ಏನೇ ಆಗಲಿ ವಂದೇ ಮಾತರಂ ಹಾಡುವುದಿಲ್ಲ: ಕಾಂಗ್ರೆಸ್ ಮುಖಂಡ – News Mirchi

ಏನೇ ಆಗಲಿ ವಂದೇ ಮಾತರಂ ಹಾಡುವುದಿಲ್ಲ: ಕಾಂಗ್ರೆಸ್ ಮುಖಂಡ

ಏನೇ ಆಗಲಿ ನಾವು ನಮ್ಮ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಒಂದು ತಿಂಗಳ ಕಾಲ ಹಾಡುವುದಿಲ್ಲ, ಏನೇ ಆದರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಉತ್ತರಾಖಂಡ ಕಾಂಗ್ರೆಸ್ ಮುಖಂಡ ಕಿಶೋರ್ ಉಪಾಧ್ಯಾಯ ವಿವಾದಿತ ಹೇಳಿಕೆ ನೀಡಿದ್ದಾರೆ.

ಉತ್ತರಾಖಂಡದಲ್ಲಿ ಇರಲು ಬಯಸುವವರು ವಂದೇ ಮಾತರಂ ಹಾಡಲೇಬೇಕು ಎಂದು ಇತ್ತೀಚೆಗೆ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿಕೆ ನೀಡಿದ್ದು ಮತ್ತು ರಾಜ್ಯದ ಎಲ್ಲಾ ಶಾಲೆಗಳಲ್ಲಿ ವಂದೇಮಾತರಂ ಗೀತೆ ಕಡ್ಡಾಯ ಮಾಡಬೇಕು ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಅಲ್ಲಿನ ಕಾಂಗ್ರೆಸ್ ಮುಖಂಡ ಈ ಹೇಳಿಕೆ ನೀಡಿದ್ದಾರೆ. [ಭಾರತದಲ್ಲಿ ಇರಬೇಕಾದರೆ ವಂದೇ ಮಾತರಂ ಹಾಡಲೇಬೇಕು]

ಇಂತಹ ನಿಯಮಗಳನ್ನು ಜನರ ಮೇಲೆ ಹೇರುವುದು ಸರಿಯಲ್ಲ, ನಾವು ನಮ್ಮ ಪಕ್ಷದ ಅಧಿಕೃತ ಕಾರ್ಯಕ್ರಮಗಳಲ್ಲಿ ಒಂದು ತಿಂಗಳ ಕಾಲ ವಂದೇ ಮಾತರಂ ಹಾಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಹೇಳಿದ್ದಾರೆ.

Contact for any Electrical Works across Bengaluru

Loading...
error: Content is protected !!