ಮದುವೆಯಾದ ವಾರಕ್ಕೆ ಮಗು ಹೆತ್ತು ಶಾಕ್ ನೀಡಿದ ಯುವತಿ

ಮದುವೆಯಾದ ಒಂದು ವಾರಕ್ಕೇ ಯುವತಿಯೊಬ್ಬಳು ಮಗುವಿಗೆ ಜನ್ಮ ನೀಡಿ ಕೈ ಹಿಡಿದ ಗಂಡ ಸೇರಿದಂತೆ ಎಲ್ಲರಿಗೂ ಶಾಕ್ ನೀಡಿದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ಸರಾಯ್ ಗ್ರಾಮದಲ್ಲಿ ನಡೆದಿದೆ.

ಯುವತಿಯನ್ನು ಮದುವೆಯಾದ ಅಭಯ್ ಕುಮಾರ್, ಯುವತಿಯ ಮನೆಯವರಿಂದ ನಾವು ಮೋಸ ಹೋದೆವು ಎಂದು ಹೇಳಿದ್ದಾರೆ. ಯುವತಿಯ ಮನೆಯವರು ನಮ್ಮ ಮತ್ತು ನಮ್ಮ ಹುಡುಗನ ಭಾವನೆಗಳೊಂದಿಗೆ ಆಟವಾಡಿದ್ದಾರೆ ಎಂದು ಯುವಕನ ಕುಟುಂಬದವರು ಆರೋಪಿಸಿದ್ದಾರೆ.

ಪ್ರಿಯಕರನೊಂದಿಗೆ ಹುಡುಗಿ ಗರ್ಭವತಿಯಾಗಿದ್ದಿದ್ದು ನನಗೆ ತಿಳಿದಿರಲಿಲ್ಲ, 9 ತಿಂಗಳ ಗರ್ಭಿಣಿಯನ್ನು ಮದುವೆಯಾದೆ ಎಂಬುದು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದು ತಾಳಿ ಕಟ್ಟಿದ ಯುವಕ ಬಾಯಿ ಬಡಿದುಕೊಳ್ಳುತ್ತಿದ್ದಾನೆ.

ಡಿಸೆಂಬರ್ 2 ರಂದು ಮುಝಫರಪುರದ ಜನ ಯಾವುದೋ ಕಾರಣಕ್ಕೆ ನನ್ನನ್ನು ಆಹ್ವಾನಿಸಿದ್ದರು, ಅಲ್ಲಿಗೆ ಹೋದ ನನಗೆ ಬಲವಂತದ ಮದುವೆ ಮಾಡಿಸಿದರು ಎಂದು ಅಭಯ್ ಕುಮಾರ್ ಆರೋಪಿಸುತ್ತಿದ್ದಾನೆ.

ಬಿಹಾರದ ಗ್ರಾಮೀಣ ಪ್ರದೇಶಗಳಲ್ಲಿ ಬಲವಂತದ ಮದುವೆಗಳಿಗೆ “ಪಕರುವಾ ಶಾದಿ” ಅಥವಾ “ಜಬಾರಿಯಾ ಶಾದಿ” ಎನ್ನುತ್ತಾರಂತೆ. ಇಂತಹ ಮದುವೆಗಳು 20 ನೇ ಶತಮಾನದಲ್ಲಿ ಹೆಚ್ಚು ಪ್ರಚಾರಕ್ಕೆ ಬಂದವು. ವರದಕ್ಷಿಣೆ ಕೊಡಲು ಶಕ್ತರಲ್ಲದ ಹೆಣ್ಣಿನ ಕಡೆಯವರು ಅವಿವಾಹಿತ ಗಂಡಸರನ್ನು ಅಪಹರಿಸಿ ನಂತರ ಬಲವಂತದ ಮದುವೆ ಮಾಡುವುದು ರೂಢಿ. ಇಂತಹ ಮದುವೆಗಳು ಅಲ್ಲಿ ಅಕ್ರಮವಲ್ಲ, ವಿರೋಧಿಸಿದರೆ ವರದಕ್ಷಿಣೆ ಕಿರುಕುಳ ಆರೋಪ ಹೊತ್ತು ಕೋರ್ಟ್ ಕಛೇರಿ ಎಂದು ಅಲೆಯಬೇಕಾಗುತ್ತದೆ.

Related News

Loading...

Leave a Reply

Your email address will not be published.

error: Content is protected !!