“ರೆಡ್ಮಿ ನೋಟ್ 5ಎ” ಇಂದು ಮಾರುಕಟ್ಟೆಗೆ – News Mirchi

“ರೆಡ್ಮಿ ನೋಟ್ 5ಎ” ಇಂದು ಮಾರುಕಟ್ಟೆಗೆ

ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುತ್ತಿರುವ ಜಿಯೋಮಿಯಿಂದ ಮತ್ತೊಂದು ನೂತನ ಸ್ಮಾರ್ಟ್ ಫೋನ್ ಇಂದು ಮಾರುಕಟ್ಟೆಗೆ ಬಿಡೆಗಡೆಯಾಗುತ್ತಿದೆ. “ರೆಡ್ಮಿ 4” ಸರಣಿ ಪ್ರಸಿದ್ಧವಾದ ನಂತರ “ರೆಡ್ಮಿ-5” ಸರಣಿಯಲ್ಲಿ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಲು ಜಿಯೋಮಿ ಸಿದ್ಧವಾಗಿದೆ. ಈ ಸರಣಿಯ ಭಾಗವಾಗಿ “ರೆಡ್ಮಿ ನೋಟ್ 5ಎ” ಅನ್ನು ಎರಡು ಬಣ್ಣಗಳಲ್ಲಿ ಇಂದು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದಾಗಿ ತಿಳಿದು ಬಂದಿದೆ.

ಕಳೆದ ವಾರದಲ್ಲಿಯೇ “ರೆಡ್ಮಿ ನೋಟ್ 5ಎ” ಸ್ಮಾರ್ಟ್ ಫೋನ್ ಅನ್ನು ಆಗಸ್ಟ್ 21 ರಂದು ಬಿಡುಗಡೆ ಮಾಡುವುದಾಗಿ ಜಿಯೋಮಿ ಹೇಳಿತ್ತು ಸದ್ಯ ಇದು ಚೀನಾ ಮಾರುಕಟ್ಟೆಗೆ ಮಾತ್ರ ಬಿಡುಗಡೆಯಾಗುತ್ತಿದ್ದು, ಇನ್ನು ಕೆಲ ದಿನಗಳಲ್ಲಿ ಭಾರತಕ್ಕೂ ಕಾಲಿಡಲಿದೆ.

ಅಂದಾಜುಗಳ ಪ್ರಕಾರ ರೆಡ್ಮಿ ನೋಟ್ 5ಎ ಫೀಚರ್ಸ್ ಹೀಗಿವೆ….
5.5 ಇಂಚಿನ ಹೆಚ್.ಡಿ 720ಪಿ ಡಿಸ್ ಪ್ಲೇ
ಆಂಡ್ರಾಯ್ಡ್ 7.1.1 ನೌಗಟ್ ಆಪರೇಟಿಂಗ್ ಸಿಸ್ಟಂ
ಬೇಸಿಕ್ ಮಾಡಲ್:
ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 424 ಎಸ್ಒಸಿ
2 ಜಿಬಿ ರ್ಯಾಮ್, 16 ಜಿಬಿ ಸ್ಟೋರೇಜ್, 128 ಜಿಬಿ ವರೆಗೂ ವಿಸ್ತರಿಸಬಲ್ಲ ಸಾಮರ್ಥ್ಯ, 16 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ, 5 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ
3080mAh ಬ್ಯಾಟರಿ ಸಾಮರ್ಥ್ಯ
ಬೆಲೆ ಅಂದಾಜು ರೂ.10,000/-

ಟಾಪ್ ಮಾಡಲ್:
ಆಕ್ಟಾ ಕೋರ್ ಸ್ನಾಪ್ ಡ್ರ್ಯಾಗನ್ 435 ಎಸ್ಒಸಿ
3 ಜಿಬಿ ಮತ್ತು 4 ಜಿಬಿ ರ್ಯಾಮ್ ಗಳಲ್ಲಿ ಲಭ್ಯ
16 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ
32 ಜಿಬಿ ಮತ್ತು 64 ಜಿಬಿ ಸ್ಟೋರೇಜ್, 128 ಜಿಬಿ ವರೆಗೂ ವಿಸ್ತರಿಸಬಲ್ಲ ಸಾಮರ್ಥ್ಯ
ಬೆಲೆ ಅಂದಾಜು ರೂ.11,500 ಮತ್ತು ರೂ.14,500

Loading...