ಗೋಹತ್ಯೆ ಮಾಡಿದರೆ ನೇಣಿಗೇರಿಸುತ್ತೇವೆ – News Mirchi

ಗೋಹತ್ಯೆ ಮಾಡಿದರೆ ನೇಣಿಗೇರಿಸುತ್ತೇವೆ

ಗೋವುಗಳನ್ನು ಯಾರಾದರೂ ಕೊಂದರೆ ನೇಣಿಗೇರಿಸುತ್ತೇವೆ ಎಂದು ಛತ್ತೀಸ್ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಹೇಳಿದ್ದಾರೆ. ರಾಜ್ಯದಲ್ಲಿ ಗೋಹತ್ಯೆಗೆ ವಿರುದ್ಧವಾಗಿ ಕಾನೂನು ಜಾರಿಗೆ ತರುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಛತ್ತೀಸ್ಗಢದಲ್ಲಿ ಗೋಹತ್ಯೆ ನಡೆಯುತ್ತಿದೆಯಾ? ಕಳೆದ 15 ವರ್ಷಗಳಲ್ಲಿ ಇಲ್ಲಿ ಯಾರಾದರೂ ಗೋಹತ್ಯೆ ಮಾಡಿದ್ದಾರಾ? ಎಂದು ಪ್ರಶ್ನಿಸಿದ ಅವರು, ಯಾರಾದರೂ ಗೋವುಗಳನ್ನು ಹತ್ಯೆ ಮಾಡಿದರೆ ಅವರನ್ನು ನೇಣಿಗೇರಿಸುತ್ತೇವೆ ಎಂದು ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅಕ್ರಮ ಕಸಾಯಿಖಾನೆಗಳ ಮೇಲೆ ದಾಳಿ ನಡೆಸುತ್ತಿರುವ ಬೆನ್ನಲ್ಲೇ, ಉತ್ತರಪ್ರದೇಶ ಸರ್ಕಾರ ಕ್ರಮಗಳ ಪ್ರಭಾವ ಇತರೆ ಬಿಜೆಪಿ ಆಡಳಿತ ರಾಜ್ಯಗಳಿಗೂ ವಿಸ್ತರಿಸುತ್ತಿದೆ.

Loading...

Leave a Reply

Your email address will not be published.