ರೈಲಿಗೆ ಸಿಕ್ಕಿ ಹಾಕಿ ಆಟಗಾರ್ತಿ ಆತ್ಮಹತ್ಯೆ

ಭಾರತದ ಮಹಿಳಾ ಹಾಕಿ ತಂಡದ ಆಟಗಾರ್ತಿ, ಫಾರ್ವಾರ್ಡ್ ಪ್ಲೇಯರ್ ಜ್ಯೋತಿ ಗುಪ್ತಾ(20) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಹರಿಯಾಣದ ಜ್ಯೋತಿ, ರೇವಾರಿ ರೈಲು ನಿಲ್ದಾಣದ ಸಮೀಪ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಜ್ಯೋತಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ ಎಂದು ಆಕೆಯ ಕುಟುಂಬ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣವನ್ನೂ ದಾಖಲಿಸಿಕೊಳ್ಳದೆ ಜ್ಯೋತಿ ಮೃತದೇಹವನ್ನು ಕುಟುಂಬದವರಿಗೆ ಪೊಲೀಸರು ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸರ್ಟಿಫಿಕೇಟ್ ಗಳಲ್ಲಿ ತನ್ನ ಹೆಸರಿನ ಸ್ಪೆಲ್ಲಿಂಗ್ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದಕ್ಕಾಗಿ ಮಹರ್ಷಿ ದಯಾನಂದ್ ಯೂನಿವರ್ಸಿಟಿ ಗೆ ಹೋಗುತ್ತೇನೆಂದು ಬುಧವಾರ ಬೆಳಗ್ಗೆ ಜ್ಯೋತಿ ಮನೆಯಿಂದ ಹೊರ ಹೋಗಿದ್ದರು. ಸಂಜೆ ಮನೆಯವರಿಗೆ ಫೋನ್ ಮಾಡಿ ತಾನು ಪ್ರಯಾಣ ಮಾಡುತ್ತಿರುವ ಬಸ್ಸು ಕೆಟ್ಟಿದ್ದು, ಬರಲು ತಡವಾಗಬಹುದು ಎಂದು ಮಾಹಿತಿ ನೀಡಿದ್ದಳು. ರಾತ್ರಿಯಾದರೂ ಜ್ಯೋತಿ ಮನೆಗೆ ಬರದಿದ್ದರಿಂದ ಕುಟುಂಬ ಸದಸ್ಯರು ಆಕೆಯ ಮೊಬೈಲ್ ಗೆ ಕರೆ ಮಾಡಿದ್ದರು. ಆದರೆ ಆಕೆಯಿಂದ ಯಾವುದೇ ಪ್ರತಿಕ್ರಿಯೆಯಿರಲಿಲ್ಲ.

ರಾಜಕೀಯವಾಗಿ ನನ್ನ ಮಗನನ್ನು ಮುಗಿಸಲು ಪಕ್ಷದಲ್ಲೇ ಸಂಚು: ಡಿಕೆಶಿ ತಾಯಿ

ಬುಧವಾರ ರಾತ್ರಿ ರೇವಾರಿ ರೈಲು ನಿಲ್ದಾಣಕ್ಕೆ ಬಂದ ಜ್ಯೋತಿ, ವೇಗವಾಗಿ ಬರುತ್ತಿದ್ದ ರೈಲಿಗೆ ಎದುರಾಗಿ ಓಡುತ್ತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸ್ಥಳೀಯರ ಪ್ರಕಾರ ಘಟನೆ ನಡೆದ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮೃತದೇಹದ ಪಕ್ಕದಲ್ಲೇ ಇದ್ದ ರಿಂಗ್ ಆಗುತ್ತಿದ್ದ ಮೊಬೈಲ್ ತೆಗೆದು ವಿವರಗಳನ್ನು ತಿಳಿಯುವ ಪ್ರಯತ್ನ ನಡೆಸಿದರು. ಜ್ಯೋತಿ ತಾನಾಗೇ ರೈಲಿಗೆ ಎದುರಾಗಿ ಬಂದಿದ್ದಾಗಿ ಲೋಕೋ ಪೈಲಟ್ ಹೇಳಿದ್ದಾಗಿ ಪೊಲೀಸರು ಹೇಳಿದ್ದಾರೆ. ಅನುಮಾನಗಳು ವ್ಯಕ್ತವಾದರೂ ಯಾವುದೇ ಕೇಸು ದಾಖಲಿಸದೆ ಕುಟುಂಬ ಸದಸ್ಯರು ಜ್ಯೋತಿ ಮೃತದೇಹವನ್ನು ಹೊತ್ತೊಯ್ದರು ಎಂದು ಪೊಲೀಸರು ಹೇಳಿದ್ದಾರೆ. ಮುಂದಿನ ವಾರ ಬೆಂಗಳೂರಿನಲ್ಲಿ ಆರಂಭವಾಗಲಿದ್ದ ತರಬೇತಿ ಶಿಬಿರಕ್ಕೆ ಹೋಗಲು ಜ್ಯೋತಿ ಸಿದ್ಧಳಾಗುತ್ತಿದ್ದಳು. ಆದರೆ ಈಗ ಹೆಣವಾಗಿದ್ದಾಳೆ.