ಬಿಜೆಪಿ ನೀಡಿದ ಕಿರುಕುಳ ಎಂದಿಗೂ ಮರೆಯಲಾರೆ : ಮಾಯಾವತಿ – News Mirchi

ಬಿಜೆಪಿ ನೀಡಿದ ಕಿರುಕುಳ ಎಂದಿಗೂ ಮರೆಯಲಾರೆ : ಮಾಯಾವತಿ

ಬಿಜೆಪಿಯೊಂದಿಗೆ ಚುನಾವಣಾ ಮೈತ್ರಿಯಾಗಲೀ, ಅದರೊಂದಿಗೆ ಸೇರಿ ಸರ್ಕಾರ ರಚಿಸುವುದಾಗಲೀ ಎಂದಿಗೂ ಮಾಡುವುದಿಲ್ಲ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಹೇಳಿದ್ದಾರೆ. 2003 ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ತಾಜ್ ಕಾರಿಡಾರ್ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲು ಮಾಡಿದ ಪ್ರಯತ್ನ ಎಂದಿಗೂ ಮರೆಯುವುದಿಲ್ಲ ಎಂದರು. ಬಿಜೆಪಿ ಆ ಸಮಯದಲ್ಲಿ ತನ್ನ ಕುಟುಂಬದವರ ಮೇಲೆ ದಾಳಿ ಮಾಡಿಸಿತ್ತು, ಆಗ ಕಾನ್ಷೀರಾಮ್ ಸಾವು ಬದುಕಿನ ನಡುವೆ ಅಸ್ಪತ್ರೆಯಲ್ಲಿದ್ದರು ಎಂದು ಹೇಳಿದರು.

ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸರ್ಕಾರ ರಚಿಸುತ್ತೇವೆ. ನಮಗೆ ಯಾರ ನೆರವೂ ಬೇಕಿಲ್ಲ ಎಂದು ಹೇಳಿದ ಆಕೆ, ಸರ್ಕಾರ ರಚನೆಗೆ ಬೇಕಾದ ಬಹುಮತ ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಾಂಪ್ರದಾಯಿಕ ಮತಬ್ಯಾಂಕ್ ಜೊತೆಗೆ ಅಲ್ಪಸಂಖ್ಯಾತ ವರ್ಗಗಳು ತಮಗೆ ಬೆಂಬಲಿಸುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!