ಪೇಟಿಎಂ ವಿವರ ನೀಡಿ ಹಣ ಕಳೆದುಕೊಂಡ ಮೊದಲ ಪ್ರಕರಣ – News Mirchi

ಪೇಟಿಎಂ ವಿವರ ನೀಡಿ ಹಣ ಕಳೆದುಕೊಂಡ ಮೊದಲ ಪ್ರಕರಣ

ಮೊದಲ ಬಾರಿ ಪೇಟಿಎಂ ವ್ಯಾಲೆಟ್ ಮೂಲಕ ವಂಚಿಸಿ ಹಣ ಡ್ರಾ ಮಾಡಿದ ಪ್ರಕರಣ ಚಂಡೀಗಡದಲ್ಲಿ ವರದಿಯಾಗಿದೆ. ಗಗನ್ ದೀಪ್ ಕೌರ್ ಎಂಬ ಮಹಿಳೆಗೆ ಕರೆ ಮಾಡಿದ ವಂಚಕ ಪೇಟಿಎಂ ವಿವರ ಕೇಳಿದ್ದಾನೆ. ತನ್ನ ಪೇಟಿಎಂ ವಿವರ ತಿಳಿಸಿದ ಕೆಲವೇ ನಿಮಿಷಗಳಲ್ಲಿ ಆಕೆಯ ಬ್ಯಾಂಕ್ ಅಕೌಂಟಿನಿಂದ 18,000 ರೂಪಾಯಿ ವಿತ್ ಡ್ರಾ ಆಗಿದೆ.

ವಂಚಕ ತನ್ನನ್ನು ರಾಹುಲ್ ಎಂದು ಪರಿಚಯಿಸಿಕೊಂಡಿದ್ದು, ಪೇಟಿಎಂ ಉದ್ಯೋಗಿ ಎಂದು ಹೇಳಿಕೊಂಡು ಕರೆ ಮಾಡಿದ್ದ. ಮೋಸ ಹೋದ ಮಹಿಳೆ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್(ಎನ್‌ಐಒಎಸ್) ಉದ್ಯೋಗಿ ಆಗಿದ್ದು, ಆಕೆಯ ಖಾತೆಯಲ್ಲಿ 18,000 ಮಾತ್ರ ಹಣವಿತ್ತು. ಈಗ ಖಾತೆಯಲ್ಲಿನ ಪೂರ್ತಿ ಹಣ ಖಾಲಿಯಾಗಿದೆ.

ಈ ರೀತಿಯ ಪ್ರಕರಣ ನಡೆದಿರುವುದು ಇದೇ ಮೊದಲ ಬಾರಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಸೈಬರ್ ಸೆಲ್ ಇನ್ಚಾರ್ಜ್, ಇನ್ಸ್‌ಪೆಕ್ಟರ್ ಹರೀಂದರ್ ಸಿಂಗ್ ಸೆಖಾನ್ ಹೇಳಿದ್ದಾರೆ

Loading...

Leave a Reply

Your email address will not be published.