ಟಾಯ್ಲೆಟ್ ಕಟ್ಟಿಸದ ಮಾವನ ವಿರುದ್ಧ ದೂರು ನೀಡಿದ ಮಹಿಳೆ! – News Mirchi
We are updating the website...
ಸಾಂದರ್ಭಿಕ ಚಿತ್ರ

ಟಾಯ್ಲೆಟ್ ಕಟ್ಟಿಸದ ಮಾವನ ವಿರುದ್ಧ ದೂರು ನೀಡಿದ ಮಹಿಳೆ!

ಮನೆಯಲ್ಲಿ ಟಾಯ್ಲೆಟ್ ಇಲ್ಲದೆ ಅವಮಾನ, ಮುಜುಗರ ಎದುರಿಸುತ್ತಿದ್ದ ಮಹಿಳೆಯೊಬ್ಬರು ಈ ಕಾರಣಕ್ಕೆ ತನ್ನ ಮಾವನ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಬಿಹಾರದಲ್ಲಿ ನಡೆದಿದೆ. ಮನೆಯಲ್ಲಿ ಶೌಚಾಲಯ ಕಟ್ಟಿಸುತ್ತೇನೆಂದು ಬಾಂಡ್ ಪೇಪರ್ ಮೇಲೆ ಸಹಿ ಹಾಕಿಸಿ ತನ್ನ ಹಠ ಸಾಧಿಸಿದ್ದಾಳೆ ಮಹಳೆ.

ಈ ಘಟನೆ ಬಿಹಾರದ ಚಗ್ಗನ್ ನೌರಾ ಎಂಬ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ಟಾಯ್ಲೆಟ್ ಕಟ್ಟಿಸುವಂತೆ ಎಷ್ಟು ಕೇಳಿದರೂ ತನ್ನ ಮಾವ ಮತ್ತು ಬಾವ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ತನಗೆ ನ್ಯಾಯ ಕೊಡಿಸಿ ಎಂದು ಮಹಿಳೆ ಸೆಪ್ಟೆಂಬರ್ 25 ರಂದು ಮುಝಫರ್ ಪುರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪತಿ ಕೆಲಸಕ್ಕಾಗಿ ತಮಿಳುನಾಡಿಗೆ ಹೋದ ನಂತರ, ಮನೆಯಲ್ಲಿ ಶೌಚಾಲಯವಿಲ್ಲದ ಕಾರಣದಿಂದ ಆಕೆ ತನ್ನ ತವರಿಗೆ ವಾಪಸ್ ಹೋಗುತ್ತಿದ್ದಳು, ಮತ್ತೆ ಗಂಡ ಊರಿಗೆ ವಾಪಸಾದಾಗ ಆಕೆ ಮತ್ತೆ ಅತ್ತೆ ಮನೆಗೆ ಬರುತ್ತಿದ್ದಳು. ಪುನಃ ಗಂಡ ಕೆಲಸಕ್ಕೆ ತಮಿಳುನಾಡಿಗೆ ತೆರಳಿದ ನಂತರ ತವರಿಗೆ ಹೋಗುತ್ತಿದ್ದಳು. ಆದರೆ ಅತ್ತೆ ಮನೆಯಲ್ಲಿನ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗದ ಕಾರಣ, ಆಕೆ ಮಾವ ಮತ್ತು ಬಾವನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು.

[ಇದನ್ನೂ ಓದಿ: ಪಾಕ್ ನಿಂದ ಭಾರತಕ್ಕೆ ಕೊರೆದ ಸುರಂಗ ಮಾರ್ಗ ಪತ್ತೆ]

ಇಬ್ಬರು ಆರೋಪಿಗಳನ್ನು ಠಾಣೆಗೆ ಕರೆಸಿದ ಪೊಲೀಸರು ಅವರಿಗೆ ಬುದ್ದಿ ಹೇಳಿ ಒಂದು ವಾರದೊಳಗೆ ಟಾಯ್ಲೆಟ್ ಕಟ್ಟಿಸುವಂತೆ ಹೇಳಿದರು. ಆದರೆ ಅದಕ್ಕಾಗಿ ಹಣ ಹೊಂದಿಸಲು ಮತ್ತಷ್ಟು ಸಮಯಾವಕಾಶ ಬೇಕೆಂದು ಅವರು ಮನವಿ ಮಾಡಿದರು.  ಮನೆಯಲ್ಲಿ ಟಾಯ್ಲೆಟ್ ಕಟ್ಟಿಸುತ್ತೇವೆಂದು ಬಾಂಡ್ ಪೇಪರ್ ಮೇಲೆ ಬರೆದು ಸಹಿ ಹಾಕಿದ ನಂತರ ಈ ಪ್ರಕರಣ ಸುಖಾಂತ್ಯ ಕಂಡಿದೆ ಎಂದು ಮಹಿಳಾ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Get Latest updates on WhatsApp. Send ‘Add Me’ to 8550851559

Contact for any Electrical Works across Bengaluru

Loading...
error: Content is protected !!