ಆಸಾರಾಂ ಬಾಪು ವಿಷಯದಲ್ಲೇಕೆ ವಿಳಂಬ: ಸುಪ್ರೀಂ – News Mirchi

ಆಸಾರಾಂ ಬಾಪು ವಿಷಯದಲ್ಲೇಕೆ ವಿಳಂಬ: ಸುಪ್ರೀಂ

ವಿವಾದಿತ ಆಧ್ಯಾತ್ಮಿಕ ಗುರು ಆಸಾರಾಂ ಬಾಪು ಪ್ರಕರಣದಲ್ಲಿ ನಾಲ್ಕು ವರ್ಷ ಕಳೆದರೂ ವಿಚಾರಣೆಗೆ ಏಕೆ ವಿಳಂಬ ಮಾಡುತ್ತಿದ್ದೀರಿ ಎಂದು ಸುಪ್ರೀಂ ಕೋರ್ಟ್ ಸೋಮವಾರ ಗುಜರಾತ್ ಸರ್ಕಾರವನ್ನು ಪ್ರಶ್ನಿಸಿತು. ಆಸಾರಾಂ ಬಾಪು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ, ಪ್ರಕರಣದ ಬೆಳವಣಿಗೆಗಳನ್ನು ತಿಳಿಸುವಂತೆ ಕೋರ್ಟ್ ಸೂಚಿಸಿದೆ. ರಾಜಸ್ಥಾನ ಮತ್ತು ಗುಜರಾತ್ ನಲ್ಲಿ ಆಸಾರಾಂ ಮೇಲೆ ಕೇಸುಗಳು ದಾಖಲಾಗಿವೆ.

ಸ್ವಯಂಘೋಷಿತ ದೇವಮಾನವ ಆಸಾರಾಂ ಬಾಪು ತನ್ನ ಮೇಲೆ ರಾಜಸ್ಥಾನದ ಜೋಧ್ ಪುರ ಆಶ್ರಮದಲ್ಲಿ ಅತ್ಯಾಚಾರ ನಡೆಸಿದರೆಂದು 16 ವರ್ಷದ ಬಾಲಕಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದಳು. ಸಂತ್ರಸ್ತೆ ಬಾಲಕಿಯ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಹಲವು ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭೂಮಿ ಒತ್ತುವರಿ, ಕೊಲೆ ಯತ್ನ ಪ್ರಕರಣಗಳಲ್ಲಿಯೂ ಬಾಪು ಆರೋಪಿ. ಇವರ ಪುತ್ರ ನಾರಾಯಣ್ ಸಾಯಿ ಕೂಡಾ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾನೆ.

Loading...