ಯಡಿಯೂರಪ್ಪ ಬದಲಾಗದಿದ್ದರೆ ಜನ ತಿರಸ್ಕರಿಸುತ್ತಾರೆ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನವರ ವರ್ತನೆಯ ಬಗ್ಗೆ ಮಾಜಿ ಸಚಿವ ವಿ.ಸೋಮಣ್ಣ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪನವರದ್ದು ಹಿತ್ತಾಳೆ ಕಿವಿ, ಅವರ ವರ್ತನೆ ಬದಲಾಗದಿದ್ದರೆ ಜನರು ಯಡಿಯೂರಪ್ಪ ನವರನ್ನು ತಿರಸ್ಕರಿಸುತ್ತಾರೆ ಎಂದು ಹೇಳಿದ್ದಾರೆ. ಯಡಿಯೂರಪ್ಪ ಒಬ್ಬ ಪ್ರಬಲ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಒಬ್ಬ ನಾಯಕನಾಗಿ ಎಲ್ಲರನ್ನು ಜೊತೆಗೆ ಕೊಂಡೊಯ್ಯಬೇಕು ಎಂದರು.

ಇನ್ನು ಕಾಂಗ್ರೆಸ್ ಸೇರುವ ಸುದ್ದಿಗಳ ಕುರಿತು ಕೇಳಿದ ಪ್ರಶ್ಬೆಗೆ ಉತ್ತರಿಸಿದ ಸೋಮಣ್ಣ, ತಾವು ಕಾಂಗ್ರೆಸ್ ಸೇರುವುದರ ಬಗ್ಗೆ ಎಲ್ಲೂ ಹೇಳಿಲ್ಲ. ಈ ಕುರಿತು ವದಂತಿ ಹಬ್ಬಿಸಲಾಗುತ್ತಿದೆ. ಪಕ್ಷದಲ್ಲಿ ಕೆಲವು ಗೊಂದಲಗಳಿರುವುದು ನಿಜ, ಅದನ್ನು ಕೆಲವರು ಹೀಗೆ ಪ್ರಚಾರ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಸೇರುತ್ತೇನೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಕೂಡಲೇ ನನ್ನನ್ನು ಸಂಪರ್ಕಿಸಿದರು. ಆದರೆ ತನ್ನ ಜೊತೆಗಿದ್ದವರೇ ನನ್ನನ್ನು ಮಾತನಾಡುವ ಕನಿಷ್ಟ ಸೌಜನ್ಯವನ್ನೂ ತೋರಿಸಲಿಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪ ಅವರ ಮೇಲೆ ಬೇಸರ ವ್ಯಕ್ತಪಡಿಸಿದರು.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache