ಯೋಗೇಶ್ ಮಾಸ್ಟರ್ ಗೆ ಮಸಿ ಬಳಿದ ಪ್ರಕರಣ: ಆರೋಪಿಗಳ ವಿರುದ್ಧ ರೌಡಿಶೀಟ್ |News Mirchi

ಯೋಗೇಶ್ ಮಾಸ್ಟರ್ ಗೆ ಮಸಿ ಬಳಿದ ಪ್ರಕರಣ: ಆರೋಪಿಗಳ ವಿರುದ್ಧ ರೌಡಿಶೀಟ್

ದಾವಣಗೆರೆ: ವಿವಾದಿತ ಲೇಖಕ ಯೋಗೇಶ್ ಮಾಸ್ಟರ್ ಮುಖಕ್ಕೆ ಇತ್ತೀಚೆಗೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ರೌಡಿ ಶೀಡರ್ ಪಟ್ಟಿಗೆ ಸೇರಿಸಲಾಗಿದೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಎಸ್ ಗುಳೇದ್ ಅವರು ಈ ವಿಷಯ ತಿಳಿಸಿದರು.

ಆರೋಪಿಗಳಾದ ಶಿವಪ್ರಸಾದ್, ಚೇತನ್, ಮಂಜುನಾಥ್, ವಿಶ್ವನಾಥ, ಮಲ್ಲಿಕಾರ್ಜುನ, ಬದರೀನಾಥ ಮತ್ತು ಮಂಜುನಾಥ್ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು, ಅವರ ವಿರುದ್ಧ ರೌಡಿಶೀಟರ್ ತೆರೆದು ಅವರ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ. ಶಾಂತಿ ಕದಡಿದರೆ ಗಡೀಪಾರು ಮಾಡುತ್ತೇವೆ ಎಂದು ಅವರು ಹೇಳಿದರು.

  • No items.

Loading...
loading...
error: Content is protected !!