ಪೇದೆಗೆ ಕಪಾಳ ಮೋಕ್ಷ ಮಾಡಿದ್ದ ಯುವತಿಯ ಬಂಧನ |News Mirchi

ಪೇದೆಗೆ ಕಪಾಳ ಮೋಕ್ಷ ಮಾಡಿದ್ದ ಯುವತಿಯ ಬಂಧನ

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಪೇದೆಯೊಬ್ಬರಿಗೆ ಚಪ್ಪಲಿಯಿಂದ ಥಳಿಸಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಭದ್ರತಾ ದೃಷ್ಟಿಯಿಂದ ರಾಹುಲ್ ಸಂಚರಿಸುವ ಮಾರ್ಗದಲ್ಲಿ ಟ್ರಾಫಿಕ್ ಅನ್ನು ಕೆಲಕಾಲ ನಿರ್ಬಂಧಿಸಲಾಗಿತ್ತು.

ಆದರೆ ರಾಹುಲ್ ಗಾಂಧಿ ಬೆಂಗಾವಲು ಪಡೆಯ ವಾಹನಗಳನ್ನು ಹಿಂಬಾಲಿಸಿಕೊಂಡೇ ಬಂದ ಸಾರಿಕಾ(21) ಎಂಬ ಯುವತಿಯ ಬೈಕ್ ಅನ್ನು ಕ್ವೀನ್ಸ್ ರಸ್ತೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕೆ.ಜಿ.ಹಳ್ಳಿ ಠಾಣೆಯ ಪೇದೆ ವೆಂಕಟೇಶ್ ಎಂಬುವವರು ತಡೆದಿದ್ದರು. ಇದರಿಂದ ಕುಪಿತಗೊಂಡ ಸಾರಿಕಾ ಪೇದಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಪೇದೆ ಚಪ್ಪಲಿಯಿಂದ ಬಾರಿಸಿದ್ದಳು. ಅಷ್ಟೇ ಅಲ್ಲದೆ ಆಕೆಯ ಹೆಸರನ್ನು ಹೇಳಿ ಏನು ಮಾಡಲು ಸಾಧ್ಯವೋ ಮಾಡಿಕೋ ಎಂದು ಸವಾಲು ಹಾಕಿ ಪರಾರಿಯಾಗಿದ್ದಳು. ಈ ಕುರಿತು ಟ್ರಾಫಿಕ್ ಪೊಲೀಸ್ ವೆಂಕಟೇಶ್ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

Loading...
loading...
error: Content is protected !!