ಟ್ರಂಪ್ ನಿರ್ಧಾರಕ್ಕೆ ಆಫ್ರಿಕಾ ತತ್ತರ

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀತಿಗಳಿಂದಾಗಿ ಹಲವು ಬಡ ದೇಶಗಳಿಗೆ ಸಂಕಷ್ಟ ಎದುರಾಗಲಿದೆ. ಇದುವರೆಗೂ ಆಫ್ರಿಕಾದ ಹಲವು ದೇಶಗಳಿಗೆ ಅಮೆರಿಕಾ ನೀಡುತ್ತಾ ಬಂದಿರುವ ಆರ್ಥಿಕ ನೆರವಿಗೆ ಟ್ರಂಪ್ ಕತ್ತರಿ ಹಾಕಲು ಅನುಕೂಲವಾಗುವಂತೆ ಅಸೆಂಬ್ಲಿಯಲ್ಲಿ ಮಸೂದೆಯನ್ನು ಮಂಡಿಸಲಿದ್ದಾರೆ. ಈ ಮಸೂದೆ ಒಂದು ವೇಳೆ ಜಾರಿಯಾದರೆ ಆಫ್ರಿಕಾದಲ್ಲಿ ಸಂಕಷ್ಟದ ಪರಿಸ್ಥಿತಿ ಸೃಷ್ಟಿಯಾಗಲಿದೆ ಎಂದು ಹಲವು ಸಂಸ್ಥೆಗಳು ಆತಂಕ ವ್ಯಕ್ತಪಡಿಸುತ್ತಿವೆ. ವಿಶ್ವದಲ್ಲಿ ಹಲವು ದೇಶಗಳಿಗೆ ಅಮೆರಿಕಾದಿಂದ ಅತಿ ಹೆಚ್ಚು ಆರ್ಥಿಕ ನೆರವು ಲಭಿಸುತ್ತಿದೆ. ಕೆಲ ದೇಶಗಳು ಆಂತರಿಕ ಯುದ್ಧದಲ್ಲಿ ನಷ್ಟ ಅನುಭವಿಸಿದರೆ ಅದಕ್ಕಾಗಿ ನಿಧಿಗಳನ್ನೂ ನೀಡುತ್ತದೆ.

ಆದರೆ ಈಗ ಇಂತಹ ನೆರವು ಕಡಿಮೆ ಮಾಡಲು ಟ್ರಂಪ್ ಸರ್ಕಾರ ಕಸರತ್ತು ಆರಂಭಿಸಿದೆ. ಇದು ಯಶಸ್ವಿಯಾದರೆ 70 ವರ್ಷಗಳಲ್ಲಿ ಎಂದೂ ಕಾಣದಂತ ಪರಿಣಾಮಗಳುಂಟಾಗುತ್ತವೆ ಎನ್ನಲಾಗುತ್ತಿದೆ.

ನೈಜೀರಿಯಾ, ಸೋಮಾಲಿಯಾ ಮತ್ತು ದಕ್ಷಿಣ ಸೂಡಾನ್ ದೇಶಗಳ ಮೇಲೆ ಟ್ರಂಪ್ ನಿರ್ಧಾರದ ಪ್ರಭಾವ ಹೆಚ್ಚಾಗಿರುತ್ತದೆ. ಈ ಮೂರೂ ದೇಶಗಳು ಈಗಾಗಲೇ ಆಂತರಿಕ ಯುದ್ಧ, ಭಯೋತ್ಪಾದನೆಗಳಿಂದಾಗಿ ತತ್ತರಿಸಿವೆ. ದಕ್ಷಿಣ ಸೂಡಾನ್ ನ ಎರಡು ರಾಜ್ಯಗಳಲ್ಲಿ ತೀವ್ರ ಬರವಿದೆ. ಇವರಿಗೆ ಆಹಾರ ಲಭ್ಯವಾಗದಿದ್ದರೆ ಸುಮಾರು ಹತ್ತು ಲಕ್ಷ ಜನ ಸಾವನ್ನಪ್ಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸೋಮಾಲಿಯಾದಲ್ಲಿ ಭೀಕರ ಕ್ಷಾಮದಿಂದಾಗಿ ಅಲ್ಲಿ ತುರ್ತು ಪರಿಸ್ಥಿತಿ ಇದೆ. ಸೂಕ್ತ ಸರ್ಕಾರವಿಲ್ಲದ ಕಾರಣ ದರೋಡೆಕೋರರದ್ದೇ ಸಾಮ್ರಾಜ್ಯ. ಇನ್ನು ನೈಜೀರಿಯಾದ ಈಶಾನ್ಯ ಪ್ರಾಂತ್ಯದಲ್ಲಿ ಬೋಕೋ ಉಗ್ರರ ಉಪಟಳದಿಂದಾಗಿ ಅಶಾಂತಿ ನೆಲೆಸಿದೆ. ಉಗ್ರರು ಮತ್ತು ಸೇನೆಯ ನಡುವಿನ ಹೋರಾಟದಲ್ಲಿ ಲಕ್ಷಾಂತರ ಮಕ್ಕಳಿಗೆ ಪೌಷ್ಟಿಕಾಂಶದ ಆಹಾರದ ಸರಬರಾಜು ಆಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಮೆರಿಕಾ ನೀಡುತ್ತಿರುವ ನೆರವನ್ನೂ ನಿಲ್ಲಿಸಿದರೆ ಪರಿಸ್ಥಿತಿಯನ್ನು ಊಹಿಸಿಕೊಳ್ಳಲೂ ಕಷ್ಟ.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache