ಗಂಡನನ್ನು 8 ತುಂಡು ಮಾಡಿ ಹೂತಿಟ್ಟಿದ್ದ ಮಹಿಳೆಗೆ 30 ವರ್ಷ ಜೈಲು

ಗುರುಗ್ರಾಮ್: ಪ್ರಿಯಕರನೊಂದಿಗೆ ಸೇರಿ ಗಂಡ ಬಲ್ಜೀತ್ ಸಿಂಗ್ ನನ್ನು ಹತ್ಯೆ ಮಾಡಿ ದೇಹವನ್ನು 8 ತುಂಡುಗಳನ್ನಾಗಿ ಮಾಡಿ ಮನೆಯಲ್ಲಿ ಹೂತಿಟ್ಟಿದ್ದ ಮಹಿಳೆಗೆ ಹರಿಯಾಣದ ಜಜ್ಜರ್ ಜಿಲ್ಲೆಯ ನ್ಯಾಯಾಲಯ 30 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕೊಲೆಗೆ ಸಹಕರಿಸಿದ ಮಹಿಳೆಯ ಪ್ರಿಯಕರನಿಗೂ ಜೈಲು ಶಿಕ್ಷೆ ವಿಧಿಸಲಾಗಿದೆ.

ಆರೋಪಿ ಪೂಜಾ(30) ನೆರೆಮನೆಯಾತನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು. ಇದಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಪ್ರಿಯಕರನೊಂದಿಗೆ ಸೇರಿ ಕೊಂದು ಆತನ ದೇಹವನ್ನು 8 ತುಂಡುಗಳನ್ನಾಗಿ ಕತ್ತರಿಸಿ ಮನೆ ಬಳಿ ವಿವಿಧ ಕಡೆ ಹೂತಿಟ್ಟಿದ್ದರು.

ಬಲ್ಜೀತ್ ಸಿಂಗ್ ಸಹೋದರ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ಅಷ್ಟೇ ಅಲ್ಲದೆ ಪೂಜಾಳ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಬಲ್ಜೀತ್ ಸಿಂಗ್ ಸಹೋದರಿಯರು ಗಮನಿಸಿದ್ದರು. ಹೀಗಾಗಿ ಈ ಬಲ್ಜೀತ್ ಸಿಂಗ್ ನಾಪತ್ತೆಯಾಗಿರುವುದರ ಹಿಂದೆ ಪೂಜಾ ಕೈವಾಡಿವಿದೆ ಎಂದು ಅವರು ಶಂಕಿಸಿದ್ದರು.

ಇದನ್ನೂ ಓದಿ: ದೆಹಲಿ ಕೇವಲ ಅಲ್ಲಿನ ನಿವಾಸಿಗಳದ್ದಲ್ಲ, ಇಡೀ ದೇಶದ ನಾಗರಿಕರಿಗೆ ಸೇರಿದ್ದು: ಸುಪ್ರೀಂಗೆ ಕೇಂದ್ರ

ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಧೀಶರು, ಈ ಕೊಲೆಯನ್ನು ಪೂರ್ವಯೋಜಿತ ಕೃತ್ಯ, ಮತ್ತು ಶವದ ಎದುರೇ ತಮ್ಮ ಕಾಮದಾಟ ಮುಂದುವರೆಸಿದ್ದರು ಎಂದು ಸಾಬೀತಾಗಿದೆ ಎಂದು ಹೇಳಿ ತೀರ್ಪು ನೀಡಿದ್ದಾರೆ.

Get Latest updates on WhatsApp. Send ‘Add Me’ to 8550851559