ಹುಳುಮಿಶ್ರಿತ ಅಕ್ಕಿ ಭಾಗ್ಯ, ಗುತ್ತಿಗೆದಾರನ ಲೈಸೆನ್ಸ್ ರದ್ದು

ಗದಗದಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ಹುಳು ಬಿದ್ದ ಕಳಪೆ ಅಕ್ಕಿ ವಿತರಿಸುತ್ತಿದ್ದ ನ್ಯಾಯಬೆಲೆ ಅಂಗಡಿಯ ಗುತ್ತಿಗೆದಾರನ ಪರವಾನಗಿಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ. ಆರ್.ಎಂ.ಪುಟ್ಟಿ ಎಂಬುವವರ ನ್ಯಾಯಬೆಲೆ ಮಳಿಗೆ ಸಂಖ್ಯೆ 46 ರಲ್ಲಿ ಬಡವರಿಗೆ ಅನ್ನಭಾಗ್ಯ ಯೋಜನೆಯಲ್ಲಿ ನೀಡುವ ಅಕ್ಕಿ ಕಳಪೆಯಾಗಿದ್ದು, ಹುಳುಮಿಶ್ರಿತ ಅಕ್ಕಿಯನ್ನು ಜನರಿಗೆ ಹಾಗೆಯೇ ವಿತರಿಸುತ್ತಿದ್ದರು. ಇದರಿಂದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಕಳಪೆ ಅಕ್ಕಿಯನ್ನು ವಿತರಿಸುತ್ತಿದ್ದ ನ್ಯಾಯ ಬೆಲೆ ಅಂಗಡಿಯ ಪರವಾನಗಿಯನ್ನು ರದ್ದು ಮಾಡಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಅಕ್ಕಿಯನ್ನು ಯಾವ ಡಿಪೋದಿಂದ ತರಲಾಗಿದೆ ಎಂಬುದರ ಕುರಿತೂ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ತಿಳಿಸಿದರು.