ಆರ್.ಬಿ.ಐ ಮುಂದೆ ಅರೆನಗ್ನಳಾದ ಮಹಿಳೆ

ನವದೆಹಲಿ: ಹಳೆಯ ನೋಟು ಬದಲಾಯಿಸಲು ನಿರಾಕರಿಸಿದ ರಿಸರ್ವ್ ಬ್ಯಾಂಕ್ ಕ್ರಮಕ್ಕೆ ಹತಾಶೆಗೊಂಡ ಬಡಮಹಿಳೆಯೊಬ್ಬಳು ತನ್ನ ಬಟ್ಟೆ ಕಳಚಿ ಅರೆನಗ್ನಳಾಗಿ ಆರ್.ಬಿ.ಐ ಹೊರಗೆ ನಿಂತ ಘಟನೆ ನಡೆದಿದೆ.

ಬ್ಯಾಂಕ್ ಗೆ ಭೇಟಿ ನೀಡಿದ ಮಹಿಳೆ ಎರಡು 1000 ರ ನೋಟು, ನಾಲ್ಕು 500 ರ ನೋಟು ಬದಲಾಯಿಸಲು ತಂದಿದ್ದಳು. ಆದರೆ ಅಕೆ ತಂದ ನೋಟುಗಳು ಹರಿದ ಸ್ಥಿತಿಯಲ್ಲಿದ್ದವು. ಅದು ಮನೆಯಲ್ಲಿ ಇಲಿಗಳು ಕಚ್ಚಿರುವುದರಿಂದ ಹಾಗಾಗಿದೆ ಎಂದು ಆಕೆ ಉತ್ತರಿಸಿದ್ದಳು.

ನೋಟು ಬದಲಾಯಿಸಲು ನಿಯಮಗಳಂತೆ ಬ್ಯಾಂಕ್ ಕೌಂಟರಿನಲ್ಲಿ ಆಕೆಯ ಗುರುತಿನ ಚೀಟಿ ಕೇಳಿದ್ದಾರೆ. ಆದರೆ ಆಕೆಯ ಬಳಿ ಅದ್ಯಾವುದೂ ಇರಲಿಲ್ಲ. ಗುರುತಿನ ಚೀಟಿ ವಿವರ ಪಡೆಯದೆ ನೋಟು ಬದಲಿಸಲು ಅವಕಾಶವಿಲ್ಲದ ಕಾರಣ ನೋಟಯ ಬದಲಾಯಿಸಿಕೊಡಲು ನಿರಾಕರಿಸಿದ್ದಾರೆ.

ಹೀಗಾಗಿ ಆಕೆ ಹೊರಗೆ ಹೋಗಲು ನಿರಾಕರಿಸಿ ಕೆಲ ಗಂಟೆಗಳ ಕಾಲ ತನ್ನ ಮಗುವಿನೊಂದಿಗೆ ಅಲ್ಲಿಯೇ ಕಾದಿದ್ದಳು. ಈ ವೇಳೆ ಮಗುವೂ ಅಲ್ಲಿಯೇ ಮೂತ್ರ ವಿಸರ್ಜನೆ ಮಾಡಿತ್ತು ಹೊರ ಹೋಗಲು ನಿರಾಕರಿಸಿದ ಆಕೆಯನ್ನು ಮಹಿಳಾ ಪೊಲೀಸರು ಠಾಣೆಗೆ ಕರೆದೊಯ್ಯಲು ಪ್ರಯತ್ನಿಸಿದ ವೇಳೆ ಹತಾಶಳಾಗಿ ಆಕೆ ಅರೆನಗ್ನಳಾಗಿ ನಿಂತಳು. ನಂತರ ಆಕೆ ಮತ್ತು ಮಗುವನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ನಂತರ ಮನೆಗೆ ತಲುಪಿಸಲಾಯಿತು.

Loading...

Leave a Reply

Your email address will not be published.

error: Content is protected !!