ಟಾಯ್ಲೆಟ್ ಗಾಗಿ ಈ ಮಹಿಳೆ ಮಾಡಿದ್ದೇನು ಗೊತ್ತೇ…?

ದೃಢ ಸಂಕಲ್ಪದೊಂದಿಗೆ ತಾನಂದುಕೊಂಡ ಕೆಲಸ ಸಾಧಿಸಿ ಬಿಹಾದ ಬಡ ಮಹಿಳೆಯೊಬ್ಬರು ಬಿಹಾರದಲ್ಲಿ ಈಗ ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ. ಗಂಡನನ್ನು ಕಳೆದುಕೊಂಡ ಒಂಟಿ ಜೀವನ ನಡೆಸುತ್ತಿದ್ದ ಅಮೀನಾ ಖಟೂನ್(40) ಎಂಬ ಮಹಿಳೆ ತನ್ನ ಕಡುಬಡತನವನ್ನೂ ಲೆಕ್ಕಿಸದೆ ಊರಿನಲ್ಲಿ ಭಿಕ್ಷೆ ಬೇಡಿ ಟಾಯ್ಲೆಟ್ ಕಟ್ಟಿಸಿಕೊಂಡಿದ್ದಾಳೆ. ಗುರಿ ತಲುಪಲು ಆಕೆ ಭಿಕ್ಷೆ ಬೇಡುವ ದಾರಿ ಹಿಡಿದರೂ, ಆಕೆಯ ಹಠವನ್ನು ಎಲ್ಲರೂ ಮೆಚ್ಚಬೇಕಾದದ್ದೇ.

ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕಾಗಿ ಅಧಿಕಾರಿಗಳ ಬಳಿಗೆ ಹೋದರೆ, ಅಧಿಕಾರಿಗಳು ಮಹಿಳೆಯ ಕಡೆಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದರು. ಹೀಗಾಗಿ ಅವರಿಗೆ ನಾಚಿಕೆಯಾಗುವಂತೆ ತಾನು ಸುತ್ತಮುತ್ತಲ ಗ್ರಾಮಗಳಲ್ಲಿ ಭಿಕ್ಷಾಟನೆಗೆ ನಡೆಸಿದ್ದಾಳೆ. ಆಕೆಯ ಪ್ರಯತ್ನಕ್ಕೆ ಬೆಂಬಲವಾಗಿ ನಿಂತ ಗ್ರಾಮಸ್ಥರು ಮತ್ತು ಕಾರ್ಮಿಕರು ಶೌಚಾಲಯ ನಿರ್ಮಾಣ ಕೆಲಸದಲ್ಲಿ ಸಹಕರಿಸಿದರು.

ಮೋಹನ್ ಭಾಗವತ್ ಹೇಳಿಕೆಗೆ ರಾಹುಲ್ ಆಕ್ರೋಶ

ಈ ವಿಷಯ ತಿಳಿದ ಜಿಲ್ಲಾಧಿಕಾರಿಗಳು ಭಾನುವಾರ ಆ ಮಹಿಳೆಯ ಕೆಲಸವನ್ನು ಮೆಚ್ಚಿ ಸನ್ಮಾನಿಸಿದರು. ಒಂದು ಮಗುವಿನ ತಾಯಿ, ತನ್ನ ಜೀವನಾಧಾರಕ್ಕಾಗಿ ಕಾರ್ಮಿಕಳಾಗಿ ದುಡಿಯುತ್ತಿರುವ ಕಡುಬಡ ಮಹಿಳೆ ಮಾಡಿದ ಈ ಕೆಲಸಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ರಾಹುಲ್ ಗೆ ಬೀದರ್ ಬಂದ್ ಮೂಲಕ ಸ್ವಾಗತ

ಬಿಹಾರ ರಾಜ್ಯವು ಸ್ವಚ್ಛ ಭಾರತ ಯೋಜನೆ ಜಾರಿಯಲ್ಲಿ ತುಂಬಾ ಹಿಂದಿದೆ. ಲಕ್ಷಾಂತರ ಜನರು ಈಗಲೂ ಮಲಮೂತ್ರ ವಿಸರ್ಜನೆಗೆ ಬಹಿರಂಗ ಪ್ರದೇಶಗಳನ್ನೇ ಅವಲಂಬಿಸಿದ್ದಾರೆ. ಆದರೆ ಅಕ್ಟೋಬರ್ 2, 2019 ರ ವೇಳೆಗೆ ಬಿಹಾರ್ ಅನ್ನು ಒಡಿಎಫ್(ಓಪನ್ ಡಿಫೆಕ್ಷನ್ ಫ್ರೀ) ರಾಜ್ಯವನ್ನಾಗಿ ಮಾಡಲು ರಾಜ್ಯ ಸರ್ಕಾರ ಗುರಿ ಇಟ್ಟುಕೊಂಡಿದೆ. ಆದರೆ ಇದುವರೆಗೂ ಒಂದು ಜಿ್ಲಲೆಯೂ ಒಡಿಎಫ್ ಆಗಿ ಘೋಷಣೆಯಾಗದಿರುವುದು ಗಮನಿಸಬೇಕಾದ ಅಂಶ.

Get Latest updates on WhatsApp. Send ‘Subscribe’ to 8550851559