ಮೋದಿಗೆ ಕಸದ ಗಿಫ್ಟ್! ಮಹಿಳೆಗೆ ಪ್ರಧಾನಿಯಿಂದ ಪತ್ರ |News Mirchi

ಮೋದಿಗೆ ಕಸದ ಗಿಫ್ಟ್! ಮಹಿಳೆಗೆ ಪ್ರಧಾನಿಯಿಂದ ಪತ್ರ

ಬಿಡುವಿನ ಸಮಯದಲ್ಲಿ ತ್ಯಾಜಗಳಿಂದ ತಯಾರಿಸಿದ ಉಡುಗೊರೆಯೊಂದನ್ನು ಪ್ರಧಾನಿಗೆ ಕಳುಹಿಸಿ ಪ್ರಧಾನಿಯಿಂದ ಪ್ರಶಂಸೆಗೊಳಗಾಗಿದ್ದಾರೆ ಇಲ್ಲೊಬ್ಬ ಗೃಹಿಣಿ.

ಬಿಹಾರದ ಸಮಸ್ತಿಪುರದಲ್ಲಿ ವಾಸಿಸುವ 50 ವರ್ಷದ ಗೀತಾದೇವಿಗೆ ಬಿಡುವಿನ ಸಮಯದಲ್ಲಿ ವ್ಯರ್ಥವಾಗಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯಗಳು, ಪಾಲಿಥೀನ್ ವಸ್ತುಗಳಿಂದ ಚಂದದ ಬುಟ್ಟಿ, ಫ್ಲವರ್ ವಾಜ್ ತಯಾರಿಸುವುದು ಹವ್ಯಾಸ. ಕಸದಿಂದ ಅರಳಿದ ಅಂದದ ಕಲಾಕೃತಿಗಳನ್ನು ನೋಡಿದ ಆಕೆಯ ಪುತ್ರ ಮನೋಜ್ ಕುಮಾರ್, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೇಕೆ ಇಂತಹದ್ದೊಂದು ಗಿಫ್ಟ್ ಕೊಡಬಾರದು ಎಂದು ತಾಯಿಗೆ ಕೇಳಿದ್ದಾನೆ. ಹೌದಲ್ವಾ ಅಂತ ಆಕೆ ಮೋದಿಯವರಿಗೆ ಒಂದು ಬುಟ್ಟಿಯನ್ನು ತಯಾರಿಸಿ ಕಳುಹಿಸಿದ್ದಾರೆ.

ಮೋದಿಗೆ ಗಿಫ್ಟ್ ಕಳುಹಿಸಿದ್ದೇನೋ ಆಯಿತು. ಆದರೆ ಪ್ರತಿದಿನವೂ ಪ್ರಧಾನಿಗೆ ನೂರಾರು ಉಡುಗೊರೆಗಳು ಬರುತ್ತವೆ. ಅಂತದ್ದರಲ್ಲಿ ನಮ್ಮ ಬುಟ್ಟಿಯನ್ನು ಗಮನಿಸುತ್ತಾರಾ ಎಂದೇ ಭಾವಿಸಿದ್ದರಂತೆ ಗೀತಾ ದೇವಿ.

ಆಶ್ಚರ್ಯವೆನ್ನುವಂತೆ ಪ್ರಧಾನಿಗಳಿಂದ ಆಕೆಗೊಂದು ಪತ್ರ ಬಂದಿದೆ. ಅನಕ್ಷರಸ್ತೆಯಾದ ಗೀತಾದೇವಿ ಇತರೆ ಕುಟುಂಬ ಸದಸ್ಯರ ಬಳಿ ಓದಿಸಿದರಂತೆ. “ಸುಂದರವಾದ ವಸ್ತುಗಳನ್ನು ಸೃಷ್ಟಿಸಲು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿಕೊಂಡಿದ್ದು ಅದ್ಭುತ ಆಲೋಚನೆ, ಇದು ಸ್ವಚ್ಛ ಭಾರತ ಅಭಿಯಾನಕ್ಕೆ ಉಪಯಗವಾಗುವುದಷ್ಟೇ ಅಲ್ಲದೇ ಸಣ್ಣ ಕೈಗಾರಿಕಾ ಉದ್ಯಮಕ್ಕೆ ಅಪಾರ ಅವಕಾಶವಿದೆ” ಎಂದು ಪ್ರತಿಕ್ರಿಯೆ ಕಳುಹಿಸಿದ್ದರಂತೆ. ಪತ್ರವನ್ನು ಓದಿದ ನಂತರ ಪ್ರತಿಕ್ರಿಯಿಸಿರುವ ಗೀತಾದೇವಿ ಪತಿ” ನಮಗೆ ಮೋದಿ ಪ್ರೋತ್ಸಾಹ ಲಭಿಸಿದ್ದು, ತಾವೂ ವ್ಯಾಪಾರ ಮಾಡಬಹುದು ಎಂಬ ನಂಬಿಕೆ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Loading...
loading...
error: Content is protected !!