ಸುಷ್ಮಾಜೀ ನೀವು ನಮ್ ದೇಶದ ಪ್ರಧಾನಿಯಾಗಬೇಕಿತ್ತು ಎಂದ ಪಾಕ್ ಮಹಿಳೆ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರವರಿಗೆ ಭಾರತದಲ್ಲಿ ಮಾತ್ರವಲ್ಲ ಪಾಕಿಸ್ತಾನದಲ್ಲಿಯೂ ಅನೇಕ ಅಭಿಮಾನಿಗಳಿದ್ದಾರೆ. ಅವರ ಸೇವೆಯ ಬಗ್ಗೆ, ಅವರಿಗೆ ಪ್ರೀತಿ ಅಭಿಮಾನವಿದೆ. ನಿಮ್ಮನ್ನು ಸೂಫರ್ ವುಮನ್ ಎಂದು ಕರೆಯಬೇಕಾ, ದೇವರು ಎನ್ನಲೇ, ನಿಮ್ಮ ಔದಾರ್ಯವನ್ನು ಬಣ್ಣಿಸಲು ಪದಗಳೇ ಇಲ್ಲ. ನಿಮ್ಮನ್ನು ಹೊಗಳದೇ ಇರಲು ಸಾಧ್ಯವಾಗುತ್ತಿಲ್ಲ, ನೀವು ನಮ್ಮ ದೇಶಕ್ಕೆ ಪ್ರಧಾನಿಯಾಗಿದ್ದರೆ ನಮ್ಮ ದೇಶ ಬದಲಾಗುತ್ತಿತ್ತು ಎಂದು ಪಾಕಿಸ್ತಾನದ ಕರಾಚಿಯಲ್ಲಿನ ಮಹಿಳೆಯೊಬ್ಬರು ಸುಷ್ಮಾ ಸ್ವರಾಜ್ ಗೆ ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿನ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ವೀಸಾ ಕೊಡಿಸುವಂತೆ ಹಿಜಾಬ್ ಆಸಿಫ್ ಎನ್ನುವ ಮಹಿಳೆಯೊಬ್ಬರು ಸುಷ್ಮಾ ರವರನ್ನು ಕೋರಿದ್ದರು. ಕೂಡಲೇ ಸ್ಪಂದಿಸಿದ ಸುಷ್ಮಾ ಸ್ವರಾಜ್ ಇಸ್ಲಾಮಾಬಾದಿನ ಭಾರತದ ಹೈಕಮೀಷನ್ ಅಧಿಕಾರಿಗಳಿಗೆ ವೀಸಾ ನೀಡುವಂತೆ ಆದೇಶಿಸಿದ್ದರು. ಆಸಿಫ್ ಮನವಿಯನ್ನು ಪುರಸ್ಕರಿಸುವಂತೆ ಪಾಕಿಸ್ತಾನದ ಭಾರತದ ಹೈಕಮೀಷನರ್ ಗೌತಮ್ ಬಂಬಾವಾಲೇ ಅವರಿಗೆ ಸುಷ್ಮಾ ಅವರು ಆದೇಶಿಸಿದ್ದರು.

ತನ್ನ ಮನವಿಗೆ ಕೂಡಲೇ ಸ್ಪಂದಿಸಿದ ಸುಷ್ಮಾ ಸ್ವರಾಜ್ ಅವರನ್ನು ಹಿಜಾಬ್ ಆಸಿಫ್ ಕೊಂಡಾಡಿದ್ದಾರೆ. ಶಬಾಹತ್ ಅಬ್ಬಾಸ್ ತಖ್ವಿ ಎನ್ನುವ ರೋಗಿಗಾಗಿ ಹಿಜಾಬ್ ಆಸಿಫ್ ವೀಸಾಗಾಗಿ ಪ್ರಯತ್ನಿಸುತ್ತಿದ್ದರು. ತಾವು ಭಾರತವನ್ನು ದ್ವೇಷಿಸುತ್ತಿಲ್ಲ, ಭಾರತವನ್ನು, ಭಾರತೀಯರನ್ನು ತಾವು ಪ್ರೀತಿಸುತ್ತಿದ್ದೇವೆ ಎಂದು ಆಕೆ ಹೇಳಿದ್ದಾರೆ. ಪಾಕಿಸ್ತಾನದಲ್ಲಿನ ಬಹಳಷ್ಟು ಜನರಿಗೆ ಭಾರತದ ಬಗ್ಗೆ ಪ್ರೀತಿ ಗೌರವಗಳಿವೆ ಎಂದು ಆಕೆ ಹೇಳಿದ್ದಾರೆ.

ಆಗ ಭಾರತದ ಮೇಲೆ ಅಣುಬಾಂಬ್ ದಾಳಿಗೆ ಪಾಕ್ ಹೆದರಿದ್ದೇಕೆ?

ನಿಮಗೆ ವೀಸಾ ಸಿಗುತ್ತೆ, ಆದರೆ ಸುಷ್ಮಾರವರನ್ನು ಪಾಕ್ ಪ್ರಧಾನಿಯಾಗಿ ಕೊಡಲು ಸಾಧ್ಯವಿಲ್ಲ ಎಂಬ ಟ್ವೀಟಿಗರೊಬ್ಬರ ಟ್ವೀಟಿಗೆ ಪ್ರತಿಕ್ರಿಯಿಸಿರುವ ಹಿಜಾಬ್, ಸುಷ್ಮಾ ಸ್ವರಾಜ್ ರವರನ್ನು ಪಡೆಯಲು ಪಾಕಿಸ್ತಾನೀಯರು ಅರ್ಹರಲ್ಲ ಎಂದು ಹೇಳಿದ್ದಾರೆ.

ವಿಚಿತ್ರವೆಂದರೆ ಪಾಕಿಸ್ತಾನದ ವಿದೇಶಾಂಗ ಸಚಿವರು ಯಾರು ಎಂಬುದೇ ಆಕೆಗೆ ಗೊತ್ತಿಲ್ಲವಂತೆ. ಇಂತಹ ಗಂಭೀರ ವಿಷಯಗಳಲ್ಲೂ ನಿಮ್ಮ ಪಾಕ್ ದೇಶದ ವಿದೇಶಾಂಗ ಸಚಿವ ಸರ್ತಾಜ್ ಅಜೀಜ್ ಸ್ಪಂದಿಸುತ್ತಿಲ್ಲವೇ ಎಂದು ಸುಷ್ಮಾ ಸ್ವರಾಜ್ ಆಕೆಗೆ ಟ್ವೀಟ್ ಮಾಡಿ ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ ಆಕೆ ಸರ್ತಾಜ್ ಅಜೀಜ್ ಯಾರೋ, ಇದ್ದಾರೋ ಇಲ್ಲವೋ ಕೂಡಾ ಇಲ್ಲಿ ಯಾರಿಗೂ ಗೊತ್ತಿಲ್ಲ ಎಂದು ಆಕೆ ಉತ್ತರಿಸಿದ್ದಾಳೆ. ಚಿಕಿತ್ಸೆಗಾಗಿ ಆಕೆಗೆ ವೀಸಾ ನೀಡಲು ಭಾರತ ಸರ್ಕಾರಕ್ಕೆ ಶಿಫಾರಸು ಮಾಡಲು ತಿರಸ್ಕರಿಸಿದ ಸರ್ತಾಜ್ ಅಜೀಜ್ ವರ್ತನೆಗೆ ಸುಷ್ಮಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮುನ್ನ ಚಿಕಿತ್ಸೆಗಾಗಿ ಪಾಕಿಸ್ತಾನೀಯರು ಭಾರತಕ್ಕೆ ಆಗಮಿಸಲು ಪಾಕ್ ವಿದೇಶಾಂಗ ಸಚಿವ ಸರ್ತಾಜ್ ಅಜೀಜ್ ರಿಂದ ಶಿಫಾರಸು ಪತ್ರ ತರುವುದು ಕಡ್ಡಾಯ ಎಂದು ಸುಷ್ಮಾ ಸೂಚಿಸಿದ್ದರು.

ಪಾಕ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನವಾಜ್ ಷರೀಫ್