ಕೋಪದಲ್ಲಿ ಮಗುವನ್ನೆಸೆದ ಮಹಾತಾಯಿ

ಕೋಪದಲ್ಲಿ 26 ವರ್ಷದ ಮಹಿಳೆಯೊಬ್ಬಳು ತನ್ನ 3 ವರ್ಷದ ಮಗುವನ್ನು ಮೊದಲ ಮಹಡಿಯ ಮೆಟ್ಟಿಲುಗಳ ಮೇಲಿಂದ ಎಸೆದ ಘಟನೆ ದೆಹಲಿಯಲ್ಲಿ ಜನವರಿ 24 ರಂದು ನಡೆದಿದ್ದು ಬೆಳಕಿಗೆ ಬಂದಿದೆ. ತಾಯಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೋಗಿ ಬಿಸಾಡಿದ್ದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಕೂಡಲೇ ಕುಟುಂಬದ ಸದಸ್ಯರು ಮಗುವಿನ ರಕ್ಷಣೆಗೆ ಹೋಗಿದ್ದು ಮಗುವಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಬದುಕುಳಿದಿದೆ.

ಸೋನಮ್ ಗುಪ್ತಾ ಎಂಬ ಮಹಿಳೆ ಮತ್ತು ಆಕೆಯ ಅತ್ತೆಯೊಂದಿಗೆ ವಾಗ್ವಾದ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿ ಆಕೆ ತನ್ನ ಮಗುವನ್ನೇ ಹೊರತಂದು ಎಸೆದಿದ್ದಾಳೆ.

ಮೂಲಗಳ ಪ್ರಕಾರ ಸೋನಮ್ ಗುಪ್ತಾ ಮದುವೆಯಾದ ಕೆಲ ತಿಂಗಳುಗಳಿಗೇ ಗಂಡನೊಂದಿಗೆ ಮತ್ತು ಅತ್ತೆ ಮಾವನೊಂದಿಗೆ ಜಗಳವಾಡಲು ಆರಂಭಿಸಿದ್ದಳು, ಒಮ್ಮೆ ಪೊಲೀಸ್ ಠಾಣೆಯವರೆಗೂ ಹೋಗಿ ಬಂದಿದ್ದರು. ಆದರೆ ಈಗ ಕುಟುಂಬ ಸದಸ್ಯರು ಪೊಲೀಸ್ ದೂರು ದಾಖಲಿಸಿದ್ದು, ಸೋನಮ್ ಗುಪ್ತಾ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

English Summary: A 26-year old woman in Delhi threw off her three years old son from the first storey of the building in a fit of rage on January 24. The incident took place in the Prahaladpur area of the southeast Delhi.