ಚಿಂತಾಮಣಿ: ಮಾಜಿ ಪತಿ ಸಮ್ಮುಖದಲ್ಲಿ ಪ್ರೀತಿಸಿದವನ ಕೈಹಿಡಿದಾಕೆ |News Mirchi

ಚಿಂತಾಮಣಿ: ಮಾಜಿ ಪತಿ ಸಮ್ಮುಖದಲ್ಲಿ ಪ್ರೀತಿಸಿದವನ ಕೈಹಿಡಿದಾಕೆ

ಚಿಂತಾಮಣಿ: ವಿಚ್ಛೇದನ ತೆಗೆದುಕೊಂಡ ನಂತರ ದಂಪತಿಗಳು ನೀನ್ಯಾರೋ ನಾನ್ಯಾರೋ ಎಂಬಂತೆ ಎಲ್ಲಾ ರೀತಿ ಸೆಟಲ್ ಮಾಡ್ಕೊಂಡು ಇದ್ದು ಬಿಡೋದನ್ನೇ ನೋಡ್ತಿರೋ ನಮಗೆ ಇದೊಂದು ವಿಶೇಷ ಸುದ್ದಿ. ಇತ್ತೀಚೆಗಷ್ಟೇ ಪತಿಯಿಂದ ವಿಚ್ಛೇದನ ಪಡೆದ ಪತ್ನಿ ತನ್ನ ಮಾಜಿ ಪತಿಯ ಸುಮ್ಮುಖದಲ್ಲೇ ಪ್ರೀತಿಸಿದ ವ್ಯಕ್ತಿಯೊಂದಿಗೆ ಮದುವೆಯಾದ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಈ ಘಟನೆ ನಡೆದಿದೆ.

ಚಿಂತಾಮಣಿ ತಾಲ್ಲೂಕಿನ ಪೆದ್ದೂರು ಗ್ರಾಮದ ಈಶ್ವರ ಗೌಡ ಎಂಬವವರಿಗೆ ಚಿಂತಾಮಣಿಯ ಆಶ್ವಿನಿ ಲೇಔಟ್ ನ ರಚನಾ ಎಂಬುವವರ ಜೊತೆ 15 ವರ್ಷಗಳ ಹಿಂದೆ ಮದುವೆಯಾಗಿತ್ತು. ಆದರೆ ಕೆಲ ಕಾಲದಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದ್ದವು. ಈ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್ ನಲ್ಲಿ ಈಶ್ವರ್ ಗೌಡ ಅವರಿಂದ ವಿಚ್ಛೇದನ ಪಡೆದು ಮಕ್ಕಳೊಂದಿಗೆ ರಚನಾ ಬೇರೆಯಾಗಿ ಜೀವನ ಮಾಡುತ್ತಿದ್ದರು. ನಂತರ ರಾಜ್ಯ ರೈತ ಸಂಘ ಮಹಿಳಾ ಘಟಕದ ಅಧ್ಯಕ್ಷೆಯಾಗಿರುವ ಆಕೆ ನಡೆಸುತ್ತಿದ್ದ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಚಾಲಕ ಮಂಜುನಾಥನೊಂದಿಗೆ ಆಕೆಗೆ ಪ್ರೀತಿ ಹುಟ್ಟಿತ್ತು. ಈ ವಿಷಯ ತನ್ನ ಮಾಜಿ ಪತಿಯ ಬಳಿ ರಚನಾ ಹೇಳಿಕೊಂಡಿದ್ದು, ಮಾಜಿ ಪತಿ ಇದಕ್ಕೆ ಸಹಕಾರ ನೀಡಿದ್ದಾರೆ.

ತನ್ನನ್ನು ಇಷ್ಟಪಟ್ಟ ಬೇರೊಬ್ಬರನ್ನು ಮದುವೆಯಾಗಲು ಪತಿಗೆ ವಿಚ್ಛೇದನ ನೀಡಿದ್ದ ರಚನಾ, ಕೊನೆಗೆ ಬೇರೊಬ್ಬ ವ್ಯಕ್ತಿ ಅಂದರೆ ಶಾಲೆಯಲ್ಲಿ ಕೆಲಸ ಮಾಡುವ ಚಾಲಕನನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ.

ರಾಜೀನಾಮೆ ಇಲ್ಲ, ನಾಯಕರ ಮನವೊಲಿಕೆ ನಂತರ ಯೂ ಟರ್ನ್

Loading...
loading...
error: Content is protected !!