ಚೀನಾ ಮಹಾಗೋಡೆ ಮೇಲೆ ಯೋಗಾ ಪ್ರದರ್ಶನ, ವಿ.ಕೆ.ಸಿಂಗ್ ಭಾಗಿ – News Mirchi

ಚೀನಾ ಮಹಾಗೋಡೆ ಮೇಲೆ ಯೋಗಾ ಪ್ರದರ್ಶನ, ವಿ.ಕೆ.ಸಿಂಗ್ ಭಾಗಿ

“ಚೀನಾದ ಮಹಾಗೋಡೆ” ಮೇಲೆ ಇದೇ ಮೊಟ್ಟ ಮೊದಲ ಬಾರಿಗೆ ಭಾರತ ಮತ್ತು ಚೀನೀಯರು ಸೇರಿ ಯೋಗಾ ಪ್ರದರ್ಶಿಸುತ್ತಿದ್ದಾರೆ. ಬುಧವಾರ ಅಂತರಾಷ್ಟ್ರೀಯ ಯೋಗಾ ದಿನಾಚರಣೆ ಅಂಗವಾಗಿ ಅಲ್ಲಿನ ಭಾರತೀಯ ರಾಯಭಾರ ಕಛೇರಿ, ಬೀಜಿಂಗ್ ಚೈನೀಸ್ ಪೀಪಲ್ಸ್ ಅಸೋಸಿಯೇಷನ್ ಫಾರ್ ಫ್ರೆಂಡ್ಷಿಪ್ ಫಾರಿನ್ ಕಂಟ್ರೀಸ್ ಮತ್ತು ಯೋಗಿ ಯೋಗಾ ಪಾಠಶಾಲೆ ಈ ಯೋಗಾ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾರತ ವಿದೇಶಾಂಗ ಖಾತೆ ರಾಜ್ಯ ಸಚಿವ ವಿಕೆ ಸಿಂಗ್ ಪಾಲ್ಗೊಂಡು ಯೋಗಾಸನ ಮಾಡಿದರು. ಉಭಯ ದೇಶಗಳ ಉತ್ಸಾಹಿ ನಾಗರಿಕರು ಜಂಟಿಯಾಗಿ ಚೀನಾ ಗೋಡೆ ಮೇಲೆ ಮೊದಲ ಬಾರಿಗೆ ಯೋಗಾ ಪ್ರದರ್ಶಿಸಿದ್ದಾಗಿ ಭಾರತೀಯ ರಾಯಭಾರಿ ಕಛೇರಿ ಅಧಿಕಾರಿಗಳು ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.

ಬೀಜಿಂಗ್ ನಲ್ಲಿ ನಡೆಯುವ ಬ್ರಿಕ್ಸ್ ವಿದೇಶಾಂಗ ಸಚಿವಾಲಯ ಅಧಿಕಾರಿಗಳ ಅಧಿವೇಶನದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿದ್ದ ವಿಕೆ ಸಿಂಗ್, ಈ ಕಾರ್ಯಕ್ರಮಕ್ಕೆ ಹಾಜರಾದರು. ಸುಮಾರು 200 ಜನ ಭಾರತ ಮತ್ತು ಚೀನೀ ನಾಗರಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದಕ್ಕೆ ಸಂಬಂಧಿಸಿದ ಅದ್ಭುತ ಚಿತ್ರಗಳನ್ನು ಭಾರತೀಯ ರಾಯಭಾರಿ ಕಛೇರಿ ಅಧಿಕಾರಿಗಳು ಟ್ವಿಟರ್ ಮೂಲಕ ಬಿಡುಗಡೆ ಮಾಡಿದ್ದಾರೆ.  [ರಾಮ ಮಂದಿರ ನಿರ್ಮಾಣಕ್ಕೆ ಕಲ್ಲು ಸಂಗ್ರಹ ಆರಂಭಿಸಿದ ವಿ.ಹಿಂ.ಪ]

Contact for any Electrical Works across Bengaluru

Loading...
error: Content is protected !!