ರಾಹುಲ್ ಗಾಂಧಿಯನ್ನೇ ಮದುವೆ ಆಗ್ತೀನಿ

ದೇಶದಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚಲರ್ ಗಳಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯೂ ಒಬ್ಬರು. ಇಂತಹ ರಾಹುಲ್ ಗಾಂಧಿಗೀಗ ಮದುವೆ ಪ್ರಪೋಸಲ್ ಬಂದಿದೆ. ರಾಹುಲ್ ಗಾಂಧಿಯನ್ನೇ ಮದುವೆಯಾಗುತ್ತೇನೆ ಎಂದು ಅಲಹಾಬಾದಿನ ಮಹಿಳೆಯೊಬ್ಬರು ಹೇಳಿದ್ದಾರೆ. ತನ್ನನ್ನು ರಾಹುಲ್ ಗಾಂಧಿ ಮದುವೆ ಏಕೆ ಆಗಬೇಕು ಎಂಬುದಕ್ಕೆ ಕಾರಣಗಳನ್ನೂ ನೀಡಿದ್ದಾಳೆ.

ಉತ್ತರ ಪ್ರದೇಶದ ಅಲಹಾಬಾದಿನ ಆ ಮಹಿಳೆ ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಕಛೇರಿ ಎದುರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ತನ್ನ ಮನದ ಮಾತು ಬಹಿರಂಗಪಡಿಸಿದ್ದಾಳೆ.

ನಾನು ರಾಹುಲ್ ಗಾಂಧಿ ಅಭಿಮಾನಿ, ಅವರ ಮೇಲೆ ನನಗೆ ಪ್ರೀತಿ ಹುಟ್ಟಿದೆ, ಏಕೆಂದರೆ ಅವರು ದಲಿತರ ಮನೆಯಲ್ಲಿ ಊಟ ಮಾಡಿದ್ದಾರೆ, ದಲಿತರಿಗೆ ಸಹಾಯ ಮಾಡಿದ್ದಾರೆ, ಆದ್ದರಿಂದ ಅವರು ದಲಿತಳನ್ನೇ ಮದುವೆಯಾಗಬೇಕು ಎಂದು ಹೇಳಿದ್ದಾಳೆ. ನಾನು ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆ, ತುಂಬಾ ದಿನಗಳಿಂದ ಪಕ್ಷಕ್ಕೆ ಕೆಲಸ ಮಾಡುತ್ತಿದ್ದೇನೆ. ಹಾಗಾಗಿ ಅವರು ನನ್ನನ್ನೆಕೆ ಮದುವೆಯಾಗಬಾರದು ಎಂದು ಪ್ರಶ್ನಿಸಿದ್ದಾಳೆ.

ಕಾಂಗ್ರೆಸ್ ಸೇವಾ ದಳ ಸದಸ್ಯೆಯಾಗಿ ತಾನು ತುಂಬಾ ದಿನಗಳಿಂದ ಕೆಲಸ ಮಾಡುತ್ತಿದ್ದೇನೆ. 2006 ರಲ್ಲೇ ರಾಹುಲ್ ಗಾಂಧಿಯನ್ನು ಮದುವೆಯಾಗಬೇಕು ಎಂಬ ಆಸೆ ಚಿಗುರೊಡೆಯಿತು. ಆತ ಕನಸಿನಲ್ಲಿ ನನ್ನನ್ನು ಸ್ವಪ್ನ ಸುಂದರಿ ಎಂದು ಹೇಳಿದರು. 2014 ರಲ್ಲಿ ತಾನು ಕಾಂಗ್ರೆಸ್ ಸೇರಿದ್ದು, ಅಂದಿನಿಂದ ರಾಹುಲ್ ಮೇಲೆ ತನಗೆ ವಿಶ್ವಾಸ ಹೆಚ್ಚಾಯಿತು ಎಂದು ಹೇಳಿದ್ದಾಳೆ. ಅಮೇಥಿ ಸಂಸದರಾದ ರಾಹುಲ್ ತನ್ನನ್ನು ಹಲವು ಬಾರಿ ಭೇಟಿ ಮಾಡಿದ್ದಾರೆ ಎಂದು ಆಕೆ ಹೇಳಿದ್ದಾಳೆ.

ರಾಹುಲ್ ಗಾಂಧಿಯನ್ನೇಕೆ ಮದುವೆಯಾಗಲು ಬಯಸುತ್ತಿದ್ದೀಯ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ‘ಅವರು ಸುಂದರವಾಗಿದ್ದಾರೆ, ಪ್ರಧಾನಿ ಮಗ, ಉತ್ತಮ ನಾಯಕ’ ಎಂದು ಹೇಳಿದ್ದಾಳೆ. ಮದುವೆಯಾಗುವುದಾಗಿ ನಿನಗೆ ರಾಹುಲ್ ಗಾಂಧಿ ಭರವಸೆ ನೀಡಿದ್ದಾರಾ? ಎಂಬ ಪ್ರಶ್ನೆಗೆ, ‘ವಾಸ್ತವವಾಗಿ ಭರವಸೆ ನೀಡಿಲ್ಲ, ಆದರೆ ತನ್ನ ಕನಸಿನಲ್ಲಿ ಸದಾ ಬರುತ್ತಿದ್ದು, ನಿನ್ನೇ ಮದುವೆಯಾಗುತ್ತೇನೆ ಎಂದು ಭರವಸೆ ನೀಡುತ್ತಿದ್ದರು’ ಎಂದು ಹೇಳಿದ್ದಾಳೆ.

ಆಕೆ ಮಾತನಾಡಿದ ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ