಿಗಳ ಖರೀದಿಗೆ ಅನುಮೋದನೆ ಸಿಕ್ಕಿದೆ. ಈ ಕ್ಷಿಪಣಿಗಳನ್ನೆಲ್ಲಾ ಸೇನೆಯ ಕೈಸೇರಿದರೆ, ಚೀನಾ ಮತ್ತಷ್ಟು ಇಕ್ಕಟ್ಟಿನಲ್ಲಿ ಸಿಲುಕುವುದು ಖಚಿತ ಎಂದು ತಜ್ಞರು ಹೇಳುತ್ತಿದ್ದಾರೆ.