ಮುಂದಿನ ಪಂದ್ಯಗಳಲ್ಲಿ ಎಲ್ಲರಿಗೂ ಅವಕಾಶ – News Mirchi

ಮುಂದಿನ ಪಂದ್ಯಗಳಲ್ಲಿ ಎಲ್ಲರಿಗೂ ಅವಕಾಶ

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆಡಲು ಅವಕಾಶ ಪಡೆಯದ ಆಟಗಾರರಿಗೆ ಖಂಡಿತ ಆಡುವ ಅವಕಾಶ ನೀಡುತ್ತೇವೆ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಭರವಸೆ ನೀಡಿದ್ದಾರೆ.

ಆ ಒಂದು ಅವಮಾನಕರ ಪ್ರಶ್ನೆಯೇ ಸರ್ಜಿಕಲ್ ಸ್ಟ್ರೈಕ್ ಗೆ ಕಾರಣವಾಯಿತು

ವಿಂಡೀಸ್ ಪ್ರವಾಸಕ್ಕೆ ಆಯ್ಕೆಯಾದರೂ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ತಂಡದೊಂದಿಗೆ ಬಂದ ಪ್ರತಿಯೊಬ್ಬರನ್ನೂ ಪರೀಕ್ಷಿಸುತ್ತೇವೆ ಎಂದು ಕೊಹ್ಲಿ ಹೇಳಿದರು. ರಿಷಭ್ ಪಂತ್, ದಿನೇಶ್ ಕಾರ್ತಿಕ್ ಮತ್ತು ಮೊಹಮದ್ ಶಮಿ ವಿಂಡೀಸ್ ಪ್ರವಾಸದಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿ ಆಡಲು ಅವಕಾಶ ಸಿಗದ ಆಟಗಾರರು.

ಇನ್ನು ಕೆಲ ಆಟಗಾರರಿಗೂ ಆಡುವ ಭಾಗ್ಯ ದೊರೆತಿರಲಿಲ್ಲ. ಖಚಿತವಾಗಿ ಅವರಿಗೆಲ್ಲಾ ಅವಕಾಶ ಕಲ್ಪಿಸುವ ವಿಷಯವನ್ನು ಪರಿಶೀಲಿಸುತ್ತಿದ್ದೇವೆ. ಮುಂದಿನ ಪಂದ್ಯಗಳಲ್ಲಿ ಬದಲಾವಣೆಗಳಿರುತ್ತವೆ ಎಂದು ಕೊಹ್ಲಿ ಹೇಳಿದ್ದಾರೆ. ವಿಂಡೀಸ್ ಪ್ರವಾಸದಲ್ಲಿ ಸತತ ಎರಡು ಏಕದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಬಗ್ಗೆ ಕೊಹ್ಲಿ ತೃಪ್ತರಾಗಿದ್ದರು. ಭಾರತ ತಂಡದ ಗೆಲುವುಗಳಿಗೆ ತಂಡದ ಪ್ರದರ್ಶನವೇ ಕಾರಣ, ಅದರಲ್ಲೂ ವಿಂಡೀಸ್ ನಲ್ಲಿ ಭಾರತದ ಬೌಲರ್ ಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ ಎಂದು ಪ್ರಶಂಸಿಸಿದರು.

Contact for any Electrical Works across Bengaluru

Loading...
error: Content is protected !!