ಭಾರತೀಯರ ಆಧಾರ್ ಮಾಹಿತಿ ಅಮೆರಿಕದ ಸಿಐಎ ಕೈಗೆ? : ವಿಕಿಲೀಕ್ಸ್ ಶಂಕೆ |News Mirchi

ಭಾರತೀಯರ ಆಧಾರ್ ಮಾಹಿತಿ ಅಮೆರಿಕದ ಸಿಐಎ ಕೈಗೆ? : ವಿಕಿಲೀಕ್ಸ್ ಶಂಕೆ

ಕೋಟ್ಯಂತರ ಭಾರತೀಯರ ವೈಯುಕ್ತಿಕ ಮಾಹಿತಿಗಳನ್ನು ಕದಿಯಲು ಅಮೆರಿಕಾ ಗುಪ್ತಚರ ಸಂಸ್ಥೆಯು ಅಮೆರಿಕ ಮೂಲದ ಕ್ರಾಸ್ ಮ್ಯಾಚ್ ಸಂಸ್ಥೆಯ ಟೂಲ್ಸ್ ಬಳಸುತ್ತಿದೆ ಎಂದು ವಿಶ್ವಾದ್ಯಂತ ಹಲವು ಹಗರಣಗಳನ್ನು ಬಹಿರಂಗಪಡಿಸಿದ ವಿಕಿಲೀಕ್ಸ್ ಸಂಸ್ಥೆ ಹೇಳಿದೆ. ಈ ಕುರಿತು ಹಲವಾರು ಟ್ವೀಟ್ ಗಳನ್ನು ಮಾಡಿರುವ ವಿಕಿಲೀಕ್ಸ್, ಸಿಐಎ ಭಾರತದ ರಾಷ್ಟ್ರೀಯ ಗುರುತಿನ ಚೀಟಿ ಡಾಟಾಬೇಸ್ ಅನ್ನು ಕದ್ದಿದೆಯಾ? ಆಧಾರ್ ಡಾಟಾಬೇಸ್ ಈಗಾಗಲೇ ಅಮೆರಿಕದ ಸಿಐಎ ಕೈಸೇರಿದೆಯಾ? ಎಂದು ಸರಣಿ ಟ್ವೀಟ್ ಗಳನ್ನು ಮಾಡಿದೆ.

ಯೂನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ(ಯುಐಡಿಎಐ) ಗೆ ಬಯೋಮೆಟ್ರಿಕ್ ಸೇವೆಗಳನ್ನು ನೀಡುತ್ತಿರುವ ಕ್ರಾಸ್ ಮ್ಯಾಚ್ ಟೆಕ್ನಾಲಜೀಸ್ ಸಂಸ್ಥೆ ಈ ಮಾಹಿತಿಗಳನ್ನು ಕಳುವು ಮಾಡಿದೆ ಎಂದು ಹೇಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕ್ರಾಸ್ ಮ್ಯಾಚ್ ಟೆಕ್ನಾಲಜೀಸ್ ನ ಭಾರತೀಯ ಪಾಲದಾರನಾದ ಸ್ಮಾರ್ಟ್ ಐಡೆಂಟಿಟಿ ಡಿವೈಸಸ್ ಪ್ರೈವೇಟ್ ಲಿಮಿಟೆಡ್ ಸುಮಾರು 12 ಲಕ್ಷ ಭಾರತೀಯ ಆಧಾರ್ ವಿವರಗಳನ್ನು ದಾಖಲಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಕಿಲೀಕ್ಸ್ ಟ್ವಿಟರ್ ನಲ್ಲಿ ಹಲವು ಟ್ವೀಟ್ ಗಳನ್ನು ಮಾಡಿದೆ.

  • No items.

ಗೌಪ್ಯತೆ ಪ್ರಾಥಮಿಕ ಹಕ್ಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ 3 ದಿನಗಳಲ್ಲಿಯೇ ಈ ಸ್ಪೋಟಕ ಸುದ್ದಿ ಹೊರಬಿದ್ದಿರುವುದು ಆತಂಕ ಸೃಷ್ಟಿಸಿದೆ. ಈ ಹಿಂದೆಯೂ ಆಧಾರ್ ವಿವರಗಳು ಸೋರಿಕೆಯಾಗಿದ್ದವು ಎಂಬ ಸುದ್ದಿಗಳಿಂದ ಜನ ಆತಂಕಗೊಂಡಿದ್ದರು.

ಆದರೆ ವಿಕಿಲೀಕ್ಸ್ ಟ್ವೀಟ್ ಗಳ ಕುರಿತಂತೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು, ಆಧಾರ್ ಕಾರ್ಡುಗಳ ಮಾಹಿತಿ ಕಳುವಾಗಿರುವ ಮಾತಿನಲ್ಲಿ ಸತ್ಯವಿಲ್ಲ. ವಿಕಿಲೀಕ್ಸ್ ಈ ಕುರಿತು ಯಾವುದೇ ಪೋಸ್ಟ್ ಮಾಡಿಲ್ಲ ಎಂದ ಹೇಳಿದ್ದಾರೆ.

ಯಾವುದೋ ವೆಬ್ಸೈಟ್ ನಲ್ಲಿ ಈ ವರದಿಯಿರುವುದು ಗಮನಕ್ಕೆ ಬಂದಿದೆ, ಕ್ರಾಸ್ ಮ್ಯಾಚ್ ಕೇವಲ ಬಯೋಮೆಟ್ರಿಕ್ ಉಪಕರಣಗಳನ್ನು ಸರಬರಾಜು ಮಾಡುವ ಕಂಪನಿಯೇ ಹೊರತು, ಬೇರೆ ವಿಷಯಗಳೊಂದಿಗೆ ಅದಕ್ಕೆ ಸಂಬಂಧವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಧಾರ್ ಮಾಹಿತಿಯನ್ನು ಸಂಪೂರ್ಣ ಎನ್ಕ್ರಿಪ್ಟ್ ಮಾಡಿದ್ದೇವೆ, ದಾಖಲಿಸಿದ ಮಾಹಿತಿ ನೇರವಾಗಿ ಆಧಾರ್ ಸರ್ವರ್ ಗಳಿಗೆ ತಲುಪುತ್ತದೆ. ಅದನ್ನು ಯುಐಡಿಎಐ ಹೊರತುಪಡಿಸಿದ ಇತರೆ ಯಾವುದೇ ಏಜೆನ್ಸಿಯೂ ಡೀಕ್ರಿಪ್ಟ್ ಮಾಡಿಲ್ಲ ಎಂದು ಹೇಳಿದ್ದಾರೆ.

Loading...
loading...
error: Content is protected !!