ಸಿಂಧೂ ಒಪ್ಪಂದದ ಕುರಿತು ಇನ್ನೂ ಯಾವುದೇ ತೀರ್ಮಾನವಿಲ್ಲ: ವಿಶ್ವ ಬ್ಯಾಂಕ್ ಸ್ಪಷ್ಟನೆ – News Mirchi

ಸಿಂಧೂ ಒಪ್ಪಂದದ ಕುರಿತು ಇನ್ನೂ ಯಾವುದೇ ತೀರ್ಮಾನವಿಲ್ಲ: ವಿಶ್ವ ಬ್ಯಾಂಕ್ ಸ್ಪಷ್ಟನೆ

ಭಾರತ ಮತ್ತು ಪಾಕ್ ನಡುವೆ ಉದ್ಭವಿಸಿರುವ ಸಿಂದೂ ನೀರು ಹಂಚಿಕೆ ಒಪ್ಪಂದ ವಿವಾದ ಕುರಿತು ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ, ಈ ಕುರಿತು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಲ್ಲಿ ಸತ್ಯವಿಲ್ಲ ಎಂದು ವಿಶ್ವ ಬ್ಯಾಂಕ್ ಪ್ರಕಟಣೆ ಹೇಳಿದೆ.

ಪಾಕಿಸ್ತಾನ ಭಾರತ ನಡುವೆ ನಡೆಯುತ್ತಿರುವ ಚರ್ಚೆಗಳಿಗೆ ಸಂಬಂಧಿಸಿದಂತೆ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಜಮ್ಮೂ ಕಾಶ್ಮೀರ ವಲಯದಲ್ಲಿ ಸಿಂಧೂ ನದಿಯ ಉಪನದಿಗಳಾದ ಜೀಲಂ, ಚಿನಾಬ್ ಗಳ ಮೇಲೆ ಕಿಷನ್ ಗಂಗಾ, ರಾಟ್ಲೆ ಜಲವಿದ್ಯುತ್ ಕೇಂದ್ರಗಳ ನಿರ್ಮಾಣ ವಿಷಯದಲ್ಲಿ ಭಾರತಕ್ಕೆ ಅನುಕೂಲವಾಗಿ ವಿಶ್ವಬ್ಯಾಂಕ್ ತೀರ್ಮಾನ ಕೈಗೊಂಡಿದೆ ಎಂದೂ, ಇದಕ್ಕೆ ಪಾಕಿಸ್ತಾನ ಕೂಡಾ ಅಂಗೀಕರಿಸಿದೆ ಎಂದು ಸುದ್ದಿಗಳು ಪ್ರಸಾರವಾಗಿವೆ ಎಂದು ವಿಶ್ವಬ್ಯಾಂಕ್ ಹೇಳಿದೆ.

ವಿಶ್ವ ಬ್ಯಾಂಕ್ ಸಮ್ಮುಖದಲ್ಲಿ ಚರ್ಚೆಗಳು ಪೂರ್ಣಗೊಂಡ 24 ಗಂಟೆಗಳ ನಂತರ ಈ ಸುದ್ದಿಗಳನ್ನು ನಿರಾಕರಿಸಿದೆ. ವಿವಾದಕ್ಕೆ ಸಂಬಂಧಿಸಿದಂತೆ ಇನ್ನೂ ಚರ್ಚೆಗಳು ಮುಂದುವರೆದಿವೆ, ಮತ್ತೊಮ್ಮೆ ಸೆಪ್ಟೆಂಬರ್ ನಲ್ಲಿ ಉಭಯದೇಶಗಳ ಜೊತೆ ಸಭೆ ನಡೆಸುವುದಾಗಿ ಸ್ಪಷ್ಟಪಡಿಸಿದೆ. ಆದರೆ ಸದ್ಯ ನಡೆದಿರುವ ಸಭೆಯಲ್ಲಿನ ವಿಷಯಗಳನ್ನು ಮಾತ್ರ ವಿಶ್ವಬ್ಯಾಂಕು ಬಹಿರಂಗಪಡಿಸಿಲ್ಲ.

Loading...